
ಕೊರಟಗೆರೆ ತಾಲೂಕಿನ ೬೨ ಕೆರೆಗಳಿಗೆ ಎತ್ತಿನಹೊಳೆ ನೀರು ಹರಿಸುವ ಕಾಮಗಾರಿಗಳ ಚಾಲನೆ ತಾಲ್ಲೂಕಿನ ಇತಿಹಾಸ ಪುಟ ಸೇರಿದೆ ಎಂದು ಗೃಹ ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.
ಅವರು ಕೊರಟಗೆರೆ ತಾಲ್ಲೂಕಿನ ಪ್ರಸಿದ್ದ ಸ್ಥಳ ಗೊರವನಹಳ್ಳಿಯಲ್ಲಿ ಸುಮಾರು ೪೫೩ ಕೋಟಿ ರೂಗಳ ಕಾಮಗಾರಿಗಳ ಉದ್ಘಾಟನೆ ಶಂಕುಸ್ಥಾಪನೆಗಳನ್ನು ನೆರವೇರಿಸಿ ಮಾತನಾಡಿ ೨೦೦೮ ರಲ್ಲಿ ನಾನು ಕೊರಟಗೆರೆ ಕ್ಷೇತ್ರಕ್ಕೆ ಚುನಾವಣೆಗೆ ಬಂದಾಗ ಕೊಡ್ಲಹಳ್ಳಿಯ ಒಬ್ಬ ರೈತ ಮಹಿಳೆ ನನ್ನನು ಈ ಭಾಗಕ್ಕೆ ನೀರು ಹರಿಸುವಂತೆ ಕೋರಿದ್ದರು ನಾನು ಅಂದು ಆಕೆಗೆ ಮಾತು ನೀಡಿ ಚುನಾವಣೆಯಲ್ಲಿ ಗೆದ್ದಾಗ ಸರ್ಕಾರ ಬರಲ್ಲಿಲ್ಲ, ೨೦೧೩ ರಲ್ಲಿ ನಾನು ಈ ಕ್ಷೇತ್ರದಲ್ಲಿ ಸೋತೆ ಸರ್ಕಾರ ಬಂತು ಆದರೆ ನಾನು ಸರ್ಕಾರದ ಭಾಗವಾಗಲ್ಲಿಲ್ಲ ಅದರೂ ಎರಡು ವರ್ಷವಾದ ನಂತರ ನಾನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಈ ಭಾಗದ ಜನರಿಗೆ ಎತ್ತಿನಹೊಳೆ ಯೋಜನೆಯನ್ನು ರೂಪಿಸಿ ೬೫೦೦ ಸಾವಿರ ಕೋಟಿ ಮಂಜೂರು ಮಾಡಿಸಲಾಯಿತು ಎಂದರು.
೨೦೨೩ ರಲ್ಲಿ ನಮ್ಮ ಸರ್ಕಾರ ಬಂದ ಮೇಲೆ ಎತ್ತಿನಹೊಳೆ ಯೊಜನೆಗೆ ಬದ್ದರಾಗಿದ್ದು ೨೪ ಟಿ.ಎಂ.ಸಿ ನೀರಿನ ಈ ಯೋಜನೆಯಲ್ಲಿೆ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಭಾಗದ ಜನರಿಗೆ ನೀರು ಹರಿಸಲಾಗುತ್ತದೆ, ಈ ಭಾರಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿ ಎತ್ತಿನಹೊಳೆ ಯೋಜನೆಯಲ್ಲಿ ಕೊರಟಗೆರೆ ತಾಲ್ಲೂಕಿನ ೬೨ ಕೆರೆಗಳು ಮಧುಗಿರಿ ತಾಲ್ಲೂಕಿನ ೪೮ ಕೆರೆಗಳಿಗೆ ನೀರು ಹರಿಸಲು ತಲಾ ೨೮೫ ಕೋಟಿ ಮತ್ತು ೨೮೦ ಕೋಟಿ ರೂಗಳನ್ನು ಸಣ್ಣ ನೀರಾವರಿ ಇಲಾಖೆಗೆ ಮಂಜೂರು ಮಾಡಿದ್ದು ಇದ್ದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಮತ್ತು ಇದನ್ನು ಉದ್ಘಾಟಿಸಿದ ಸಣ್ಣ ನೀರಾವರಿ ಸಚಿವರ ಬೋಸುರಾಜು ರವರಿಗೆ ಧನ್ಯವಾದ ತಿಳಿಸಿದರು.
ಕೊರಟಗೆರೆ ತಾಲ್ಲೂಕು ಕ್ಷೇತ್ರದ ಪುರವಾರ ಹೋಬಳಿಯ ೮ ಕೆರೆಗಳಿಗೆ ನೀರು ಹರಿಯಲಿದ್ದು ಕೋರ ಹೊಬಳಿಯ ಬೆಳ್ಳಾವಿ-ಕೊರ ಲೈನ್ ಯೋಜನೆಯಲ್ಲಿ ೩೬ ಕೆರೆಗಳಿಗೆ ನೀರು ಹರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಅದನ್ನು ಶೀಘ್ರವಾಗಿ ಮಂಜೂರು ಮಾಡಿಸಲಾಗುವುದು. ಕೊರಟಗೆರೆ ೬೨ ಕೆರೆಗಳಿಗೆ ನೀರು ಹರಿಸಲು ಈ ಯೋಜನೆಯಲ್ಲಿ ೮೨೬ ಎಂಸಿಎಪ್‌ಟಿ ನೀರನ್ನು ಅಲೋಕೇಷನ್ ಮಾಡಿಕೊಳ್ಳಲಾಗಿದ್ದು ನೀರಾವರಿ ಯೋಜನೆ ಸರ್ಕಾರದ ಅದ್ಯತೆ ಎಂದರು.
ಸಣ್ಣನೀರಾವರಿ ಸಚಿವ ಬೋಸುರಾಜು ಮಾತನಾಡಿ ಡಾ.ಜಿ.ಪರಮೇಶ್ವರ ರವರ ಗೃಹ ಇಲಾಖೆಂ ಬಹಳ ದೊಡ್ಡ ಜವಾಬ್ದಾರಿ ಇಲಾಖೆಯಾಗಿದೆ, ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಹಳ ನಂಬಿಕೆ ಇಟ್ಟು ಈ ಜವಾಬ್ದಾರಿಯನ್ನು ಡಾ.ಜಿ.ಪರಮೇಶ್ವರರಿಗೆ ಒಪ್ಪಿಸಿ ನೀಡಿದ್ದಾರೆ ಈ ಜಿಲ್ಲೆಗೆ ಸಾವಿರಾರು ಕೋಟಿ ಅನುಧಾನ ತಂದಿದ್ದಾರೆ ನನ್ನ ಇಲಾಖೆಯ ೨೮೮ ಕೋಟಿ ವಿಶೇಷ ಹಣ ಡಾ.ಜಿ.ಪರಮೇಶ್ವರ ಶ್ರಮವಹಿಸಿ ಮಂಜೂರು ಮಾಡಿದ್ದಾರೆ, ಈ ಭಾಗದಲ್ಲಿ ಅಂತರಜಲ ಕಡಿಮೆ ಇದ್ದು ೮೦೦ ರಿಂದ ೧೦೦೦ ಅಡಿಗಳ ಅವರಿಗೆ ಕೊಳವೆಬಾವಿಗೆ ನೀರು ಸಿಗಬಹುದಾದ ಪರಿಸ್ಥಿತಿಯಲ್ಲಿ ೬೨ ಕೆರೆಗಳಿಗೆ ನೀರು ಹರಿಯುವುದರಿಂದ ಅಂತರಜಲ ಸಂಪೂರ್ಣ ವೃದಿಯಾಗುತ್ತದೆ ಇದರೊಂದಿಗೆ ಗೃಹ ಸಚಿವರು ನನ್ನ ಇಲಾಖೆಯಿಂದ ೮೬ ಹೆಚ್ಚುವರಿಯಾಗಿ ಕೊಳವೆಬಾವಿಯನ್ನು ಮಂಜೂರು ಮಾಡಿಸಿಕೊಂಡಿದ್ದಾರೆ ಈ ರಾಜ್ಯದಲ್ಲಿ ಮುಖ್ಯಮತ್ರಿಗಳ ನಂಬಿಗಸ್ಥರಲ್ಲಿ ಡಾ.ಜಿ.ಪರಮೇಶ್ವರ ಮೊದಲಿಗರು ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಮತ್ತು ತುಮುಲ್ ಅದ್ಯಕ್ಷ ವೆಂಕಟೇಶ್, ಸಣ್ಣ ನೀರಾವರಿ ಕಾರ್ಯದರ್ಶಿ ರಾಘವನ್, ಮುಖ್ಯಇಂಜಿಯರ್ ಶ್ರೀ ಹರಿಪ್ರಕಾಶ್, ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾ ಪಂಚಾಯಿತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಪೋಲೀಸ್ ವರಿಷ್ಠಾಧಿಕಾರಿ ಅಶೋಕ್, ಅಪಾರ ಜಿಲ್ಲಾಧಿಕಾರಿ ತಿಪ್ಪೆಸ್ವಾಮಿ, ಮೂಡ್ಲಗಿರಿ, ಜಿಲ್ಲಾ ಗ್ಯಾರೆಂಟಿ ಸಮಿತಿ ಅದ್ಯಕ್ಷ ಚಂದ್ರಶೇಖರಗೌಡ, ಉಪವಿಭಾಗಾಧಿಕಾರಿ ಘೋಟೂರು ಶಿವಪ್ಪ, ತಹಶೀಲ್ದಾರ್ ಮಂಜುನಾಥ್, ಇಓ ಅಪೂರ್ವ, ನೀರಾವರಿ ಅದೀಕ್ಷಕ ಸಂಜೀವರಾಯಪ್ಪ, ತಿಪ್ಪೇಸ್ವಾಮಿ, ರಮೇಶ್, ಸೇರಿದಂತೆ ಇತರರು ಹಾಜರಿದ್ದರು.