ಇತ್ತೀಚಿನ ಸುದ್ದಿ
Trending

ಬೆಂಗಳೂರು ಕೆಂಪೇಗೌಡ ಏರ್‌ಪೋರ್ಟ್​​ನಲ್ಲಿ ಪ್ರಯಾಣಿಕರಿಗಾಗಿ ಹೊಸ ಸೇವೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ  (Kempegowda International Airport Bengaluru) ಸಾಕಷ್ಟು ಪ್ರಯಾಣಿಕರ ನೆಚ್ಚಿನ ಏರ್‌ಪೋರ್ಟ್​. ಪ್ರಯಾಣಿಕರಿಗಾಗಿ ಒಂದಿಲ್ಲೊಂದು ಸೇವೆಗಳನ್ನ ನೀಡುತ್ತಿದೆ. ಇದೀಗ ಮತ್ತೊಂದು ಸೇವೆ ನೀಡಲು ಕೆಂಪೇಗೌಡ ಏರ್‌ಪೋರ್ಟ್ ಮುಂದಾಗಿದೆ. ಅದೇನೆಂದರೆ,​ ಮಕ್ಕಳ‌ ಜೊತೆ ಬರುವ ಪ್ರಯಾಣಿಕರು ಮತ್ತು ಮಹಿಳೆಯರ ಅನುಕೂಲಕ್ಕೆ ನೂತನ ಟ್ರಾಲಿ ವ್ಯವಸ್ಥೆ (trolley system) ಮಾಡಲಾಗಿದೆ.

ಕೆಂಪೇಗೌಡ ಏರ್‌ಪೋರ್ಟ್​ಗೆ ನಿತ್ಯ ಲಕ್ಷಾಂತರ ಜನರು ಬರುತ್ತಾರೆ. ಪ್ರಯಾಣಿಕರು ತಮ್ಮ ಲಗೇಜ್ ಜೊತೆಗೆ ಮಕ್ಕಳನ್ನು ಕಡೆದುಕೊಂಡು ಹೊಗುವಲ್ಲಿ ಹೆಣಗಾಡುತ್ತಿದ್ದರು. ಈ ನಿಟ್ಟಿನಲ್ಲಿ  ಏರ್‌ಪೋರ್ಟ್ ಆಡಳಿತ ಮಂಡಳಿ ಪ್ರಯಾಣಿಕರು ಮತ್ತು ಮಹಿಳೆಯರ ಅನುಕೂಲಕ್ಕಾಗಿ ಲಗೇಜ್ ಜೊತೆಗೆ ಮಕ್ಕಳನ್ನ‌ ಕೂರಿಸಿಕೊಂಡು  ಹೋಗಲು ನೂತನ ಟ್ರಾಲಿ ವ್ಯವಸ್ಥೆಯನ್ನು ಆರಂಭಿಸಿದೆ.ಏರ್‌ಪೋರ್ಟ್​ನ ಟರ್ಮಿನಲ್ 01 ಮತ್ತು 02 ರಲ್ಲಿ ಕೆಐಎಬಿ ಬೇಬಿ ಕ್ಯಾರಿಯರ್ ಮತ್ತು ಹ್ಯಾಂಡ್ ಬ್ಯಾಗ್ ಟ್ರಾಲಿ ಸೇವೆಯನ್ನು ಆರಂಭಿಸಿದೆ. ನೂತನ ಟ್ರಾಲಿಯಲ್ಲಿ 2 ತಿಂಗಳಿನಿಂದ 4 ವರ್ಷದವರೆಗಿನ ಮಕ್ಕಳನ್ನ ಕೂರಿಸಿಕೊಂಡು ಹೋಗಬಹುದಾಗಿದೆ. ಇದು ಪುಟ್ಟ ಮಕ್ಕಳೊಂದಿಗೆ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಸದ್ಯ ಕೆಂಪೇಗೌಡ ಏರ್‌ಪೋರ್ಟ್ ಆಡಳಿತ ಮಂಡಳಿ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಅಂದಹಾಗೆ ಕೆಂಪೇಗೌಡ ಏರ್‌ಪೋರ್ಟ್​​ ವಿಮಾನ ನಿಲ್ಥಾಣಕ್ಕೆ ದೇಶ ವಿದೇಶಗಳಿಂದ ಪ್ರಯಾಣಿಕರು ಆಗಮಿಸುತ್ತಾರೆ. ಕಳೆದ ವರ್ಷ 20224ರಲ್ಲಿ 40 ಮಿಲಿಯನ್​ಗೂ ಅಧಿಕ ಪ್ರಯಾಣಿಕರು ಸಂಚರಿಸುವ ಮೂಲಕ ಹೊಸ ದಾಖಲೆ ಬರೆಯಲಾಗಿತ್ತು. ಕಳೆದ ವರ್ಷ ಜನವರಿ 01 ರಿಂದ ಡಿಸೆಂಬರ್ 31 ರ ಮಧ್ಯರಾತ್ರಿವರೆಗೂ ಒಟ್ಟು 4 ಕೋಟಿ 73 ಲಕ್ಷ ಪ್ರಯಾಣಿಕರು ಕೆಂಪೇಗೌಡ ಏರ್‌ಪೋರ್ಟ್​ನಿಂದ ದೇಶ ಹಾಗೂ ವಿದೇಶಗಳಿಗೆ ಪ್ರಯಾಣಿಸಿದ್ದರು.ಇದು 2022ಕ್ಕೆ ಹೋಲಿಕೆ ಮಾಡಿದರೆ 21.1 % ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿತ್ತು. ಅಲ್ಲದೆ ಅಕ್ಟೋಬರ್ 20 ರಂದು ಒಂದೇ ದಿನ ಕೆಐಎಬಿಯಿಂದ 1 ಲಕ್ಷ 26 ಸಾವಿರದ 532 ಜನ ಪ್ರಯಾಣ ಮಾಡುವ ಮೂಲಕ ಒಂದು ದಿನದಲ್ಲಿ ಅತಿ ಹೆಚ್ಚು ಪ್ರಯಾಣಿಕರು ಪ್ರಯಾಣ ಮಾಡಿದ ದಿನ ಅನ್ನೂ ಖ್ಯಾತಿ ಕೂಡ ಪಡೆದುಕೊಂಡಿತ್ತು. ಪ್ರತಿದಿನ ಕೆಐಎಬಿಯಿಂದ ವಿವಿಧೆಡೆಗೆ ಸರಾಸರಿ 723 ಟ್ರಿಪ್ಗಳು ಮಾಡಲಾಗುತ್ತದೆ.

Related Articles

Leave a Reply

Your email address will not be published. Required fields are marked *

Back to top button