ಇತ್ತೀಚಿನ ಸುದ್ದಿ
Trending

ಮಳಿಗೆ ಹರಾಜು ಮುಂದೂಡಿಕೆ |ಜಿಲ್ಲಾಧಿಕಾರಿಗಳಿಗೆ ನಾಗರಿಕರಿಂದ ದೂರು

ಪಟ್ಟಣದ ಪುರಸಭೆ ವತಿಯಿಂದ ಸಮುದಾಯ ಆರೋಗ್ಯ ಕೇಂದ್ರದ ಎದುರಿಗಿರುವ ಅವಧಿ ಮುಗಿದ 51 ಮಳಿಗೆಗಳ ಹರಾಜು ಪ್ರಕ್ರಿಯೆಯನ್ನು ದಿ.18 ರಂದು ನಿಗದಿಪಡಿಸಲಾಗಿತ್ತು. ಮೊದಲು ಬಾಡಿಗೆ ಇದ್ದ ಅಂಗಡಿಕಾರರೊಂದಿಗೆ ಶಾಮೀಲಾಗಿ ಹರಾಜು ಪ್ರಕ್ರಿಯೆಯನ್ನು ಪುರಸಭೆ ಮುಖ್ಯಾಧಿಕಾರಿಗಳು ಮುಂದೂಡಿದ್ದಾರೆಂದು ಮಳಿಗೆ ಹರಾಜಿನಲ್ಲಿ ಭಾಗವಹಿಸಿದ್ದ ಬಿಡ್‌ದಾರರು ಜಿಲ್ಲಾ ಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ದಿ.2 ರಂದು ಪುರಸಭೆಯಿಂದ ಹೊರಡಿಸಿದ ಪ್ರಕಟಣೆಯಲ್ಲಿ ಕಾಲಂ 4 ರಲ್ಲಿ ಮಳಿಗೆ ಹರಾಜಿನಲ್ಲಿ ಅಂಗಡಿ ಪಡೆದ ಬಿಡ್‌ದಾರರು ತಮ್ಮ ಇತ್ತೀಚಿನ ಭಾವಚಿತ್ರ, ತಮ್ಮ ಆಸ್ತಿ ಉತಾರೆ, ಆಧಾರ ಕಾರ್ಡ್ ಹಾಗೂ ಮತದಾರರ ಗುರುತಿನ ಚೀಟಿ ಝರಾಕ್ಸ್ ಪ್ರತಿಗಳನ್ನು ಪೂರೈಸಬೇಕೆಂದು ನಮೂದಿಸಲಾಗಿದೆ. ಬಿಡ್‌ದಾರರು ನೇರ ವಾರಸುದಾರರು, ಅಂಗಡಿ ಬಾಡಿಗೆಗೆ ಬದ್ಧರಾಗಿರುತ್ತಾರೆ ಎಂದು ನಮೂದಿಸಿ ಪ್ರಕಟಿಸಲಾಗಿದೆ. ಈ ಕುರಿತು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಠರಾವು ಕೂಡ ಆಗಿಲ್ಲ, ಜಿಲ್ಲಾಧಿಕಾರಿಗಳಿಂ ಸರ್ಕಾರದಿಂದಾಗಲಿ ಅಥವಾ ಪೌರಾಡಳಿತ ನಿರ್ದೇಶಕರಿಂದಲೂ, ಕೂಡ ಯಾವುದೇ ನಿರ್ದೇಶನವಿಲ್ಲ. ಹೀಗಿರುವಾಗ ಪೂರ್ವಕವಾಗಿಯೇ ಪುರಸಭೆ ಮುಖ್ಯಾಧಿಕಾರಿಗಳು ಉದ್ದೇಶ ಮೊದಲು ಬಾಡಿಗೆ ಹೊಂದಿರುವ ಅಂಗಡಿಕಾರರಿಂದ ಲಂಚ ಪಡೆದು, ಅವರೊಂದಿಗೆ ಶಾಮೀಲಾಗಿ ಉದ್ದೇಶ ಪೂರ್ವಕವಾಗಿ ದಿ.18 ರಂದು ನಿಗದಿಪಡಿಸಲಾದ ಮಳಿಗೆ ಹರಾಜು ಮುಂದೂಡಲು ಕಾರಣರಾಗಿದ್ದಾರೆ.

.18 ರಂದು ಪ್ರಾರಂಭಗೊಂಡ ಹರಾಜು ಪ್ರಕ್ರಿಯೆಯಲ್ಲಿ ಕಾಲಂ 24 ರಲ್ಲಿ ಅವೈಜ್ಞಾನಿಕವಾಗಿ ಸೇರಿಸಿದ ಷರತ್ತಿಗೆ ಪುರಸಭೆ ಮುಖ್ಯಾಧಿಕಾರಿಗಳೇ ಖುದ್ದಾಗಿ ಆ ಸಮಯದಲ್ಲಿ ತಕರಾರು ಮಾಡಲು ಹಚ್ಚಿ ಹರಾಜು ಪ್ರಕ್ರಿಯೆಯನ್ನು ಕ್ಷಣಾರ್ಧದಲ್ಲಿ

ತಾಳಿಕೋಟೆ: ಪುರಸಭೆ ಮುಖ್ಯಾಧಿಕಾರಿ ವಜಾಕ್ಕೆ ಆಗಹಿಸಿ ನಾಗರಿಕರು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದರು.

ಮುಂದೂಡಿಕೆ ಮಾಡುವುದರೊಂದಿಗೆ, ಆ ಸ್ಥಳದಿಂದ ಅವರೇ ಕಾಲ್ಕಿತ್ತಿ ಹೋಗಿದ್ದಾರೆ. ಇದರಿಂದ ಈ ಹಿಂದೆ ಬಾಡಿಗೆ ಇರುವ ಅಂಗಡಿಕಾರರಿಗೆ ಭಾರಿ ಪ್ರಮಾಣದ ಲಾಭ ಆಗಲಿದೆ. ಇದರ ಜತೆಗೆ ಪುರಸಭೆಗೆ ಬರಬೇಕಿದ್ದ ಕೋಟ್ಯಂತರ ರೂ. ರಾಜಸ್ವ ಸಂಗ್ರಹದ ನಷ್ಟಕ್ಕೆ ಕಾರಣೀಕರ್ತರಾಗಿರುತ್ತಾರೆ. ಅಂದು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಪುರಸಭೆಯಿಂದ ಹೊರಡಿಸಿದ ಪ್ರಕಟಣೆಯನ್ನು ಪ್ರತಿ ಬಿಡ್‌ದಾರರು 1 ಲಕ್ಷ ರೂ.ನಂತೆ 164 ಜನರು ಡಿ.ಡಿ. ತೆಗೆಸಿ ಪುರಸಭೆಗೆ ಕಟ್ಟಿ ಹರಾಜಿನಲ್ಲಿ ಭಾಗವಹಿಸಿದ್ದರು. ಇದರಲ್ಲಿ 110 ರಿಂದ 115 ಜನರು ಹೊಸ ಬಿಡ್ ದಾರರಾಗಿ ಅಂಗಡಿ ಬಾಡಿಗೆ ಹಿಡಿಯಬೇಕೆಂದು ಸಾಲ-ಸೂಲ ಮಾಡಿ ಹಣವನ್ನು ತಂದು ಕಟ್ಟಿದ್ದು, ಹೊಸ ಬಿಡೋದಾರರಿಗೆ ಅನ್ಯಾಯವೆಸಗುವಂತಹಕೆಲಸವನ್ನು ಮಾಡಿದ್ದಾರೆಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಲಾಗಿದೆ.ಸದ್ಯ ಈ 51 ಅಂಗಡಿಗಳಿಗೆ ಸರಾಸರಿ ಒಂದು ಅಂಗಡಿಗೆ 80 ಸಾವಿರದಿಂದ 1 ಲಕ್ಷ ರೂ.ವರೆಗೆ ವಾರ್ಷಿಕ ಬಾಡಿಗೆ ಇರುತ್ತದೆ. ಬಹಿರಂಗ ಹರಾಜಾದರೆ ವಾರ್ಷಿಕವಾಗಿ ಪುರಸಭೆಗೆ 3 ಲಕ್ಷ 50 ಸಾವಿರ
ರೂ.ನಿಂದ 4 ಲಕ್ಷ 50 ಸಾವಿರ ರೂ.ವರೆಗೆ ರಾಜಸ್ವ ಸಂಗ್ರಹಣೆಯಾಗುತ್ತದೆ. ಆದರೆ, ಮುಖ್ಯಾಧಿಕಾರಿಗಳು ಹರಾಜು ಪ್ರಕ್ರಿಯೇ ರದ್ದುಪಡಿಸಿ ಹಳೆಯ ಅಂಗಡಿಕಾರರೊಂದಿಗೆ ಶಾಮೀಲಾಗಿರುವುದರಿಂದ ವಾರ್ಷಿಕವಾಗಿ 51 ಅಂಗಡಿಗಳಿಂದ 1 ಕೋಟಿ 50 ಲಕ್ಷ ರೂ. ರಾಜಸ್ವ ಶುಲ್ಕದ ಹಾನಿಗೆ ಕಾರಣರಾಗಿದ್ದಾರೆ. ಮುಖ್ಯಾಧಿಕಾರಿಗಳು ತಮಗಿರುವ ಅಧಿಕಾರ ದುರ್ಬಳಿಕೆ ಮಾಡಿಕೊಂಡು ಪುರಸಭೆ ರಾಜಸ್ವದ ಹಾನಿಯ ಜತೆಗೆ ಹೊಸದಾಗಿ ಹರಾಜಿನಲ್ಲಿ ಭಾಗವಹಿಸಿದ ಮೋಸವೆಸಗುವಂತಹ ಕೆಲಸ ಮಾಡಿದ್ದು, ಕೂಡಲೇ ಈ ವಿಷಯವನ್ನು ಪರಿಶೀಲಿಸಿ ಅವರನ್ನು ಸೇವೆಯಿಂದಲೇ ವಜಾಗೊಳಿಸಬೇಕೆಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ. ನೂರಾರು ಜನರಿಗೆ

ಈ ವೇಳೆ, ನಾಗರಿಕರಾದ ಸಂದೀಪ ಬನ್ನಿ, ಸುಧೀರ ತಿವಾರಿ, ಸುರೇಶ ಹಜೇರಿ, ಅಮಿತ್ ಮನಗೂಳಿ, ಪಿಂಟು ಹಚೇರಿ, ಸೂರಜ ಹಜೇರಿ, ಸುರೇಶ ಎಂ.ಎಸ್., ರಮೇಶ ಗೌಡಗೇರಿ, ಎಸ್.ಬಿ.ಪಾಟೀಲ, ಮೊದಲಾದವರು ಇದ್ದರು.

Related Articles

Leave a Reply

Your email address will not be published. Required fields are marked *

Back to top button