
ತಾಳಿಕೋಟಿ, ನಗರದ ಮತ್ತು ಹೊರವಲಯದಲ್ಲಿ ಇತ್ತಿಚಗೆ ಮುಗ್ಧ, ವಯಸ್ಸಾದವರನ್ನು ಕಳ್ಳರು ಟಾರ್ಗೆಟ್ ಮಾಡಿ ಅವರ ಕೊರಳಲ್ಲಿರುವ ಮತ್ತು ಕೈಯಲ್ಲಿರುವ ಬಂಗಾರದ ಆಭರಣಗಳನ್ನು ನೋಡಿ ಅವರನ್ನು ನಿಲ್ಲಿಸಿ ಅವರಿಗೆ ನಾನಾ ರೀತಿಯಾಗಿ ವಂಚಿಸಿ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗುತ್ತಿರುವ ಪ್ರಕರ್ಣಗಳು ಹೆಚ್ಚಾಗುತ್ತಾ ಸಾಗಿದ್ದರಿಂದ ಸೋಮವಾರರಂದು ಪಟ್ಟಣದ ಎಸ್.ಕೆ.ಪಧವಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಎನ್.ಎಸ್.ಎಸ್, ಎನ್.ಸಿ.ಸಿ ಹಾಗೂ ಭಾರತ ಸ್ಕೌಟ್ & ಗೈಡ್ ಮತ್ತು ಕ್ರೀಡಾಪಟುಗಳಿಗೆ ಪೊಲೀಸ್ ಠಾಣೆಯಲ್ಲಿ ತೆರೆದ ಮನೆ ಕಾರ್ಯಕ್ರಮದ ಮೂಲಕ ಜಾಗೃತಿ ಮೂಡಿಸಲಾಯಿತು.
ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿ.ಎಸ್.ಆಯ್.ಆರ್.ಎಸ್.ಭಂಗಿ ಅವರು ಮಾತನಾಡಿ ಕಳ್ಳರು ಮುಗ್ದರನ್ನೇ ಟಾರ್ಗೇಟ್ ಮಾಡುತ್ತಿರುವ ಪ್ರಕರ್ಣಗಳು ಹೆಚ್ಚಾಗುತ್ತಿವೆ ಆಭರಣ ಹಾಕಿಕೊಂಡವರು ದಾರಿಯಲ್ಲಿಕಂಡರೆ ನಾವು ಕ್ರೈಂ ಪೊಲೀಸ್ ನವರು ಅಂತ ಹೇಳಿ ಆಭರಣಗಳನ್ನು ಬಿಚ್ಚಿಸಿ ಕೈಯಲ್ಲಿ ಹಿಡಿದುಕೊಳ್ಳುವಷ್ಟರಲ್ಲಿಯೇ ಕಸಿದುಕೊಂಡು ಹೋಗಿರುವ ಪ್ರಕರ್ಣಗಳು ಬೆಳಕಿಗೆ ಬಂದಿವೆ ಈ ರೀತಿ ಬಂಗಾರದ ಆಭರಣಗಳನ್ನು ಹೊರಗಡೆ ಹಾಕಿಕೊಂಡು ತಿರುಗಾಡುವುದು ಸರಿಯಲ್ಲ ಯಾರಾದರೂ ಕಸಿದುಕೊಂಡು ಹೋಗುವ ಸಾಧ್ಯತೆಗಳು ಇರುತ್ತವೆ ಬಂಗಾರದ ಸಾಮಾನುಗಳನ್ನು ತೆಗೆದು ಜೋಪಾನವಾಗಿ ಇಟ್ಟುಕೊಳ್ಳಿ ಮತ್ತು ಮನೆಯಲ್ಲಿರುವ ಹಿರಿಯರಿಗೂ ಸಹ ಜಾಗೃತಿ ಮೂಡಿಸಿರಿ ಎಂದ ಪಿ.ಎಸ್.ಆಯ್.ಭಂಗಿ ಅವರು ಕೊರಳ್ಳಲಿರುವ ಬಂಗಾರದ ಆಭರಣಗಳನ್ನ ತೆಗೆಯಿಸಿ ಒಂದು ಚೀಟಿಯಲ್ಲಿ ಕಟ್ಟಿಸಿ ಅವರ ಗಮನವನ್ನು ಬೇರೆ ಕಡೆ ಸೆಳೆದು ಮತ್ತೊಂದು ಚೀಟಿಯನ್ನ ಅವರ ಕೈಯಲ್ಲಿ ಕೊಟ್ಟು ಜೋಪಾನವಾಗಿ ಇಟ್ಟುಕೊಳ್ಳಿ ಅಂತ ತಿಳಿಸಿ, ಬಂಗಾರದ ಸಾಮಾನುಗಳನ್ನು ಕಳ್ಳರು ತೆಗೆದುಕೊಂಡು ಹೋಗುತ್ತಿದ್ದು ಅಂತವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಅಲ್ಲದೇ ಈಗ ಬೇಸಿಗೆಕಾಲ ಇರೋದ್ರಿಂದ ಕಳ್ಳತನ, ಮನೆಗಳ್ಳತನ, ಕರೆಂಟ್ ಮೋಟಾರ್ ಪಂಪಸಟ್ ಗಳು, ಮೋಟಾರ್ ಸೈಕಲ್ ಕಳ್ಳತನ ಹಾಗೂ ಇತರೆ ಕಳ್ಳತನ ಪ್ರಕರಣಗಳು ಹೆಚ್ಚಾಗಿ ಜರುಗುತ್ತಿದ್ದು ಇಂತಹ ಕಳ್ಳತನ ಪ್ರಕರಣಗಳು ಜರುಗದಂತೆ ಮುಂಜಾಗ್ರತೆಯಿಂದ ಇರಬೇಕೆಂದು ತಿಳುವಳಿಕೆ ನೀಡಿದ ಅವರು ಮನೆಗಳಿಗೆ ಮತ್ತು ಅಂಗಡಿಗಳಿಗೆ ಕಡ್ಡಾಯವಾಗಿ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಬೇಕು ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ಅಥವಾ ರಾತ್ರಿ ಸಮಯದಲ್ಲಿ ಹಗಲು ಸಮಯದಲ್ಲಿ ಸಂಶಯ ರೀತಿಯಲ್ಲಿ ಅಪರಿಚಿತ ವ್ಯಕ್ತಿಗಳು ತಿರುಗಾಡುವದು ಕಂಡು ಬಂದಲ್ಲಿ ಪೊಲೀಸ್ ಠಾಣೆಗೆ ಅಥವಾ ೧೧೨ ವಾಹನಕ್ಕೆ ಕರೆ ಮಾಡಿ ತಿಳಿಸಿ ಕಳ್ಳತನ ಪ್ರಕರ್ಣಗಳನ್ನು ತಡೆಗಟ್ಟಲು ಸಹಕರಿಸಬೇಕೆಂದು ತಿಳಿಸಿದರಲ್ಲದೇ ಪೋಸ್ಕೋ ಕಾಯ್ದೆಯ ಬಗ್ಗೆ, ಸೈಬರ್ ಕ್ರೈಂ, ರಸ್ತೆ ಸುರಕ್ಷತಾ ನಿಯಮದ ಬಗ್ಗೆ ತಿಳುವಳಿಕೆ ನೀಡಿದರು.
ಈ ಸಮಯದಲ್ಲಿ ಎಸ್.ಕೆ.ಪಧವಿ ಕಾಲೇಜಿನ ಎನ್. ಎಸ್. ಎಸ್ ಘಟಕ-೧ರ ಅಧಿಕಾರಿಗಳಾದ ಡಾ. ಅಜೇಯ ಅಬ್ಬಾರ, ಎನ್. ಎಸ್. ಎಸ್ ಘಟಕ-೧ರ ಅಧಿಕಾರಿಗಳಾದ ಮಿಸ್ ಈರಮ್ಮ ಲಕ್ಕಪ್ಪಗೋಳ್, ಭಾರತ ಸ್ಕೌಟ್ & ಗೈಡ್ ಅಧಿಕಾರಿಗಳಾದ ಡಾ. ಅಶೋಕ ರಾಠೋಡ, ಎನ್.ಸಿ.ಸಿ ಅಧಿಕಾರಿಗಳಾದ ಡಾ. ರಾಘವೇಂದ್ರ ಮಿಸ್ಕಿನ್, ಪೋಲೀಸ್ ಸಿಬ್ಬಂದಿಗಳಾದ ಎಂ.ಎಲ್.ಪಟ್ಟೇದ, ಸಂಜೀವ ಜಾಧವ, ದೇವು ಕನ್ನೋಳ್ಳಿ, ರೀಯಾನಾ ಚಿತ್ತರಗಿ, ಬಸವರಾಜ ದೊಡಮನಿ, ಬಸವರಾಜ ಬಲಕಲ್ಲ, ಮೊದಲಾದವರು ಇದ್ದರು.
ಅಪರಾಧ ತಡೆಗಟ್ಟಲು ಪೊಲೀಸ್ ಇಲಾಖೆಯಿಂದ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಸಾಗಿದ್ದರೂ ಕೂಡಾ ಕಳ್ಳರು ಹೊಸ ಹೊಸ ದಾರಿ ಹಿಡಿಯುತ್ತಾ ಜನರನ್ನು ವಂಚಿಸುತ್ತಾ ಸಾಗಿರುವ ಪ್ರಕರ್ಣಗಳು ಬೆಳಕಿಗೆ ಬರುತ್ತಿವೆ ಇಂತಹ ಕಳ್ಳತನ ಪ್ರಕರ್ಣಗಳನ್ನು ತಡೆಗಟ್ಟಲು ಜನರು ಪೊಲೀಸ್ರೊಂದಿಗೆ ವಂಚಕರ ಬಗ್ಗೆ ಅಪರಿಚಿತ ವ್ಯಕ್ತಿಗಳ ಬಗ್ಗೆ ಮಾಹಿತಿ ಸಿಕ್ಕಲ್ಲಿ ನೇರವಾಗಿ ಸಂಪರ್ಕಿಸಿ ಮಾಹಿತಿ ವದಗಿಸಿ ಅಪರಾಧ ಪ್ರಕರ್ಣಗಳನ್ನು ತಡೆಗಟ್ಟಲು ಸಹಕರಿಸಬೇಕು –ಆರ್.ಎಸ್.ಭಂಗಿ



