Country
Trending

ಇಂದು ಮಹತ್ವದ ಜಿಎಸ್‌ಟಿ ಮಂಡಳಿ ಸಭೆ.. ಈ ಸಭೆಗೆ ಏಕಿಷ್ಟು ಮಹತ್ವ?

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ 56 ನೇ ಸಭೆ ಇಂದು ರಾಷ್ಟ್ರ ರಾಜಧಾನಿಯಲ್ಲಿ ಆರಂಭವಾಗಲಿದ್ದು, ಸೆಪ್ಟೆಂಬರ್ 3 ರಿಂದ 4 ರವರೆಗೆ ಎರಡು ದಿನಗಳವರೆಗೆ ನಡೆಯಲಿದೆ. ಅನುಸರಣೆಯನ್ನು ಸರಳೀಕರಿಸುವ ಮತ್ತು ದಕ್ಷತೆಯನ್ನು ಹೆಚ್ಚಿಸುವ ಗುರಿ ಹೊಂದಿರುವ ಸರ್ಕಾರ, ಪ್ರಸ್ತುತ ಇರುವ ನಾಲ್ಕು ಜಿಎಸ್‌ಟಿ ಸ್ಲ್ಯಾಬ್‌ಗಳನ್ನು ಕೇವಲ ಎರಡಕ್ಕೆ ಇಳಿಸುವ ಮೂಲಕ ಪರೋಕ್ಷ ತೆರಿಗೆ ವ್ಯವಸ್ಥೆಯನ್ನು ಸುಗಮಗೊಳಿಸಲು ಮಂಡಳಿ ನಿರ್ಧರಿಸುವ ಸಾಧ್ಯತೆಗಳಿವೆ. ಹೀಗಾಗಿ ನಿರೀಕ್ಷೆಗಳು ಗರಿಗೆದರಿವೆ.

ಸರ್ಕಾರಿ ಮೂಲಗಳ ಪ್ರಕಾರ, ಕೇಂದ್ರ ಸರ್ಕಾರವು ಶೇ. 12 ಮತ್ತು ಶೇ. 28 ಜಿಎಸ್‌ಟಿ ದರಗಳನ್ನು ತೆಗೆದುಹಾಕಲು ಪ್ರಸ್ತಾಪಿಸಿದ್ದು, ಶೇ. 5 ಮತ್ತು ಶೇ. 18 ಜಿಎಸ್‌ಟಿ ದರಗಳನ್ನು ಮಾತ್ರ ಉಳಿಸಿಕೊಳ್ಳಲು ನಿರ್ಧರಿಸಿದೆ. ಈ ಉಪಕ್ರಮದ ಭಾಗವಾಗಿ ಶೇಕಡಾ 12 ರಷ್ಟು ತೆರಿಗೆ ಸ್ಲ್ಯಾಬ್‌ನ ಶೇಕಡಾ 99 ರಷ್ಟು ತೆರಿಗೆಯನ್ನು ಶೇಕಡಾ 5ರ ಸ್ಲಾಬ್​​ ಗೆ ತರುವ ಸಾಧ್ಯತೆಗಳಿವೆ. ಇನ್ನು ಶೇಕಡಾ 28 ರಷ್ಟು ತೆರಿಗೆ ಸ್ಲ್ಯಾಬ್‌ನಲ್ಲಿರುವ ಶೇಕಡಾ 90 ರಷ್ಟು ವಸ್ತುಗಳನ್ನು ಶೇಕಡಾ 18 ಕ್ಕೆ ಇಳಿಸಲು ಪ್ರಸ್ತಾಪಿಸಲಾಗಿದೆ ಎಂದು ಸರ್ಕಾರಿ ಮೂಲಗಳಿಂದ ಮಹತ್ವದ ಮಾಹಿತಿ ಲಭ್ಯವಾಗಿದೆ.

ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ದೀಪಾವಳಿಯಂದು ಜನರಿಗೆ ಬಹಳ ದೊಡ್ಡ ಉಡುಗೊರೆ ಸಿಗಲಿದೆ ಎಂದು ಘೋಷಿಸಿದ್ದರು. ಅವರ ಘೋಷಣೆಯ ಕೆಲವು ದಿನಗಳ ನಂತರ ಸರ್ಕಾರವು ಜಿಎಸ್‌ಟಿಯ ದೊಡ್ಡ ಸುಧಾರಣೆಗೆ ನಿರ್ಧಾರ ಕೈಗೊಂಡಿದೆ. ಆ ಬಳಿಕ ಈಗ ಜಿಎಸ್‌ಟಿ ಕೌನ್ಸಿಲ್ ಸಭೆ ನಡೆಯುತ್ತಿದೆ.

ಚೆನ್ನೈನಲ್ಲಿ ನಿರ್ಮಲಾ ಸೀತಾರಾಮನ್​ ಹೇಳಿದ್ದೇನು?: ಮಂಗಳವಾ ಚೆನ್ನೈನಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮುಂಬರುವ ಮುಂದಿನ ಪೀಳಿಗೆಯ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸುಧಾರಣೆಗಳು ತೆರಿಗೆ ಪ್ರಕ್ರಿಯೆಗಳನ್ನು ಮತ್ತಷ್ಟು ಸರಳಗೊಳಿಸುತ್ತದೆ ಮತ್ತು ಅನುಸರಣೆ ಹೊರೆಗಳನ್ನು ಕಡಿಮೆ ಮಾಡುತ್ತದೆ ಎಂದಿರುವ ಅವರು ವಿಶೇಷವಾಗಿ ಸಣ್ಣ ವ್ಯವಹಾರಗಳಿಗೆ ಇದು ದೊಡ್ಡ ಅನುಕೂಲವಾಗಲಿದೆ ಎಂದು ಬಣ್ಣಿಸಿದ್ದಾರೆ.

ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಗಳನ್ನು ಇಂದು ಮತ್ತು ನಾಳೆ ನಡೆಯಲಿರುವ ಕೌನ್ಸಿಲ್ ಸಭೆಯೊಂದಿಗೆ ಜಾರಿಗೆ ತರಲು ಯೋಜಿಸಲಾಗಿದೆ ಎಂದು ಸೀತಾರಾಮನ್ ಹೇಳಿದ್ದಾರೆ. ಮುಂಬರುವ ತಿಂಗಳುಗಳಲ್ಲಿ ಅನುಸರಣೆ ಹೊರೆಯಲ್ಲಿ ಮತ್ತಷ್ಟು ಕಡಿತವಾಗಲಿದೆ. ಇದು ಸಣ್ಣ ವ್ಯವಹಾರಗಳು ಅಭಿವೃದ್ಧಿ ಹೊಂದಲು ಸುಲಭವಾಗುತ್ತದೆ ಎಂದು ಅವರು ಬಣ್ಣಿಸಿದ್ದಾರೆ.ಮೂಲಗಳ ಪ್ರಕಾರ, ಶೇ. 28 ರ ಸ್ಲ್ಯಾಬ್‌ನಲ್ಲಿ ಇರಿಸಲಾಗಿರುವ ಗ್ರಾಹಕ ಸರಕುಗಳನ್ನು ಶೇ. 18 ರ ಸ್ಲ್ಯಾಬ್‌ಗೆ ಸ್ಥಳಾಂತರಿಸಲು ಪ್ರಸ್ತಾಪಿಸಲಾಗಿದೆ. ತಂಬಾಕು ಮತ್ತು ಪಾನ್ ಮಸಾಲಾದಂತಹ ಅಪಾಯಕಾರಿ ವಸ್ತುಗಳನ್ನು ಶೇ. 40 ರ ಹೊಸ ಸ್ಲ್ಯಾಬ್ ರೂಪಿಸಿ ತರಿಗೆ ವಿಧಿಸಲು ಪ್ರಸ್ತಾಪಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಆಗಸ್ಟ್ 21 ರಂದು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ರಚನೆಯ ಅಡಿಯಲ್ಲಿ ಶೇ. 12 ಮತ್ತು ಶೇ. 28 ರ ಸ್ಲ್ಯಾಬ್‌ಗಳನ್ನು ತೆಗೆದುಹಾಕಲು ಕೇಂದ್ರದ ಪ್ರಸ್ತಾಪಗಳಿಗೆ ಸಚಿವರ ಗುಂಪು (ಜಿಒಎಂ) ತನ್ನ ಬೆಂಬಲವನ್ನು ಘೋಷಿಸಿತ್ತು.

ಬಿಹಾರ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರ ಪ್ರಕಾರ, ಎರಡು ಸ್ಲ್ಯಾಬ್‌ಗಳನ್ನು ತೆಗೆದುಹಾಕುವ ಪ್ರಸ್ತಾಪವನ್ನು ಸಭೆಯಲ್ಲಿ ಚರ್ಚಿಸಲಾಯಿತು ಮತ್ತು ಸಾಮಾನ್ಯ ಬೆಂಬಲವನ್ನು ಪಡೆಯಲಾಯಿತು ಎಂದು ಹೇಳಿದ್ದರು.

Related Articles

Leave a Reply

Your email address will not be published. Required fields are marked *

Back to top button