ಇತ್ತೀಚಿನ ಸುದ್ದಿ
Trending

ನಷ್ಠದಲ್ಲಿದ್ದ ಬ್ಯಾಂಕ್ ಅಭಿವೃದ್ಧಿ ಆಗಿ ಸಾಲ ನೀಡುತ್ತಿದ್ದೇವೆ: ವೈಪಿ ರಾಜೇಗೌಡ

ಸಕಲೇಶಪುರ: ಕೆಲವು ವರ್ಷ ಬ್ಯಾಂಕ್ ನಷ್ಠ ದಲ್ಲಿದ್ದ ಕಾರಣ ಸಾಲ ಕೊಡಲಾಗುತ್ತಿರಲಿಲ್ಲ. ಈಗ ಬ್ಯಾಂಕ್ ಅಭಿವೃದ್ದಿಯತ್ತ ದಾಪುಗಾಲು ಹಾಕುತ್ತಿರುವುದರಿಂದ ಇಂದು ಐದು ಜನರಿಗೆ ಸಾಂಕೇತಿಕವಾಗಿ ಸಾಲ ಕೊಡುವುದಕ್ಕೆ ಮರುಚಾಲನೆ ನೀಡಿ ಲಾಗಿದೆ ಎ೦ದು PLD ಬ್ಯಾಂಕ್ ಅಧ್ಯಕ್ಷ ವೈಪಿ ರಾಜೇಗೌಡ ಯಡಕುಮರಿ ಹೇಳಿದರು ಸಕಲೇಶಪುರ ಗುರುವೇ ಗೌಡ ಕಲ್ಯಾಣ್ ಮಂಟಪದಲ್ಲಿ ನಡೆದ ಪ್ರಾಥಮಿಕ ಸಹಕಾರಿ ಕೃಷಿ ಹಾಗು ಗ್ರಾಮೀಣ ಬ್ಯಾಂಕ್ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು ಬ್ಯಾಂಕ್ ನಿಂದ ಹಣ ಪಡೆದು ಅಕಾಲಿಕ ಮರಣ ಹೊಂದಿದ ಸಾಲ ವಸೂಲಿ ಕಷ್ಠದ ಕೆಲಸವಾದ್ದರಿಂದ ಅಕ್ಟೋಬರ್ ತಿಂಗಳಿಂದ ಹೆಚ್ಚು ಮಾಡುವ ಯೋಜನೆಯನ್ನು ಜಾರಿ ಮಾಡಲಾಗುವುದು ಹಾಗು 850 ಜನರಿಗಿದ್ದ ಯಶಸ್ವಿನಿ ಕಾರ್ಡ್ 1430 ಜನರಿಗೆ ಒದಗಿಸುವ ಕೆಲಸ ಮಾಡಲಾಗುವುದು, ಸ್ವ ಸಹಾಯ ಸಂಘಗಳಿಗೂ ಬ್ಯಾಂಕ್ ವತಿಯಿಂದ ಸಾಲ ನೀಡುವ ಯೋಜನೆ ಜಾರಿಗೆ ತರಲಾಗುವುದು. ಬ್ಯಾಂಕಿನ ಹಣ ದುರುಪಯೋಗ ಮಾಡಿಕೊಂಡಿದ್ದ ಎರೆಡು ಜನರ ಮೇಲೆ ಕಾನೂನಾತ್ಮಕವಾಗಿ ಹಣ ವಾಪಾಸು ಪಡೆಯಲಾಗಿದೆ. ಎಂದರು. ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಕೆ.ಪಿ.ಕೃಷ್ಣೇಗೌಡರನ್ನು ಸನ್ಮಾನಿಸಿದರು.
ಸಭೆಯಲ್ಲಿ 24-25ನೇ ಸಾಲಿನ ಆಡಳಿತ ಮಂಡಳಿಯ ವರದಿ ಸಲ್ಲಿಸಿದರು.ವೇದಿಕೆಯಲ್ಲಿ ಉಪಾದ್ಯಕ್ಷ ವಳಲ ಹಳ್ಳಿ ವೀರೇಶ್ . ನಿರ್ದೇಶಕರುಗಳಾದ ಪ್ರೇಮಕುಮಾರ್. ವಿಜಯ್ ಕುಮಾರ್. HH ಉದಯ್ . ನಾಗನಹಳ್ಳಿ ವನಿತ. ಎಸ್ ಮಂಜುಳ. ಲೋಕೇಶ, ಜಯರಾಜ್.ನಾಗರಾಜ್ . ವೆದುನಂದನ್. ಲೀಲಾವತಿ . ಮನೋಜ್ ಕುಮಾರ್. ಹಿತೈಶಿ. ಜೊತೆಗೆ ಸರ್ವ ಸದಸ್ಯರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button