ಇರಕಲ್ಲಗಡದ ಈಶ್ವರ ಆಂಗ್ಲ ಮಾದ್ಯಮ ಶಾಲೆಗೆ 2025 ನೇ ಸಾಲಿನ ಉತ್ತಮ ಶಾಲೆ ಪ್ರಶಸ್ತಿ ಪ್ರದಾನ.

ಇತ್ತಿಚಿಗೆ ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲ್ಲೂಕಿನ ಇರಕಲ್ಲಗಡ ಯಲಮಗೇರಿ ಗ್ರಾಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಈಶ್ವರ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಮತ್ತ ಪ್ರೌಢ ಶಾಲೆಯು 2025 ನೇ ಸಾಲಿನ ಉತ್ತಮ ಶಾಲೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಶ್ರೀ ಈಶ್ವರ ಆಂಗ್ಲ ಮಾಧ್ಯಮ ವಿದ್ಯಾ ಸಂಸ್ಥೆಯು ಗ್ರಾಮೀಣ ಮಕ್ಕಳಿಗೆ ಮೌಲ್ಯ ಶಿಕ್ಷಣ ನೀಡುತ್ತಾ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದೆ. ಶಾಲೆಯು ಸುಸಜ್ಜಿತ ಕಟ್ಟಡ,ವಿಶಾಲವಾದ ಆಟದ ಮೈದಾನದೊಂದಿಗೆ ಪರಿಸರ ಶಾಲೆ ಎಂದು ಖ್ಯಾತಿ ಪಡೆದು ಉತ್ತಮ ಫಲಿತಾಂಶ ನೀಡುವಲ್ಲಿ ಸಂಸ್ಥಾಪಕರಾದ ನಾಗರಾಜ ಗುಡಿ ಮತ್ತು ಶಿಕ್ಷಕರ ಬಳಗ ಶ್ರಮಿಸುತ್ತಿದೆ. 1 ರಿಂದ 10 ನೇ ತರಗತಿಯವರೆಗೆ ಶಿಕ್ಷಣ ನೀಡುತ್ತಿದ್ದು ಜಿಲ್ಲೆಯ ಮಾದರಿ ಶಾಲೆಯಾಗಿ ಗುರುತಿಸಿಕೊಂಡಿದೆ.ಸುಮಾರು 15 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳ ಬದುಕು ರೂಪಿಸಿದ್ದು ಮೊದಲು ಈ ಶಾಲೆಯು ತಟ್ಟಿ ಶಾಲೆ ಎಂದು ಪ್ರಸಿದ್ಧಿಯಾಗಿತ್ತು.ಈ ವಿದ್ಯಾ ಸಂಸ್ಥೆಯ ಅಂಗಳದಲ್ಲಿ ನವೋದಯ ಮತ್ತು ಮೊರಾರ್ಜಿಗಳಂತಹ ಪರೀಕ್ಷೆಗಳಿಗೂ ತರಬೇತಿ ನೀಡಲಾಗುತ್ತದೆ.ಗ್ರಾಮೀಣ ಮಕ್ಕಳಿಗೆ ಬಸ್ಸ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದ್ದು,ಮಕ್ಕಳ ವೈಯಕ್ತಿಕ ಕಾಳಜಿ, ಕ್ರೀಡೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡಿ ಮಕ್ಕಳಿಗೆ ಮೌಲ್ಯ ಶಿಕ್ಷಣ ನೀಡುವಲ್ಲಿ ಈ ಸಂಸ್ಥೆಯು ಶ್ರಮಿಸುತ್ತಿದೆ.
ಈಶ್ವರ ಆಂಗ್ಲ ಮಾಧ್ಯಮ ವಿದ್ಯಾ ಸಂಸ್ಥೆಯ ಶೈಕ್ಷಣಿಕ ಸೇವೆ ಹಾಗೂ ಕಾರ್ಯ ವೈಖರಿಯನ್ನು ಗುರುತಿಸಿ ರಾಯಚೂರಿನ ಕಲಾ ಸಂಕುಲ ಸಂಸ್ಥೆಯು 2025 ನೇ ಸಾಲಿನ ಉತ್ತಮ ಶಾಲೆ ಪ್ರಶಸ್ತಿಯನ್ನು ಪಂಡಿತ ಸಿದ್ದರಾಮ ಜಂಬಲದಿನ್ನಿ ಕಲಾ ಭವನದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ.ಪ್ರಶಸ್ತಿಯನ್ನು ಸಂಸ್ಥೆಯ ಸಂಸ್ಥಾಪಕರಾದ ನಾಗರಾಜ ಗುಡಿಯವರು ಗಣ್ಯರೊಂದಿಗೆ ಸ್ವೀಕರಿಸಿದ್ದಾರೆ.
ಕಾರ್ಯಕ್ರಮದಲ್ಲಿ ಖ್ಯಾತ ಬರಹಗಾರರಾದ ನಾಡೋಜ ಕುಂ.ವಿರಭದ್ರಪ್ಪನವರು, ನಟಿ ಮತ್ತು ಸಾಹಿತಿ ರಂಜಿನಿ ರಘುವನ್ , ವಿಧಾನ ಸಭಾ ಪರಿಷತ್ತು ಸದಸ್ಯರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಎ.ವಸಂತ ಕುಮಾರ, ಕಲಾ ಸಂಕುಲ ಸಂಸ್ಥೆಯ ಅಧ್ಯಕ್ಷ ರೇಖಾ ಬಡಿಗೇರ್, ಕೆಪಿಸಿಸಿ ಕಾರ್ಯದರ್ಶಿ ಅಸ್ಲಂ ಪಾಷಾ, ಕೆಪಿಸಿಸಿ ಮಹಿಳಾ ಉಪಾಧ್ಯಕ್ಷ ಶ್ರೀದೇವಿ ಆರ್.ಎ ನಾಯಕ, ಜೆಡಿಎಸ್ ಕಾರ್ಯದ್ಯಕ್ಷ ಶಿವ ಶಂಕರ ವಕೀಲ, ಒಪೆಕ್ ಆಸ್ಪತ್ರೆ ಡೀನ್ ಡಾ. ರಮೇಶ್ ಸಾಗರ, ಸಿದ್ದಗ೦ಗಾ ಕಾಲೇಜಿನ ನಿರ್ದೇಶಕ ಡಾ.ಜಯಂತ ಡಿ.ಎಸ್, ಅಯ್ಯಣ್ಣ ಎಡವಟ್ಟಿ, ಶಿವಾನಂದ ದಳವಾಯಿ, ಮಂಜು ನಾಥ,ಭೀಮಣ್ಣ ಮೂಲಿ,ಶರಣಬಸಪ್ಪ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.
ಉತ್ತಮ ಶಾಲೆ ಪ್ರಶಸ್ತಿಗೆ ಆಯ್ಕೆಯಾದ ಹಿನ್ನಲೆಯಲ್ಲಿ ಶಾಲಾ ಆಡಳಿತ ಮಂಡಳಿ,ಶಿಕ್ಷಕರ ಬಳಗ ಹಾಗೂ ಗ್ರಾಮಸ್ಥರು, ಪಾಲಕರು ಮತ್ತು ಮುದ್ದು ಮಕ್ಕಳು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.


