ಇತ್ತೀಚಿನ ಸುದ್ದಿ
Trending

ಸತತ ಎರಡು ಸೋಲಿನ ಬಳಿಕ ರಿಯಾನ್ ಪರಾಗ್ ಪೋಸ್ಟ್ ಮ್ಯಾಚ್ ವೇಳೆ ಏನು ಹೇಳಿದ್ರು ನೋಡಿ

ಬೆಂಗಳೂರು (ಮಾ. 25): ರಾಜಸ್ಥಾನ ರಾಯಲ್ಸ್ (Rajasthan Royals) ತಂಡವು 2025 ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ತನ್ನ ಮೊದಲ ಎರಡೂ ಪಂದ್ಯಗಳನ್ನು ಸೋಲುವ ಮೂಲಕ ಕೆಟ್ಟ ಆರಂಭ ಪಡೆದುಕೊಂಡಿದೆ. 2019 ರ ನಂತರ ತಂಡವು ತನ್ನ ಮೊದಲ ಎರಡು ಪಂದ್ಯಗಳನ್ನು ಗೆಲ್ಲಲು ವಿಫಲವಾಗಿರುವುದು ಇದೇ ಮೊದಲು. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ತನ್ನ ಎರಡನೇ ಪಂದ್ಯದಲ್ಲಿ ರಾಜಸ್ಥಾನ್ 8 ವಿಕೆಟ್‌ಗಳ ಸೋಲು ಅನುಭವಿಸಿತು. ತಂಡದ ಖಾಯಂ ನಾಯಕ ಸಂಜು ಸ್ಯಾಮ್ಸನ್ ಸಂಪೂರ್ಣವಾಗಿ ಫಿಟ್ ಆಗಿಲ್ಲದ ಕಾರಣ ಅವರ ಸ್ಥಾನದಲ್ಲಿ, ರಿಯಾನ್ ಪರಾಗ್ ಎರಡೂ ಪಂದ್ಯಗಳಲ್ಲಿ ನಾಯಕತ್ವ ವಹಿಸಿಕೊಂಡರು.

ರಾಜಸ್ಥಾನ್ ರಾಯಲ್ಸ್ ತಂಡದ ಹಂಗಾಮಿ ನಾಯಕ ರಿಯಾನ್ ಪರಾಗ್ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿ, ತಮ್ಮ ತಂಡವು ಕೆಕೆಆರ್ ವಿರುದ್ಧ 20 ರನ್ ಕಡಿಮೆ ಗಳಿಸಿದೆ ಎಂದು ಹೇಳಿದ್ದಾರೆ. ‘‘170 ರನ್‌ಗಳು ನಿಜವಾಗಿಯೂ ಉತ್ತಮ ಸ್ಕೋರ್ ಆಗಿದೆ, ಇದು ನಮ್ಮ ಟಾರ್ಗೆಟ್ ಆಗಿತ್ತು. ವಿಕೆಟ್ ಬಗ್ಗೆ ತಿಳಿದುಕೊಂಡು ನಾನು ವೈಯಕ್ತಿಕವಾಗಿ ಸ್ವಲ್ಪ ಆತುರಪಟ್ಟೆ. 20 ರನ್‌ಗಳಷ್ಟು ಶಾರ್ಟ್ ಆಯಿತು. ಡಿಕಾಕ್ ಅವರನ್ನು ಬೇಗನೆ ಔಟ್ ಮಾಡುವುದು ನಮ್ಮ ಯೋಜನೆಯಾಗಿತ್ತು, ಆದರೆ ಅದು ಆಗಲಿಲ್ಲ. ಅವರು ನಿಜವಾಗಿಯೂ ಚೆನ್ನಾಗಿ ಆಡಿದರು, ಅವರಿಗೆ ಅಭಿನಂದನೆ ಹೇಳಬೇಕು’’.ಕಳೆದ ಋತುವಿನಲ್ಲಿ ರಿಯಾನ್ ಪರಾಗ್ ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ್ದರು ಆದರೆ ಈ ಬಾರಿ ಅವರು ಮೂರನೇ ಸ್ಥಾನದಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಇದರ ಬಗ್ಗೆ ಕೇಳಿದಾಗ, ‘‘ಕಳೆದ ವರ್ಷ ತಂಡವು ನನ್ನನ್ನು 4 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಬೇಕೆಂದು ಬಯಸಿತ್ತು, ನಾನು ಅದನ್ನು ಸಂತೋಷದಿಂದ ಮಾಡಿದೆ. ಈ ವರ್ಷ ಅವರು ನನ್ನನ್ನು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕೆಂದು ಬಯಸಿದ್ದಾರೆ, ಹೀಗಾಗಿ ತಂಡದ ಪರವಾಗಿ ನಾನು ಎಲ್ಲಿ ಬೇಕಾದರೂ ಬ್ಯಾಟಿಂಗ್ ಮಾಡಲು ಸಿದ್ದನಿದ್ದೇನೆ’’ ಎಂದು ಹೇಳಿದ್ದಾರೆ.

ಕಳೆದ ಋತುವಿಗೆ ಹೋಲಿಸಿದರೆ, ರಿಯಾನ್ ಪರಾಗ್ ತಮ್ಮ ತಂಡವು ಈ ಬಾರಿ ಚಿಕ್ಕದಾಗಿದೆ ಎಂದು ಹೇಳಿದ್ದಾರೆ. ‘‘ಈ ವರ್ಷ ನಮ್ಮ ತಂಡವು ಕಳೆದ ವರ್ಷಕ್ಕಿಂತ ಚಿಕ್ಕದಾಗಿದೆ. ಈಗ ನಾವು ಉತ್ತಮ ಪಂದ್ಯ ಆಡುವ ಸಮಯ ಬಂದಿದೆ ಮತ್ತು ಮುಂದಿನ ದಿನಗಳಲ್ಲಿ ಫಲಿತಾಂಶವು ನಮ್ಮ ಪರವಾಗಿ ಬರುತ್ತದೆ. ನಾವು ಕಲಿಯುತ್ತೇವೆ, ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತೇವೆ, ಇವುಗಳು ಪುನರಾವರ್ತಿಸದಂತೆ ಎಚ್ಚರವಹಿಸುತ್ತೇವೆ ಮತ್ತು ಚೆನ್ನೈಗೆ ಹೊಸ ಮನಸ್ಥಿತಿಯಲ್ಲಿ ಹೋಗುತ್ತೇವೆ’’ ಎಂದು ಹೇಳಿದರು.ಈ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ 9 ವಿಕೆಟ್‌ಗೆ 151 ರನ್ ಗಳಿಸಿತು. ರಾಜಸ್ಥಾನ ಪರ ಧ್ರುವ್ ಜುರೆಲ್ ಅತಿ ಹೆಚ್ಚು 33 ರನ್ ಗಳಿಸಿದರು. ಮೊಯಿನ್ ಅಲಿ, ವರುಣ್ ಚಕ್ರವರ್ತಿ, ವೈಭವ್ ಅರೋರಾ ಮತ್ತು ಹರ್ಷಿತ್ ರಾಣಾ ತಲಾ ಎರಡು ವಿಕೆಟ್ ಪಡೆದರು. ಡಿ ಕಾಕ್ (97) ಅವರ ಆಟದ ಬಲದಿಂದ ಹಾಲಿ ಚಾಂಪಿಯನ್ ಕೋಲ್ಕತಾ ತಂಡ ಸುಲಭವಾಗಿ ಗುರಿಯನ್ನು ತಲುಪಿತು. ಆರ್‌ಆರ್ ಪರ ವನಿಂದು ಹಸರಂಗ ಒಂದು ವಿಕೆಟ್ ಪಡೆದರು.

Related Articles

Leave a Reply

Your email address will not be published. Required fields are marked *

Back to top button