ಇತ್ತೀಚಿನ ಸುದ್ದಿ
Trending

ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ನೂತನ ಕೊಠಡಿಗಳ ಉದ್ಘಾಟನೆ.

ಮಂಡ್ಯ ನಗರದ ಗುತ್ತಲು ನಗರದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಉರ್ದು ಶಾಲಾ ಕೊಠಡಿಗಳನ್ನು ಶಾಸಕರಾದ ರವಿಕುಮಾರ್ ಗೌಡ ಗಣಿಗ ರವರು ಇಂದು ಉದ್ಘಾಟನೆ ಮಾಡಿದರು.

ಹಲವು ವರ್ಷಗಳಿಂದ ಶಿಥಿಲವ ವ್ಯವಸ್ಥೆ ಯಲ್ಲಿ ಇದ್ದ ಶಾಲೆ ಕಟ್ಟಡದಲ್ಲಿ ಮಕ್ಕಳು ವಿದ್ಯಾಭ್ಯಾಸ ಕ್ಕೆ ತೊಂದರೆ ಉಂಟಾಗಿದ್ದು ಸ್ಚಾಮಿ ವಿವೇಕಾನಂದ ಯೋಜನೆ ಅಡಿಯಲ್ಲಿ ಶಾಲೆ ಯ ನೂತನ ಕಟ್ಟಡಗಳನ್ನ ನಿರ್ಮಿಸಿ ಇಂದು ಉದ್ಘಾಟನೆ ಗೊಳಿಸಲಾಯಿತು.

ಸರ್ಕಾರದಿಂದ 30 ಲಕ್ಷ ಹಣ ಬಿಡುಗಡೆ ಮಾಡಿ ಈ ಶಾಲಾ ಕಟ್ಟಡ ವನ್ನು ನಿರ್ಮಾಣ ಮಾಡಿದ್ದೇವೆ. ಸರ್ಕಾರಿ ಶಾಲೆಗಳನ್ನು ಉಳಿಸೋದು ಬಹಳ ಮುಖ್ಯ, ಪೋಷಕರು ಸರ್ಕಾರಿ ಶಾಲೆಗೆ ಸೇರಿಸದೆ ಲಕ್ಷ ಹಣ ಖರ್ಚು ಮಾಡಿ ಖಾಸಗಿ ಶಾಲೆಗೆ ಸೇರಿಸುತಿದ್ದಾರೆ.ಅಲ್ಪಸಂಖ್ಯಾತರು ಮಕ್ಕಳನ್ನು ಶಾಲೆ ಸೇರಿಸದೆ ದುಡಿಮೆಗೆ ಕಳುಹಿಸುತಿದ್ದಾರೆ ಎನ್ನುವ ದೂರು ಇದೆ ದಯವಿಟ್ಟು ಪೋಷಕರು ಮಕ್ಕಳನ್ನ ಶಾಲೆಗೆ ಸೇರಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡ್ಸಿ ಆ ಮಕ್ಕಳೆ ನಿಮಗೆ ಆಸ್ತಿ ಆಗುತ್ತಾರೆ, ಮಂಡ್ಯದಲ್ಲಿ ಅಬ್ದುಲ್ ಕಲಾಂ ವಸತಿ ಶಾಲೆಯನ್ನು ಮುಂದಿನ ದಿನಗಳಲ್ಲಿ ಮಾಡುತ್ತೇವೆ. ಐದು ಎಕರೆ ಜಾಗದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ತೆರೆಯಲು ಮುಂದಾಗಿದ್ದೆವೆ ಎಂದರು.

ಕಾರ್ಯಕ್ರಮದಲ್ಲಿ BEO ಮಹಾದೇವು, ಮೂಡ ಅಧ್ಯಕ್ಷರಾದ ನಹೀಮ್, ಪಾಪಣ್ಣ ಕಾಂಗ್ರೆಸ್ ಮುಖಂಡರು,ಶೈಲೇಂದ್ರ ಯುವ ಕಾಂಗ್ರೆಸ್ ಅಧ್ಯಕ್ಷ, ಮುಬಾರಕ್ ಪಾಷ, ಶಿವರಾಮೇಗೌಡ, ಸಯ್ಯದ್ ವಸೀಮ್, ಶಬ್ರಿನ್ ತಾಜ್, ರೇಷ್ಮಾ ಬಾನು ಇತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button