
ಪೇಹಲ್ಗಾಮ ದಾಳಿಯ ಪ್ರತಿಕಾರವಾಗಿ ಭಾರತೀಯ ಸೈನಿಕರು ಪಾಕಿಸ್ಥಾನದಲ್ಲಿಯ ಉಗ್ರರ ಅಡುಗುತಾಣಗಳನ್ನು ದ್ವಂಸಗೊಳಿಸುವದರೊಂದಿಗೆ ಯಶಸ್ವಿ ಕಾರ್ಯಚರಣೆ ನಡೆಸಿದ್ದಕ್ಕೆ ತಾಳಿಕೋಟೆಯಲ್ಲಿ ಯುವಕರು ತಿರಂಗಾ ದ್ವಜದೊಂದಿಗೆ ಬೈಕ್ ರ್‍ಯಾಲಿ ನಡೆಸುವ ಮೂಲಕ ಸಂಭ್ರಮಿಸಿದರಲ್ಲದೇ ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು.
ಈ ಸಮಯದಲ್ಲಿ ಪುರಸಭಾ ಸದಸ್ಯ ಜೈಸಿಂಗ್ ಮೂಲಿಮನಿ ಅವರು ಮಾತನಾಡಿ ಪಾಪಿ ಪಾಕಿಸ್ತಾನದ ಉಗ್ರರು ಪೆಹಲ್ಗಾಮನಲ್ಲಿ ೨೬ ಜನ ಅಮಾಯಕ ಹಿಂದೂ ಹೆಣ್ಣುಮಕ್ಕಳ ಸಿಂಧೂರವನ್ನು ಅಳಿಸಿದ್ದರು ಅದರ ಪ್ರತಿಕಾರವಾಗಿ ನರೇಂದ್ರ ಮೋದಿಜಿ ನೇತೃತ್ವದ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಂಡು ಭಾರತೀಯ ಸೈನಿಕರ ಮೂಲಕ ಪಾಕ್‌ನಲ್ಲಿ ಅಡಗುತಾಣಗಳನ್ನು ನಿರ್ಮಿಸಿಕೊಂಡಿದ್ದ ಉಗ್ರರ ಹೆಡೆ ಮುರಿಕಟ್ಟುವಂತಹ ಕಾರ್ಯ ಮಾಡಿ ಪಾಕ್‌ಗೆ ಕಠೋರ ಏಚ್ಚರಿಕೆಯನ್ನು ನೀಡಿದ್ದಾರೆ. ಉಗ್ರರನ್ನು ಸುಮಾರು ೩ ದಶಕಗಳಿಂದಲೂ ಪೊಷಿಸುತ್ತಾ ಬೆಳೆಸುತ್ತಾ ಸಾಗಿರುವ ಪಾಪಿ ಪಾಕಿಸ್ಥಾನ ಸೇನಾ ಭಲವಿಲ್ಲದಿದ್ದರೂ ಸುತ್ತಲಿನ ರಾಷ್ಟ್ರಗಳಿಗೆ ಕೇವಲ ಹೆದರಿಸುವ ಕಾರ್ಯ ಮಾಡುತ್ತಿತ್ತು ಆದರೆ ಭಾರತದ ತಂಟೆಗೆ ಬಂದರೆ ನಮ್ಮ ಸೈನಿಕರು ಪಾಕಿಸ್ಥಾನ ದೇಶವನ್ನು ಇಡೀ ಭೂಪಟದಿಂದಲೇ ಅಳಸಿ ಹಾಕುವಂತಹ ಮಾಡಲಿದ್ದಾರೆ ಎಂಬ ಸಂದೇಶ ರವಾನಿಸಿದ್ದಾರೆ ಜಮ್ಮು ಕಾಶ್ಮೀರ ಯಾವತಿದ್ದರೂ ಭಾರತ ಮಾತೆಯ ಸಿಂಧೂರವಾಗಿರಲಿದೆ ಅದರ ತಂಟೆಗೆ ಬಂದರೆ ಭಾರತೀಯ ಪ್ರತಿಯೊಬ್ಬ ಪ್ರಜೆ ಸೈನಿಕರಾಗಿ ಹೊರಬರಲಿದ್ದಾರೆ ಹಿಂದೂಸ್ಥಾನ ರಾಷ್ಟ್ರವಾಗಿರುವ ಭಾರತ ದೇಶದ ಪೆಹಲ್ಗಾಮನಲ್ಲಿ ಹಿಂದೂ ಧರ್ಮಿಯರನ್ನೇ ಟಾರ್ಗೇಟ್ ಮಾಡಿದ ಭಯೋತ್ಪಾದಕರು ೨೬ ಅಮಾಯಕರನ್ನು ಗುಂಡಿಕ್ಕಿ ಕೊಂದಿದ್ದರ ಪ್ರತಿರೋದ ಉತ್ತರ ಇದಾಗಿದೆ ಇದು ಇನ್ನೂ ಟ್ರೇಲರ್ ಅಭಿ ಪಿಚ್ಚರ ಭಾಕಿ ಹೈ ಎಂಬಂತೆ ನಮ್ಮ ಭಾರತೀಯ ಸೈನಿಕರು ಹೆಮ್ಮೆಯಿಂದ ಉತ್ತರವನ್ನು ಕೊಟ್ಟಿದ್ದಾರೆ ಇದು ಭಾರತೀಯರ ಪೆಹಲ್ಗಾಮ ನರಮೇದಕ್ಕೆ ತಕ್ಕ ಉತ್ತರ ಇದಾಗಿದೆ ಎಂದರು.
ಬೈಕ್ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದ ನೂರಾರು ಜನ ಯುವಕರು ಮಹಾರಾಣಾಪ್ರತಾಪ ವೃತ್ತದಿಂದ ಪ್ರಾರಂಬಿಸಿದ ಬೈಕ್ ರ್‍ಯಾಲಿಯು ಬಸವೇಶ್ವರ ವೃತ್ತ, ಕಿತ್ತೂರ ರಾಣಿ ಚೆನ್ನಮ್ಮ ವೃತ್ತ, ಚೇತಕ್ ಸರ್ಕಲ್, ಅಂಬೇಡ್ಕರ್ ಸರ್ಕಲ್, ಕತ್ರಿ ಭಜಾರ, ಭೋವಿ ಬಡಾವಣೆ, ರಜಪೂತ ಬಡಾವಣೆ, ಶ್ರೀ ಖಾಸ್ಗತೇಶ್ವರಮಠದ ರಸ್ತೆಯ ಮೂಲಕ ಬಾಲಾಜಿ ಮಂದಿರ ರಸ್ತೆ, ಶ್ರೀ ವಿಠ್ಠಲ ಮಂದಿರ ರಸ್ತೆ, ಶಿವಾಜಿ ಮಹಾರಾಜರ ವೃತ್ತದ ಮೂಲಕ ಮರಳಿ ಮಹಾರಾಣಾಪ್ರತಾಪಸಿಂಹ್ ವೃತ್ತಕ್ಕೆ ಆಗಮಿಸಿ ಮುಕ್ತಾಯಗೊಳಿಸಿದರು.ಬೈಕ್ ರ್‍ಯಾಲಿಯುದ್ದಕ್ಕೂ ಭಾರತ ಮಾತಾಕಿ ಜೈ, ಭಾರತೀಯ ಸೈನಿಕರಿಗೆ ಜೈಯವಾಗಲಿ, ಜೈ ಜವಾನ ಜೈಕಿಸಾನ ಎಂಬ ಘೋಷ ವಾಕ್ಯಗಳು ಮೊಳಗಿದವು.
ಈ ಮೇರವಣಿಗೆಯ ಸಮಯದಲ್ಲಿ ಆಕಾಶ ಪಿಂಪಳೆ, ಋಷಿಕೇಶ ಗೊಟಗುಣಕಿ, ಸುನೀಲ ವಿಜಾಪೂರ, ತಿಲಕ ಬಯಾಸ್, ರಾಹುಲ್ ಮೂಲಿಮನಿ, ನದಿಂ ಕಡು, ಬಬಲು ವಿಜಾಪೂರ, ಸುಮೀತ್ ವಿಜಾಪೂರ, ಸಮರ್ಥ ಸಜ್ಜನ, ಒಳಗೊಂಡು ನೂರಾರು ಯುವಕರು ಪಾಲ್ಗೊಂಡಿದ್ದರು.
ಭಾರತೀಯ ಹೆಣ್ಣುಮಕ್ಕಳ ಸಿಂಧೂರ ಅಳಿಸಿದ್ದ ಉಗ್ರರ ಹೆಡೆಮುರಿಕಟ್ಟುವಂತಹ ಕಾರ್ಯ ನಮ್ಮ ಭಾರತೀಯ ನೈನಿಕರು ಮಾಡಿದ್ದಾರೆ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಜಿ ಅವರು ದೇಶದ ವಿಷಯದಲ್ಲಿ ಸೈನಿಕರಿಗೆ ಸ್ವಯಂ ನಿರ್ಧಾರದ ಅಧಿಕಾರ ನೀಡಿದ್ದಾರೆ ಪೆಹಲ್ಗಾಮ ದಾಳಿಯ ಪ್ರತಿಕಾರ ಪಾಕಿಸ್ತಾನಿಯರಿಗೆ ಮುಟ್ಟಿ ನೋಡಿಕೊಳ್ಳುವಂತೆ ಮಾಡಿದೆ.ಜೈಸಿಂಗ್ ಮೂಲಿಮನಿ


