ಇತ್ತೀಚಿನ ಸುದ್ದಿ
Trending

ಪುರಸಭೆ ಸದಸ್ಯನ ಮಗ ರಾಜ್ಯಕ್ಕೆ ಟಾಪರ್ ಬ್ರಿಲಿಯಂಟ್ ಶಾಲಾ ವಿದ್ಯಾರ್ಥಿ ಗಗನಸಿಂಗ್ ರಾಜ್ಯಕ್ಕೆ ೫ನೇ ರ್‍ಯಾಂಕ್

ತಾಳಿಕೋಟಿ, ಪಟ್ಟಣದ ಮೈಲೇಶ್ವರ ಕ್ರಾಸ್‌ನಲ್ಲಿರುವ ಶ್ರೀ ಮಾರುತಿ ಶಿಕ್ಷಣ ಸಂಸ್ಥೆಯ ಬ್ರಿಲಿಯಂಟ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ಗಗನಸಿಂಗ್ ಮೂಲಿಮನಿ ಎಸ್.ಎಸ್.ಎಲ್.ಸಿ.ಪರಿಕ್ಷೆಯಲ್ಲಿ ೬೨೫ಕ್ಕೆ ೬೨೧(೯೯.೩೬) ಅಂಕಗಳಿಸುವದರೊಂದಿಗೆ ರಾಜ್ಯಕ್ಕೆ ೫ ರ್‍ಯಾಂಕ್ ಪಡೆದು ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾನೆ.ಪಟ್ಟಣದ ಪುರಸಭಾ ಸದಸ್ಯ ಜೈಸಿಂಗ್ ಮೂಲಿಮನಿ ಅವರ ಪುತ್ರನಾಗಿರುವ ಗಗನಸಿಂಗ್ ಪ್ರಾಥಮಿಕ ಶಿಕ್ಷಣದಿಂದ ಪ್ರೌಢ ಶಿಕ್ಷಣದವರೆಗೂ ಬ್ರಿಲಿಯಂಟ್ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದು ಎಸ್.ಎಸ್.ಎಲ್.ಸಿ. ಪರಿಕ್ಷೆಯಲ್ಲಿ ವಿಷಯವಾರು ಕನ್ನಡಕ್ಕೆ ೧೨೫ಕ್ಕೆ ೧೨೫ ಅಂಕ, ಸಮಾಜ ವಿಜ್ಞಾನ ೧೦೦ಕ್ಕೆ ೧೦೦, ಹಿಂದಿ ೧೦೦ಕ್ಕೆ ೧೦೦, ಗಣಿತ ೧೦೦ಕ್ಕೆ ೯೯, ವಿಜ್ಞಾನ ೧೦೦ಕ್ಕೆ ೯೯, ಇಂಗ್ಲೀಷ ೧೦೦ಕ್ಕೆ ೯೮ ಅಂಕಗಳನ್ನು ಗಳಿಸಿದ್ದು ಈ ವಿದ್ಯಾರ್ಥಿಯ ಸಾಧನೆಯಿಂದ ಶಾಲೆಯಲ್ಲಿ ಹಾಗೂ ವಿದ್ಯಾರ್ಥಿಯ ಮನೆಯಲ್ಲಿ ಸಂತಸ ಮನೆ ಮಾಡಿದೆ.

ವಿದ್ಯಾರ್ಥಿಯ ಸಾಧನೆಯನ್ನು ಮೇಚ್ಚಿರುವ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದದವರು ವಿದ್ಯಾರ್ಥಿಗೆ ಸನ್ಮಾನಿಸಿ ಗೌರವಿಸುವದರೊಂದಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದರು.

ಪ್ರಾಥಮಿಕ ಹಂತದಿಂದಲೂ ಬ್ರಿಲಿಯಂಟ್ ಶಾಲೆಯಲ್ಲಿ ನೀಡಿದ ಭೋದನಾ ಕೌಶಲ್ಯ ಮತ್ತು ಶಿಕ್ಷಕರ ಮಾಡಿದ ಉತ್ತಮ ಭೋದನೆ ಅದರ ಜೊತೆಗೆ ನನ್ನ ತಂದೆ ಜೈಸಿಂಗ್ ಅವರು ಹಿಂದೆ ಉತ್ತಮ ಗುರುಗಳಿದ್ದಾರೆ ಮುಂದೆ ನಮಗೆ ಗುರಿ ಎಂಬುದು ಇರಬೇಕು ಎಂಬ ತಿಳುವಳಿಕೆ ಈ ಸಾಧನೆಗೆ ಕಾರಣವಾಗಿದೆ. ಇಂದಿನ ತತಂತ್ರಜ್ಞಾನದ ಯುಗದಲ್ಲಿ ಪಿಯುಸಿ ಸಾಯಿನ್ಸ್‌ದೊಂದಿಗೆ ಜೆಇಇ ಆಯ್ಕೆ ಮಾಡಿಕೊಳ್ಳುವ ಆಸಕ್ತಿಹೊಂದಿದ್ದೇನೆ.

ಗಗನಸಿಂಗ್ ಮೂಲಿಮನಿ ಸಾಧನೆಯ ಗುರಿಯೊಂದಿಗೆ ಬೆಳೆದು ಬಂದ ವಿದ್ಯಾರ್ಥಿಯಾಗಿದ್ದಾನೆ ರಾಜ್ಯಕ್ಕೆ ಪ್ರಥಮ ಸ್ಥಾನದೊಂದಿಗೆ ಗುರಿತಿಸಿಕೊಳ್ಳಬೇಕೆಂಬ ಬಯಕೆ ಅವನದ್ದಾಗಿತ್ತು ೪ ಅಂಕ ಕಡಿತಗೊಂಡಿದೆ ಆದರೂ ಮರು ಮೌಲ್ಯಮಾಪನದೊಂದಿಗೆ ತನ್ನ ಸಾಧನೆಯ ಗುರಿಯಕಡೆಗೆ ಶಿಕ್ಷಣ ಪಡೆಯಲಿದ್ದಾನೆ.

Related Articles

Leave a Reply

Your email address will not be published. Required fields are marked *

Back to top button