ಇತ್ತೀಚಿನ ಸುದ್ದಿ
Trending

 ‘ಅತ್ಯಾಚಾರ ಆಗಿದೆ, ಎರಡು ಬಾರಿ ಪ್ರೆಗ್ನೆಂಟ್ ಆಗಿದ್ದೆ’; ‘ಕಾಮಿಡಿ ಕಿಲಾಡಿ’ ಕಲಾವಿದರ ಜಗಳ ಬೀದಿಗೆ

ಮಡೆನೂರು ಮನು (Madenuru Manu) ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದೆ. 2018ರಲ್ಲಿ ಪರಿಚಯ ಆದ ಯುವತಿ ಮೇಲೆ ಅವರು ಅತ್ಯಾಚಾರ ಮಾಡಿರೋದು ಸದ್ಯದ ಆರೋಪ. ಈ ಯುವತಿ ಹಾಗೂ ಮನು ‘ಕಾಮಿಡಿ ಕಿಲಾಡಿಗಳು’ ಶೋನಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಅತ್ಯಾಚಾರದಿಂದ ತಾವು ಎರಡು ಬಾರಿ ಪ್ರೆಗ್ನೆಂಟ್ ಆಗಿದ್ದಾಗಿಯೂ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ಈ ದೂರನ್ನು ಆಧರಿಸಿ ಪೊಲೀಸರು ಮನು ಮೇಲೆ ಕೇಸ್ ದಾಖಲು ಮಾಡಿಕೊಂಡಿದ್ದಾರೆ.2018ರಲ್ಲಿ ಮನು ಹಾಗೂ ಯುವತಿ ಮಧ್ಯೆ ಪರಿಚಯ ಬೆಳೆಯಿತು. ಯುವತಿಗೆ ಬಾಡಿಗೆ ಮನೆಯನ್ನು ಮನುವೇ ಹುಡುಕಿಕೊಟ್ಟಿದ್ದ. ‘ಕಾಮಿಡಿ ಕಿಲಾಡಿಗಳು’ ಶೋನಲ್ಲಿ ಇವರು ಒಟ್ಟಾಗಿ ಕಾಣಿಸಿಕೊಂಡಿದ್ದರು.  ಯುವತಿ ಜೊತೆ ಆಪ್ತತೆ ಬೆಳೆಸಿಕೊಂಡಿದ್ದ ಮನುಗೆ ಆಗಲೇ ಮದುವೆ ಆಗಿ ಒಂದು ಮಗು ಕೂಡ ಇತ್ತು. ಇಬ್ಬರೂ ಕಾರ್ಯಕ್ರಮ ಒಂದಕ್ಕೆ ತೆರಳಿದ್ದಾಗ ಅತ್ಯಾಚಾರ ನಡೆದಿದೆ ಎಂದು ಯುವತಿ ಆರೋಪಿಸಿದ್ದಾರೆ.

2022ರ ನವೆಂಬರ್ 29ರಂದು ಶಿವಮೊಗ್ಗದ ಶಿಕಾರಿಪುರದ ಕಾರ್ಯಕ್ರಮಕ್ಕೆ ಮನು ಹಾಗೂ ಯುವತಿ ತೆರಳಿದ್ದರು. ಅಲ್ಲಿ ಒಂದು ಹಾಸ್ಯ ಕಾರ್ಯಕ್ರಮ‌ ಮಾಡಿದ್ದರು. ಕಾರ್ಯಕ್ರಮದ ಬಳಿಕ ಸಂಭಾವನೆ ನೀಡೋ ನೆಪದಲ್ಲಿ ಮನು ಯುವತಿಯನ್ನು ರೂಂಗೆ ಕರೆದಿದ್ದರು. ಬಳಿಕ ಯುವತಿ ಮೇಲೆ ಅವರು ಅತ್ಯಾಚಾರ ಮಾಡಿದ್ದಾಗಿ ಎಫ್​​ಐಆರ್​ನಲ್ಲಿ ಉಲ್ಲೇಖ ಆಗಿದೆ.

ಅತ್ಯಾಚಾರ ಆದ ಬೆನ್ನಲ್ಲೇ ಮನು ಅವರು ಯುವತಿಯನ್ನು ವಿವಾಹ ಕೂಡ ಆಗಿದ್ದರು! ಹೌದು ಅದೇ ವರ್ಷ ಡಿಸೆಂಬರ್​ 3ರಂದು ಮನೆಗೆ ಬಂದಿದ್ದ ಮನು ಬಲವಂತವಾಗಿ ತಾಳಿ ಕಟ್ಟಿದ್ದರಂತೆ. ಆ ಬಳಿಕ ಹಲವು ಬಾರಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂಬುದು ಸಂತ್ರಸ್ತೆಯ ಆರೋಪ.

ಅತ್ಯಾಚಾರದ ಬಳಿಕ ಸಂತ್ರಸ್ತೆ ಪ್ರೆಗ್ನೆಂಟ್ ಆದರು. ಮನು ಗರ್ಭಪಾತ ಆಗುವ ಮಾತ್ರೆ ನೀಡಿದ್ದರು. ಇದಾದ ಬಳಿಕವೂ ಸಂತ್ರಸ್ತೆ ಮತ್ತೊಮ್ಮೆ ಗರ್ಭಿಣಿ ಆಗಿದ್ದರು. ಆ ಬಳಿಕ ಎರಡನೇ ಬಾರಿಯೂ ಮನು ಗರ್ಭಪಾತ ಮಾಡಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

‘ಬಾಡಿಗೆ ಮನೆಯಲ್ಲಿ ಹಲವು ಬಾರಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಫೋನ್​ನಲ್ಲಿ ವಿಡಿಯೋ ಮಾಡಿಟ್ಟುಕೊಂಡಿದ್ದಾನೆ. ವಿಚಾರ ಯಾರಿಗಾದ್ರೂ ಹೇಳಿದರೆ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ. ಜೊತೆಗೆ ಲಕ್ಷಾಂತರ ರೂಪಾಯಿ ಹಣ ಕೂಡ ನೀಡಿದ್ದೇನೆ. ಈತನ ವಿರುದ್ದ ಕಾನೂನು ಕ್ರಮ ಜರುಗಿಸಿ’ ಎಂಬುದು ಸಂತ್ರಸ್ತೆಯ ಕೋರಿಕೆ.

Related Articles

Leave a Reply

Your email address will not be published. Required fields are marked *

Back to top button