ಬ್ರಾಂಡ್ ಬೆಂಗಳೂರು
Trending

ನೋಡ್ತಾಯಿರಿ… RCB ಸತತ 5 ಕಪ್ ಗೆಲ್ಲುತ್ತೆ..!

IPL 2025: ಐಪಿಎಲ್ ಸೀಸನ್-18 ಮಾರ್ಚ್ 22 ರಿಂದ ಶುರುವಾಗಲಿದೆ. ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಟೂರ್ನಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ. ಈ ಮೂಲಕ ಪಂದ್ಯದ ಮೂಲಕ ಆರ್​ಸಿಬಿ ಶುಭಾರಂಭ ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ.17 ವರ್ಷಗಳು… ಒಂದೇ ಒಂದು ಕಪ್ ಗೆದ್ದಿಲ್ಲ… ಪ್ರತಿ ಸೀಸನ್​ನಲ್ಲೂ ಲೆಕ್ಕಾಚಾರ… ಕೊನೆಗೆ ನೋವಿನ ವಿದಾಯ. ಆದರೆ ಈ ಬಾರಿ ಹಾಗೆ ಆಗುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಜಿತೇಶ್, ನಮ್ಮ ತಂಡವು ಈ ಬಾರಿ ತುಂಬಾ ಬಲಿಷ್ಠವಾಗಿದೆ. ದೇಶೀಯ ಮತ್ತು ಅಂತರರಾಷ್ಟ್ರೀಯ ಅನುಭವ ಹೊಂದಿರುವ ಆಟಗಾರರು ತಂಡದಲ್ಲಿದ್ದಾರೆ.ಭುವನೇಶ್ವರ್ ಕುಮಾರ್, ಕೃನಾಲ್ ಪಾಂಡ್ಯ ಮತ್ತು ಸುಯಶ್ ಅವರಂತಹ ಆಟಗಾರರು ತಂಡದಲ್ಲಿದ್ದಾರೆ. ಹಾಗೆಯೇ ಯಶ್ ದಯಾಳ್ ಅವರಂತಹ ಬಲಿಷ್ಠ ಭಾರತೀಯ ಬೌಲರ್‌ಗಳನ್ನು ಹೊಂದಿದ್ದೇವೆ. ಅತ್ತ ಲಿಯಾಮ್ ಲಿವಿಂಗ್​ಸ್ಟೋನ್, ಫಿಲ್ ಸಾಲ್ಟ್ ಅವರಂತಹ ಅತ್ಯುತ್ತಮ ವಿದೇಶಿ ಆಟಗಾರರು ಸಹ ತಂಡದಲ್ಲಿದ್ದಾರೆ. ಹೀಗಾಗಿ ಈ ಬಾರಿಯ ಆರ್​ಸಿಬಿ ತಂಡವು ಉತ್ತಮ ಸಮತೋಲನದಿಂದ ಕೂಡಿದೆ ಎನ್ನಬಹುದು. ಹಾಗಾಗಿ ಈ ಬಾರಿ ಆರ್​ಸಿಬಿ ತಂಡದಿಂದ ಕಪ್ ಅನ್ನು ನಿರೀಕ್ಷಿಸಬಹುದು ಎಂದು ಜಿತೇಶ್ ಶರ್ಮಾ ಹೇಳಿದ್ದಾರೆ.ಇನ್ನು ಆರ್​ಸಿಬಿ ಲೀಗ್​ ಹಂತದಲ್ಲಿ ಆಡಲಿರುವ 14 ಪಂದ್ಯಗಳಲ್ಲಿ 11 ಮ್ಯಾಚ್​ಗಳನ್ನು ನಾನೇ ಗೆಲ್ಲಿಸಿಕೊಡಬೇಕೆಂದು ಬಯಸುತ್ತೇನೆ. ಇನ್ನು ಮೂರು ಪಂದ್ಯಗಳನ್ನು ಲಿಯಾಮ್ ಲಿವಿಂಗ್​ಸ್ಟೋನ್ ಗೆಲ್ಲಿಸಲಿ. ಈ ಮೂಲಕ ಲೀಗ್​ ಹಂತದಲ್ಲೇ ಆರ್​ಸಿಬಿ ತಂಡದ ಪಾರುಪತ್ಯವನ್ನು ಎದುರು ನೋಡುತ್ತಿರುವುದಾಗಿ ಜಿತೇಶ್ ಶರ್ಮಾ ಹೇಳಿದ್ದಾರೆ.ಮಾತು ಮುಂದುವರೆಸಿದ ಜಿತೇಶ್ ಶರ್ಮಾ, ನಾವು ಈವರೆಗೆ ಟ್ರೋಫಿ ಗೆದ್ದಿಲ್ಲ ಎಂಬುದು ನಿಜ. ಆದರೆ ಒಮ್ಮೆ ನಾವು ಕಪ್ ಗೆಲ್ಲಲಿ… ಆ ಬಳಿಕ ಸತತ 5 ಟ್ರೋಫಿಗಳನ್ನು ಗೆಲ್ಲಲಿದ್ದೇವೆ ಎಂಬ ವಿಶ್ವಾಸವನ್ನು ಸಹ ವ್ಯಕ್ತಪಡಿಸಿದ್ದಾರೆ.ಅಂದಹಾಗೆ ಜಿತೇಶ್ ಶರ್ಮಾ ಕಳೆದ ಸೀಸನ್​ನಲ್ಲಿ ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿದಿದ್ದರು. ಈ ವೇಳೆ 14 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಅವರು ಒಟ್ಟು 142 ಎಸೆತಗಳನ್ನು ಎದುರಿಸಿ ಕಲೆಹಾಕಿದ್ದು ಕೇವಲ 187 ರನ್​ಗಳು ಮಾತ್ರ.ಇನ್ನು ಐಪಿಎಲ್​ನಲ್ಲಿ ಈವರೆಗೆ 40 ಪಂದ್ಯಗಳಲ್ಲಿ ಕಾಣಿಸಿಕೊಂಡಿರುವ ಅವರು ಒಟ್ಟು 730 ರನ್​ ಗಳಿಸಿದ್ದಾರೆ. ಇದಾಗ್ಯೂ ಅವರ ಬ್ಯಾಟ್​ನಿಂದ ಒಂದೇ ಒಂದು ಅರ್ಧಶತಕ ಮೂಡಿಬಂದಿಲ್ಲ.ಇದೀಗ ಆರ್​ಸಿಬಿ ತಂಡದ ಪಾಲಾಗಿರುವ ಜಿತೇಶ್ ಶರ್ಮಾ ಈ ಬಾರಿಯ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫಿನಿಶರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಅವರೇ ಹೇಳಿದಂತೆ 11 ಪಂದ್ಯಗಳಲ್ಲಿ ಜಯ ತಂದುಕೊಡಲಿದ್ದಾರಾ ಕಾದು ನೋಡಬೇಕಿದೆ.



Related Articles

Leave a Reply

Your email address will not be published. Required fields are marked *

Back to top button