ಅರಣ್ಯ ಒತ್ತುವರಿ ಜಾಗವನ್ನು ತೆರುವು ಮಾಡುವ ನೆಪದಲ್ಲಿ ಬಡ ಕುಟುಂಬಗಳನ್ನು ಬೀದಿಗೆ ತರುವ ಕೆಲಸವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಾಡುತ್ತಿದ್ದಾರೆ.

ಹೊಸನಗರ: ಅರಣ್ಯ ಒತ್ತುವರಿ ತೆರವು ನೆಪದಲ್ಲಿ ಬಡ ಕುಟುಂಬಗಳನ್ನು ಬೀದಿಗೆ ತರುವ ಕೆಲಸ ಅರಣ್ಯ ಅಧಿಕಾರಿಗಳು ಮಾಡುತ್ತಿದ್ದಾರೆ.ಎಂದು ಮಾಜಿ ಶಾಸಕ ಹರತಾಳು ಹಾಲಪ್ಪ ಆಕ್ರೋಶ ವ್ಯಕ್ತ ಪಡಿಸಿದರು.ತಾಲೂಕಿನ ಎಂ. ಗುಡ್ಡೇಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಅರಳಿಕೊಪ್ಪ ಗ್ರಾಮದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಅರಣ್ಯ ಒತ್ತುವರಿ ಜಾಗವನ್ನು ತೇರುವ ನೆಪದಲ್ಲಿ ಬಡ ರೈತನ ಮನೆಯನ್ನು ದ್ವಂಸ ಮಾಡುವುದರ ಜೊತೆಗೆ ಮನೆಯಲ್ಲಿದ್ದ ಸಾಮಗ್ರಿಗಳನ್ನು ರಸ್ತೆಗೆ ಎಸೆದಿರುವುದನ್ನು ವಿರೋಧಿಸಿ ಮಾಜಿ ಸಚಿವ ಹರತಾಳು ಹಾಲಪ್ಪ ಅರಣ್ಯ ಇಲಾಖೆ ಕಚೇರಿಗೆ ತೆರಳಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.ನಂತರ ಮಾತನಾಡಿದ ಅವರು ಮನುಷ್ಯತ್ವ ಇರುವ ಯಾರೊಬ್ಬ ಅಧಿಕಾರಿಯು ಇಂತಹ ಕೆಲಸ ಮಾಡುವುದಿಲ್ಲ ಇಲ್ಲಿ ಮೇಲಧಿಕಾರಿಗಳ ಗಮನಕ್ಕೆ ತರದೆ ಎಫ್. ಐ ಆರ್.ದಾಖಲು ಮಾಡಲಾಗಿದೆ.ಇಲ್ಲಿನ ಅಧಿಕಾರಿಗಳು ಮಣ್ಣಿನ ಕಾನೂನಿಗೆ ವಿರುದ್ಧವಾಗಿ ನೆಡೆದುಕೊಳ್ಳುತ್ತಾರೆ.ಮಲೆನಾಡು ಭಾಗದಲ್ಲಿ ಪ್ರತಿಯೊಬ್ಬ ರೈತ ಬದಕಲು ಸಾಧ್ಯವಿಲ್ಲ.ಕೆಲ ಅಧಿಕಾರಿಗಳ ವರ್ತನೆ ನೋಡಿದರೆ ಕೆಲಸ ಜೊತೆಗೆ ದುಡ್ಡನ್ನು ಮಾಡಲು ಬಂದಿದ್ದಾರೆ ಎನ್ನುವಂತೆ ಭಾಸವಾಗುತಿದ್ದೆ.ಸ್ವಲ್ಪ ಸಮಯದವರೆಗೆ ಇವರನ್ನುಅಲ್ಲಿಯೇ ವಾಸಿಸಲು ಬಿಡುವಂತೆ ಮೇಲಧಿಕಾರಿಗಳಿಗೆ ಮನವಿ ಮಾಡಿದ್ದೇನೆ. ಅವರ ತೀರ್ಮಾನ ಬಳಿಕ ಏನು ಮಾಡಬೇಕೆಂಬದನ್ನು ನಿರ್ಧರಿಸಲಿದ್ದೇನೆ.ಎಂದರು.
ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಮತ್ತಿಮನೆ ಸುಬ್ರಮಣ್ಯ, ದೇವನಂದ.ಗಣಪತಿ ಬೆಳಗೋಡು,ಹಾಲಗದ್ದೆ ಉಮೇಶ್,ಮೋಹನ್ ಮಂಡನಿ ಅಭಿಲಾಷ್ ಹಿರೇಮಣತಿ,ಮನೋದರ್. ಉಪಸ್ಥಿತರಿದ್ದರು.


