ಇತ್ತೀಚಿನ ಸುದ್ದಿ
Trending

ಉಚಿತ ಪಠ್ಯ ಪುಸ್ತಕ ವಿತರಣೆ ಪುಸ್ತಕದಲ್ಲಿಯ ಜ್ಞಾನ ಮಸ್ತಕಕ್ಕೇರಲಿ

ಸರ್ಕಾರವು ವಿದ್ಯಾರ್ಥಿಗಳ ಜ್ಞಾನಾರ್ಜನೆಗಾಗಿ ಅನೇಕ ಸೌಲತ್ತುಗಳನ್ನು ಒದಗಿಸುತ್ತಾ ಸಾಗಿದೆ ಇದರ ಸದುಪಯೋಗ ಪಡೆದುಕೊಳ್ಳುವದರೊಂದಿಗೆ ಪುಸ್ತಕದಲ್ಲಿ ಜ್ಞಾನದ ಬಂದು ಮಸ್ತಕಕ್ಕೆ ಏರಿಸಿಕೊಳ್ಳುವದರೊಂದಿಗೆ ಸಾಧನೆಯ ಮೇಟ್ಟಿಲು ಹತ್ತಬೇಕೆಂದು ಶ್ರೀ ಸಂಗಮಾರ್ಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ(ಬಾವೂರ) ಅವರು ಹೇಳಿದರು.ಸೋಮವಾರರಂದು ಪಟ್ಟಣದ ಎಸ್.ಎಸ್.ವಿದ್ಯಾ ಸಂಸ್ಥೆಯಡಿಯಲ್ಲಿ ನಡೆಯುತ್ತಿರುವ ಶ್ರೀ ಬ್ರಹ್ಮಲಿಂಗೇಶ್ವರ ಪ್ರಾಥಮಿಕ ಶಾಲೆ ಹಾಗೂ ಶ್ರೀ ಸಂಗಮೇಶ್ವರ ಪ್ರೌಢ ಶಾಲಾ ಮಕ್ಕಳಿಗೆ ಸರ್ಕಾರದಿಂದ ಕೊಡಮಾಡಲಾದ ಉಚಿತ ಪಠ್ಯ ಪುಸ್ತಕಗಳ ವಿತರಣೆಗೆ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು ವಿದ್ಯಾರ್ಥಿಗಳು ಓದಿನಲ್ಲಿ ಆಸಕ್ತಿಹೊಂದಬೇಕು ಇಂದು ನೀಡಿರುವ ಜ್ಞಾನದ ಹೊತ್ತಿಗೆ ನಿಮ್ಮ ಮುಂದಿನ ಭವಿಷ್ಯ ರೂಪಿಸಲು ನಾಂದಿಯಾಗಲಿದೆ ಶಿಕ್ಷಕರು ಶಾಲೆಯಲ್ಲಿ ಮಾಡುವ ಪಾಠ ಭೋದನೆಯನ್ನು ಮರು ಅಧ್ಯಯನಕ್ಕಾಗಿ ಪಠ್ಯಗಳನ್ನು ಸರ್ಕಾರವು ಸಿದ್ದಪಡಿಸಿ ನೀಡುತ್ತಿದೆ ಸರ್ಕಾರದ ಜೊತೆಗೆ ಕೈಜೋಡಿಸುವಂತಹ ಕೆಲಸ ಎಸ್.ಎಸ್.ವಿದ್ಯಾ ಸಂಸ್ಥೆಯ ವತಿಯಿಂದಲೂ ಕೂಡಾ ಉಚಿತ ನೋಟ ಬುಕ್‌ಗಳನ್ನು ಎಲ್ಲ ವಿದ್ಯಾರ್ಥಿಗಳಿಗೆ ಪ್ರತಿವರ್ಷವೂ ನೀಡುತ್ತಾ ಬಂದಿದೆ ಅದರಂತೆ ಈ ವರ್ಷವೂ ಕೂಡಾ ಈ ಕಾರ್ಯ ನಡೆಯಲಿದೆ ವಿದ್ಯಾರ್ಥಿಗಳು ಓದಿನ ಅಭಿರುಚಿ ಬೆಳೆಸಿಕೊಳ್ಳುವದರೊಂದಿಗೆ ಉತ್ತಮ ಜ್ಞಾನವಂತರಾಗಿ ದೇಶದ ಉತ್ತಮ ಪ್ರಜೆಗಳಾಗಿ ಕಲಿಸಿದ ಶಾಲೆಗೆ ಪಾಲಕರಿಗೆ ಉತ್ತಮ ಹೆಸರು ತರುವಂತಹ ಕಾರ್ಯ ಮಾಡಬೇಕೆಂದರು.

ಇನ್ನೋರ್ವ ಎಸ್.ಎಸ್.ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಸಚೀನ ಪಾಟೀಲ ಅವರು ಮಾತನಾಡಿ ವಿದ್ಯಾರ್ಥಿಗಳ ಜ್ಞಾನಾರ್ಜನೆಗಾಗಿ ಸರ್ಕಾರವು ನೀಡಿರುವ ಪುಸ್ತಕದ ಸದುಪಯೋಗ ಪಡೆದುಕೊಳ್ಳುವಂತಹ ಕೆಲಸ ವಿದ್ಯಾರ್ಥಿಗಳು ಮಾಡಬೇಕು ಎಸ್.ಎಸ್.ವಿದ್ಯಾ ಸಂಸ್ಥೆಯ ವತಿಯಿಂದ ಸೀಘ್ರದಲ್ಲಿಯೇ ಉಚಿತವಾಗಿ ನೋಟಬುಕ್‌ಗಳನ್ನು ನೀಡುವಂತಹ ಕಾರ್ಯವು ನಡೆಯಲಿದೆ ಸಂಸ್ಥೆಯ ಅಧ್ಯಕ್ಷರಾದ ಎಚ್.ಎಸ್.ಪಾಟೀಲ ಅವರ ಜನ್ಮ ದಿನದ ನಿಮಿತ್ಯವಾಗಿ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಅನೇಕ ಸೌಲಭ್ಯಗಳನ್ನು ಒದಗಿಸುತ್ತಾ ಬಂದಿದ್ದು ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಂಡು ಶಾಲೆಯ ಕೀರ್ತಿ ಹೆಚ್ಚಿಸಬೇಕೆಂದರು.ಇದೇ ಸಮಯದಲ್ಲಿ ಶ್ರೀ ಬ್ರಹ್ಮಲಿಂಗೇಶ್ವರ ಪ್ರಾಥಮಿಕ ಶಾಲೆಯ ೫ ನೇ ತರಗತಿಯಿಂದ ೭ನೇ ತರಗತಿಯವರೆಗೆ ಹಾಗೂ ಶ್ರೀ ಸಂಗಮೇಶ್ವರ ಪ್ರೌಢ ಶಾಲೆಯ ೮ನೇ ತರಗತಿಯಿಂದ ೧೦ ನೇ ತರಗತಿಯವರೆಗಿನ ಮಕ್ಕಳಿಗೆ ಸರ್ಕಾರದಿಂದ ಕೊಡಮಾಡಲಾದ ಪಠ್ಯ ಪುಸ್ತಕಗಳನ್ನು ವಿತರಿಸಲಾಯಿತು.

ಪ್ರೌಢಶಾಲೆಯ ಶಿಕ್ಷಕ ಎಸ್.ವಿ.ಜಾಮಗೊಂಡಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಕಿರಣಗೌಡ ಪಾಟೀಲ, ಪ್ರೌಢಶಾಲೆಯ ಮುಖ್ಯಸ್ಥ ಅಶೋಕ ಕಟ್ಟಿ, ಪ್ರಾಥಮಿಕ ಶಾಲೆಯ ಮುಖ್ಯಸ್ಥ ಜೆ.ಎಮ್ ಕೊಣ್ಣೂರ, ಸಿಬ್ಬಂದಿಗಳಾದ ಬಿ.ಆಯ್.ಹಿರೇಹೊಳಿ, ಎಸ್.ವಿ.ಜಾಮಗೊಂಡಿ, ಎಸ್.ಸಿ.ಗುಡಗುಂಟಿ,

ಎಚ್.ಬಿ.ಪಾಟೀಲ, ಎಮ್.ಎಸ್.ರಾಯಗೊಂಡ, ಯು.ಎಚ್.ಗಟನೂರ, ಎಸ್.ಎಸ್.ಪಾಟೀಲ, ಎಮ್.ಎಸ್.ಬಿರಾದಾರ, ಎಸ್.ಬಿ.ಸಾಸನೂರ ಉಪಸ್ಥಿತರಿದ್ದರು.ಶಿಕ್ಷಕ ಬಿ.ಆಯ್.ಹಿರೇಹೊಳಿ ನಿರೂಪಿಸಿ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button