ಇತ್ತೀಚಿನ ಸುದ್ದಿ
Trending

ಪತ್ರಕರ್ತನ ಮೇಲೆ ಏಕಪಕ್ಷೀಯವಾಗಿ ಸುಳ್ಳು FIR ದಾಖಲು

ಬೆಂಗಳೂರು: ಸರ್ಕಾರಿ ಕೆಲಸದ ವೇಳೆ ವೈದ್ಯರು ಬೆಳಗ್ಗೆ 9:೦೦ ರಿಂದ ಸಂಜೆ 4:೦೦ ಗಂಟೆಯವರೆಗೆ ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಬೇರೆ ಸ್ಥಳಗಳಲ್ಲಿ ಪ್ರಾಕ್ಟೀಸ್ ಮಾಡುವಂತಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ
ಡಾ. ಶರಣು ಪ್ರಕಾಶ್ ಪಾಟೀಲ್ ರವರು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಇದರ ಸಂಬಂಧ ಈಗಾಗಲೇ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಮುಖ್ಯಸ್ಥರಿಗೆ ಅಧಿಸೂಚನೆ ಮೂಲಕ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಸೂಚಿಸಲಾಗಿದೆ. ಇನ್ನು ಮುಂದೆ ವೈದ್ಯರು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾದ ವೇಳೆ ನಾಲ್ಕು ಬಾರಿ ಬಯೋಮೆಟ್ರಿಕ್‌ಗೆ ತಮ್ಮ
ಹಸ್ತಮುದ್ರೆ ಹಾಕಬೇಕು. ಬೆಳಿಗ್ಗೆ 9:00, ಮಧ್ಯಾಹ್ನ 2. 3 ಮತ್ತು 4:00 ಗಂಟೆಗೆ ಕಡ್ಡಾಯವಾಗಿ ಹಸ್ತಮುದ್ರೆ ಹಾಕಬೇಕು. ಇದರ ಆಧಾರವಾಗಿಯೇ ಸಂಬಳವನ್ನು ನೀಡಲಾಗುವುದು. ಈ ಕುರಿತು ಮುಖ್ಯಸ್ಥರ ಜೊತೆ ಸಚಿವರು ಚರ್ಚಿಸಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಇತ್ತೀಚಿಗೆ ಕೆಲ ದಿನಗಳ ಹಿಂದೆ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಾಕ್ಟರ್ ಮೋಹನ್ ಎನ್‌ಎಸ್ ರವರ ವಿರುದ್ಧ ಪತ್ರಕರ್ತ ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರಚಾರ್ ರವರು ಸರ್ಕಾರಕ್ಕೆ ದೂರು ನೀಡಿದ್ದು ಸರಿಯಷ್ಟೇ, ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಸರ್ಕಾರಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾಕ್ಟರ್ ಮೋಹನ್ ಎನ್ ಎಸ್ ರವರು ಸರ್ಕಾರಿ ಕೆಲಸದ ಸಮಯದಲ್ಲಿ ಪ್ರೈವೇಟ್ ಆಸ್ಪತ್ರೆ ಅಂದರೆ ( ಪ್ರಲಾಕ್ಷ ಆಸ್ಪತ್ರೆಗೆ ) ಹೋಗಿ ಅಲ್ಲಿನ ರೋಗಿಗಳಿಗೆ ಚಿಕಿತ್ಸೆ ನೀಡಿರುವುದು ನಮ್ಮ ಪತ್ರಿಕಾ ಸಿಬ್ಬಂದಿಯವರು ಡಾಕ್ಟರ್ ಮೋಹನ್ ರವರ ಹತ್ತಿರವೇ ಚಿಕಿತ್ಸೆ ಪಡೆದು ಚಿತ್ರೀಕರಿಸಿಕೊಂಡು ಎಲ್ಲಾ ದಾಖಲೆಗಳೊಂದಿಗೆ ಬಂದಿರುತ್ತಾರೆ.

ಸಚಿವರು ನೀಡಿದ ಪತ್ರಿಕಾ ಹೇಳಿಕೆಯಂತೆ, ದಿನಾಂಕ: 08-09-2025 ರಂದು ಪತ್ರಕರ್ತ ಹಾಗೂ ಸಾಮಾಜಿಕ ಕಾರ್ಯಕರ್ತ ರಾಘವೇಂದ್ರಚಾರ್ ರವರು ಸಚಿವರಿಂದ ಹಿಡಿದು ಎಲ್ಲಾ ಮೇಲಾಧಿಕಾರಿಗಳಿಗೆ ಮೋಹನ್ ಎನ್‌ಎಸ್ ರವರ ವಿರುದ್ಧ ದೂರು ದಾಖಲಿಸಿರುತ್ತಾರೆ. ಇದರ ಬೆನ್ನಲ್ಲೇ ಡಾ.ಮೋಹನ್ ಅವರ ಬೆಂಬಲಿಗರು ರಾಘವೇಂದ್ರಚಾರ್ ರವರ ಮೇಲೆ ಒತ್ತಡ ಹೇರಿ, ದೂರನ್ನು ಹಿಂಪಡೆಯುವಂತೆ ಬೆದರಿಕೆಯೂ ಕೂಡ ಒಡ್ದಿರುತ್ತಾರೆ. ಇದಕ್ಕೆ ಪತ್ರಕರ್ತ ಯಾವುದಕ್ಕೂ ಜಗ್ಗದೆ ತಾನು ನೀಡಿರುವ ದೂರಿನ ಸಂಬಂಧ ಮೇಲಾಧಿಕಾರಿಗಳಿಗೆ ಇಮೇಲ್ ಮುಖಾಂತರ ತಾವುಗಳು ತೆಗೆದುಕೊಂಡಿರುವ ಕ್ರಮದ ( Action taken report ) ಬಗ್ಗೆ ದಾಖಲೆ ನೀಡುವಂತೆ ಕೇಳಿರುತ್ತಾರೆ. ಆದರೆ, ಸಂಜಯ್ ಗಾಂಧಿ ಆಸ್ಪತ್ರೆಯ ಮೇಲಾಧಿಕಾರಿಗಳಿಂದ ಪತ್ರಕರ್ತನಿಗೆ ಯಾವುದೇ ರೀತಿಯ ಉತ್ತರ ಬಂದಿರುವುದಿಲ್ಲ. ಈ ಸುಳ್ಳು ಎಫ್ ಐ ಆರ್ ನ ಸಂಬಂಧ ರಾಜ್ಯದ ಪತ್ರಕರ್ತ ಸಂಘಟನೆಗಳ ಒಕ್ಕೂಟ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವುದು ನಿಶ್ಚಿತ.

  • ಅಕ್ರಮವೆಸಗುತ್ತಿರುವ ಡಾ.ಮೋಹನ್ ಎನ್ ಎಸ್ ರವರ ವಿರುದ್ಧ ಒಬ್ಬ ಪತ್ರಕರ್ತ ಸರ್ಕಾರಕ್ಕೆ ದೂರು ಕೊಟ್ಟಿದ್ದೆ ತಪ್ಪಾ..?
    • ಸರ್ಕಾರಿ ಅಧಿಕಾರಿಗಳು ಯಾವುದಾದರು ಅಕ್ರಮವೆಸಗಿದ್ದರೆ ಅದರ ಬಗ್ಗೆ ದೂರು ನೀಡುವುದಾದರೂ ಯಾರಿಗೆ..?
    • ಅಕಸ್ಮಾತ್ ದೂರು ನೀಡಿದರೆ ಅವರ ವಿರುದ್ಧವೇ ಸುಳ್ಳು FIR ದಾಖಲಾಗುತ್ತದೆ..?
    • ಇದೇ ವಿಚಾರಕ್ಕೆ ಸಂಬಂಧಿಸಿದಂತೆ ತಿಲಕ್ ನಗರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಪ್ರಾಮಾಣಿಕ ಹಾಗೂ ನಿಷ್ಠಾವಂತ ಪತ್ರಕರ್ತ ರಾಘವೇಂದ್ರಚಾರ್ ಅವರ ಮೇಲೆ ಸುಳ್ಳು FIR ಮಾಡಿರುವುದು ಎಷ್ಟು ಸರಿ..?
    • FIR ನಲ್ಲಿ ನಮೂದಿಸಿರುವ ಅಂಶಗಳ ತಿಳಿಸುತ್ತೆ ಇದು ಸುಳ್ಳು (ಫ್ಯಾಬ್ರಿಕೇಟೆಡ್) ಅಂತ.?
    • ಇನ್ಸ್ಪೆಕ್ಟರ್ ವಿಶ್ವನಾಥ್ ರವರೇ ಯಾವ ಮೇಲಾಧಿಕಾರಿಗಳು ತಮಗೆ ಎಫ್‌ ಐ ಆರ್ ಹಾಕುವಂತೆ ಒತ್ತಾಯಿಸಿದರು..? ಅವರ ಹೆಸರೇನು,..! ಹಿರಿಯ ಪೊಲೀಸ್ ಅಧಿಕಾರಿಯೇ..! ಅಥವಾ ರಾಜಕಾರಣಿಗಳೇ..!
    • ಇನ್ಸ್ಪೆಕ್ಟರ್ ವಿಶ್ವನಾಥ್ ರವರೇ ಎಫ್ ಐ ಆರ್ ಕಾಪಿ ಸಂಪೂರ್ಣವಾಗಿ ತಾವು ಓದಿದ್ದೀರಾ..?
      *ಯಾರ ಒತ್ತಡಕ್ಕೆ ಮಣಿದು ತಾವು ಪ್ರಾಮಾಣಿಕ ಪತ್ರಕರ್ತನ ಮೇಲೆ ಸುಳ್ಳು FIR ಮಾಡಿದ್ದೀರಾ..? ಇದು ಎಷ್ಟರ ಮಟ್ಟಿಗೆ ಸರಿ…!!
    • ಡಿಜಿ ಮತ್ತು ಐಜಿ ಸಲೀಮ್ ರವರು ತಿಲಕ್ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವಿಶ್ವನಾಥ್ ರವರನ್ನು ಅಮಾನತು ಮಾಡಲಿದ್ದಾರೆಯೇ…!

Related Articles

Leave a Reply

Your email address will not be published. Required fields are marked *

Back to top button