ಇತ್ತೀಚಿನ ಸುದ್ದಿ
Trending

ಸಮಾನತೆಯ ಹರಿಕಾರ ಜಗಜ್ಯೋತಿ ಬಸವಣ್ಣ-ಪಾಟೀಲ

ಪಟ್ಟಣದ ಶ್ರೀ ಸಂಗಮಾರ್ಯ ವಿದ್ಯಾಸಂಸ್ಥೆಯಲ್ಲಿ ಬುಧವಾರರಂದು ವಿಶ್ವಗುರು ಶ್ರೀ ಜಗಜ್ಯೋತಿ ಬಸವೇಶ್ವರ ೮೯೨ ಜಯಂತಿ ವಿಜೃಂಬಣೆಯಿಂದ ಆಚರಿಸಲಾಯಿತು.

ಶ್ರೀ ಬಸವೇಶ್ವರರ ಭಾವಚಿತ್ರಕ್ಕೆ ಸಂಸ್ಥೆಯ ಅಧ್ಯಕ್ಷರಾದ ಎಚ್.ಎಸ್.ಪಾಟೀಲ ಅವರು ಪೂಜೆ ಸಲ್ಲಿಸಿ ಮಾತನಾಡಿ ೧೨ನೇ ಶತಮಾನದಲ್ಲಿ ಜನಸಿ ವಚನಗಳ ಮೂಲಕ ಜನರಲ್ಲಿರುವ ಮೂಢನಂಬಿಕೆ, ಕಂದಾಚಾರವನ್ನು ಹೋಗಲಾಡಿಸುವದರೊಂದಿಗೆ ಸಮಾನತೆ, ಏಕತೆ ಭಾವನೆ ಎಲ್ಲರಲ್ಲಿ ತರುವುದರಲ್ಲಿ ಯಶಸ್ವಿಯಾದ ಬಸವಣ್ಣನವರು ಪುರುಷನಷ್ಟೇ ಮಹಿಳೆಯರಿಗೂ ಕೂಡಾ ಎಲ್ಲದರಲ್ಲಿ ಸಮಾನತೆ ಸಿಗಬೇಕೆಂಬ ಅವರ ದಿಟ್ಟ ನುಡಿಯಿಂದ ಇಂದು ದೇಶದ ಎಲ್ಲ ಕ್ಷೇತ್ರಗಳಲ್ಲಿಯೂ ಪುರುಷನಷ್ಠೇ ಮಹಿಳೆಯು ಸ್ಥಾನಮಾನವನ್ನು ಹೊಂದಿದ್ದಾಳೆ ಇಂತಹ ಮಹಾನ್ ಮಾನವತವಾದಿ ಜಗಜ್ಯೋತಿ ಬಸವಣ್ಣನವರ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗಬೇಕಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಮಲಿಹಾಳ ಗ್ರಾಮದ ಹಿರಿಯರಾದ ನಿಂಗನಗೌಡ ತುಂಬಗಿ ಅವರು ಮಾತನಾಡಿ ಸಮಾನತೆ, ಏಕತೆ, ಭಾತೃತ್ವ ಭಾವನೆ ಎಲ್ಲರಲ್ಲಿ ಬರಬೇಕಾಗಿದೆ ಎಂಬ ಚಿಂತನೆಯೊಂದಿಗೆ ಬಸವಣ್ಣನವರು ಕೆಳವರ್ಗದ ಜನರ ಮೇಲೆ ಅತ್ಯಂತ ಪ್ರೀತಿ ತೋರಿಸುವದರೊಂದಿಗೆ ಅವರಿಗೆ ಕಾಯಕದ ಮೂಲಕ ಆರ್ಥಿಕವಾಗಿ, ಸಮಾಜಿಕವಾಗಿ ಮೇಲೆ ಬರಲು ದಾರಿ ತೋರಿಸಿದ್ದಾರೆಂದ ಅವರು ಬಸವಣ್ಣವರ ವಚನಗಳು ಇಂದಿಗೂ ಎಂದಿಗೂ ಆದರ್ಶಪ್ರೀಯವಾಗಿ ಉಳಿಯಲಿವೆ ಅವುಗಳನ್ನು ಓದುವದಷ್ಠೇ ಅಲ್ಲದೇ ಅವುಗಳನ್ನು ಅರೀತುಕೊಂಡು ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗಬೇಕಾಗಿದೆ ಎಂದರು.

ಪ್ರೌಡಶಾಲೆಯ ಕನ್ನಡ ಉಪನ್ಯಾಸಕ ಎಸ್.ವ್ಹಿ.ಜಾಮಗೊಂಡಿ ಅವರು ಮಾತನಾಡಿ ವಿಶ್ವಗುರು ಬಸವಣ್ಣನವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ಜನಿಸಿದರು. ಜನರಲ್ಲಿರುವ ಮೂಢನಂಬಿಕೆ ಜಗತ್ತಿನ ಅಂಧಕಾರ ಹೋಗಲಾಡಿಸಿದ್ದಾರೆಂದು ಅವರ ಜೀವನ ಚರಿತ್ರೆಯನ್ನು ವಿವರಿಸಿದರು.

ಬಸವಣ್ಣನವರ ಭಾವಚಿತ್ರಕ್ಕೆ ಸಂಸ್ಥೆಯ ಕಾರ್ಯದರ್ಶಿ ಸಚೀನ ಪಾಟೀಲ ಅವರು ಪುಷ್ಪಹಾರ ಹಾಕಿ ಪೂಜೆ ಸಲ್ಲಿಸಿ ಗೌರವಿಸಿದರು.ವೇದಿಕೆಯ ಮೇಲೆ ಸಂಸ್ಥೆಯ ಆಡಳಿತಾಧಿಕಾರಿಗಳಾದ ಕಿರಣ ಎಚ್ ಪಾಟೀಲರ, ರವಿ ಪಾಟೀಲ, ಎಸ್.ಎಸ್.ವಿದ್ಯಾಸಂಸ್ಥೆಯ ಪ್ರಾಚಾರ್ಯ ಡಾ.ಎಚ್.ಬಿ.ನಡುವಿನಕೇರಿ, ಶಿವುಕುಮಾರ ನಾಯಕ, ವಿರೇಶ ಕನಕ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಅಶೋಕ ಕಟ್ಟಿ, ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಜೆ.ಎಮ್.ಕೊಣ್ಣೂರ, ಶ್ರೀಮತಿ ಮೀರಾ ದೇಶಪಾಂಡೆ, ಎಸ್.ಬಿ.ಮಂಗ್ಯಾಳ ಹಾಗೂ ಎಸ್.ಎಸ್.ವಿದ್ಯಾಸಂಸ್ಥೆಯ ಸಮಸ್ತ ಭೋದಕ ಮತ್ತು ಭೋದಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.ಹಿರಿಯ ಶಿಕ್ಷಕ ಬಿ.ಆಯ್.ಹಿರೇಹೊಳಿ ನಿರೂಪಿಸಿ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button