
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ತಾಲ್ಲೂಕು ಆಡಳಿತ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಇಲಾಖೆ ಕೊಳ್ಳೇಗಾಲ, ಕ್ಷೇತ್ರದ ಶಾಸಕರ ನೇತೃತ್ವದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜಯಂತಿ ಆಚರಣೆ ಆಯೋಜನೆ ಕುರಿತು ಪಟ್ಟಣ ಗುರುಭವನದಲ್ಲಿ ಪೂರ್ವಭಾವಿ ಸಭೆಯನ್ನು ಏರ್ಪಡಿಸಲಾಗಿತ್ತು.ಸಭೆಯಲ್ಲಿ ಕೊಳ್ಳೇಗಾಲ ಭೀಮನಗರ ಅಂಬೇಡ್ಕರ್ ಸಂಘ ಅಧ್ಯಕ್ಷರು ಸದಸ್ಯರುಗಳು ಹಾಗೂ ಮುಖಂಡರುಗಳು ಹಾಜರಿದ್ದರು
ಕಾರ್ಯಕ್ರಮದ ರೂಪಾರೇಶಗಳ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕೇಶವಮೂರ್ತಿ ಮಾತನಾಡಿ,
ಏಪ್ರಿಲ್ 14 ರಂದು ಬಾಬಾ ಸಾಹೇಬ್ ಡಾ. ಬಿ ಆರ್. ಅಂಬೇಡ್ಕರ್ ರವರ ಜಯಂತಿ ಆಚರಣೆ ಇರುವುದರಿಂದ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಬೇಕು ಹಾಗೂ ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಸಿ, ಪಿಯುಸಿ,ಯಲ್ಲಿ ಉನ್ನತ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವ ಮತ್ತು ಎಲ್ಲಾ ಸರ್ಕಾರಿ ಕಛೇರಿಗಳಿಗೆ ದೀಪಾಲಂಕಾರ, ಮತ್ತು ಕಾರ್ಯಕ್ರಮಕ್ಕೆ ಬರುವ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಮಾಡುವ ಬಗ್ಗೆ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ವಿಚಾರಗಳನ್ನು ಅದ್ಯಾಯನ ಮಾಡಿರುವ ಉಪನ್ಯಾಸಕರಿಂದ ಉಪನ್ಯಾಸ ನೀಡುವ ಬಗ್ಗೆ ತಿಳಿಸಿದರು.
ಮುಖಂಡರಾದ ದಿಲೀಪ್ ಸಿದ್ದಪ್ಪಾಜಿಯವರು ಮಾತನಾಡಿ ಕೆಲವು ಸಂದರ್ಭದಲ್ಲಿಗಳಲ್ಲಿ ಚುನಾವಣೆ ಹಿನ್ನೆಲೆ ನೀತಿ ಸಂಹಿತಿ ಜಾರಿ ಇರುವುದರಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಣೆಗೆ ತೊಡಕುಂಟಾಗುತ್ತಿದೆ ಆದ್ದರಿಂದ ಶಾಸಕರು ಸರ್ಕಾರದ ಗಮನ ಸೆಳೆದು ನೀತಿ ಸಂಹಿತಿ ಸಂದರ್ಭದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆಗೆ ಯಾವುದೇ ರೀತಿ ಅಡಚಣೆಗಳು ಇಲ್ಲದಂತೆ ನೀತಿ ಸಂಹಿತಿ ಜಾರಿಯಲ್ಲಿದ್ದಾಗಲೂ ಅಂಬೇಡ್ಕರ್ ರವರ ಜಯಂತಿ ಆಚರಣೆಯನ್ನು ವಿಜೃಂಭಣೆಯಿಂದ ಆಚರಿಸಲು ಅವಕಾಶ ಕಲ್ಪಿಸುವಂತೆ ವ್ಯವಸ್ಥೆ ಮಾಡಬೇಕು ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜಯಂತಿ ದಿನ ಕೊಳ್ಳೇಗಾಲ ಪಟ್ಟಣದಲ್ಲಿ ದೀಪಾಲಂಕಾರ ಕೊಳ್ಳೇಗಾಲದಿಂದ ಪಕ್ಕದ ಸಿದ್ದಯ್ಯನಪುರದಿಂದ, ಅಣಗಳ್ಳಿ ಮುಡಿಗುಂಡ, ಬಸ್ತೀಪುರ , ದಾಸನಪುರ ವರೆಗೂ ದೀಪಾಲಂಕಾರವನ್ನು ಮಾಡಿಸಬೇಕು, ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರವನ್ನು ಆನೆಯ ಮೇಲೆ ಇರಿಸಿ ಮೆರವಣಿಗೆ ಮಾಡಿಸಬೇಕು, ಅರಣ್ಯ ಇಲಾಖೆಯವರ ಮನೆವೊಲಿಸಿ ಆನೆಯನ್ನು ಕರೆಯಿಸಿ ಮೆರವಣಿಗೆ ಮಾಡಬೇಕು, ಹಾಗೂ ಅಂಬೇಡ್ಕರ್ ರವರ ಜೀವನಧಾರಿತ ಸ್ತಬ್ದಚಿತ್ರವನ್ನು ಮೆರವಣಿಗೆ ಜವಾಬ್ದಾರಿಯನ್ನು ಎಲ್ಲಾ ಇಲಾಖೆಯವರು ವಹಿಸಿಕೊಳ್ಳಬೇಕು, ಎಂದರು.
ಸಭೆಯಲ್ಲಿ ನಿಂಪುವಾರ್ತೆ ಪತ್ರಿಕೆ ಸಂಪಾದಕರಾದ ನಿಂಪು ರಾಜೇಶ್ ರವರು ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಣೆ ಪೂರ್ವಭಾವಿ ಸಭೆಗೆ ಸಂಬಂಧಿಸಿದಂತೆ ಪಾಳ್ಯ ಹೋಬಳಿ ಹಾಗೂ ಕಾಮಗೆರೆ ವರೆಗೂ ಕೂಡ ಕೊಳ್ಳೇಗಾಲ ತಾಲ್ಲೂಕು ವ್ಯಾಪ್ತಿಗೆ ಬರುತ್ತದೆ ಆದ್ದರಿಂದ ಆ ಭಾಗದ ಶಾಸಕರನ್ನು ತಾಲ್ಲೂಕು ಆಡಳಿತ ಸಭೆಗೆ ಆಹ್ವಾನಿಸಬೇಕಾಗಿತ್ತು ಆದರೆ ಆ ಕೆಲಸವನ್ನು ಮಾಡಿಲ್ಲ, ಹಿಂದೆ ಶಿವಲಂಕಾರಯ್ಯ, ಕೃಷ್ಣಸ್ವಾಮಿಯವರು ಅಂಬೇಡ್ಕರ್ ಜಯಂತಿಗೆ ಆನೆಯನ್ನು ಕರೆಯಿಸಿ ಮೆರವಣಿಗೆ ಮಾಡಿಸಿದ್ದರು ಆದ್ದರಿಂದ ಶಾಸಕರು ಆದರ ಜವಾಬ್ದಾರಿಯನ್ನು ವಹಿಸಿ ಏಪ್ರಿಲ್ 14 ರಂದು ಆನೆಯನ್ನು ಕರೆಯಿಸಿ ಮೆರವಣಿಗೆಯನ್ನು ಮಾಡಿಸಬೇಕು ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ರಾಷ್ಟ್ರೀಯ ಹಬ್ಬ ವಾಗಿರುವುದರಿಂದ ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಕೂಡ ಅಂಬೇಡ್ಕರ್ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸುವಂತೆ ತಾಲ್ಲೂಕು ಆಡಳಿತ ಹಾಗೂ ಶಾಸಕರು ಅದೇಹ ಮಾಡಬೇಕು ಹಾಗೂ ಸರ್ಕಾರಿ ಶಾಲೆಗಳಲ್ಲಿ ಕೂಡ ಕಾರ್ಯಕ್ರಮವನ್ನು ನಡೆಸಬೇಕು ಹಾಗೂ ಈ ಕಾರ್ಯಕ್ರಮದಲ್ಲಿ ಪಕ್ಷಬೇಧವಿಲ್ಲದೆ ಎಲ್ಲರೂ ಒಂದಾಗಿ ಕಾರ್ಯಕ್ರಮವನ್ನು ನಡೆಸಿಕೊಡಬೇಕು ಎಂದರು.
ನಂತರ ಶಾಸಕರು ಮಾತನಾಡಿ ಏಪ್ರಿಲ್ 14 ನೇ ತಾರೀಕು ಡಾ. ಬಿ. ಆರ್. ಅಂಬೇಡ್ಕರ್ ರವರ ಜಯಂತಿ ಆಚರಣೆ ವಿಚಾರವಾಗಿ ಪೂರ್ವಭಾವಿ ಸಭೆಯಲ್ಲಿ ಸುಮಾರು 16 ಜನರು ಮಾತನಾಡಿ ಹಲವಾರು ಸಲಹೆ ಸೂಚನೆಗಳನ್ನು ಕೊಟ್ಟಿದ್ದಾರೆ ಮೈಸೂರು ದಸರಾ ಮಾದರಿಯಲ್ಲಿ ಪಟ್ಟಣದಲ್ಲಿ ದೀಪಾಲಂಕಾರ ಮಾಡಿಸುವಂತೆ ಸ್ತಬ್ದ ಚಿತ್ರ ಮೆರವಣಿಗೆ, ಅಂಬೇಡ್ಕರ್ ಭಾವಚಿತ್ರವನ್ನು ಆನೆಯ ಮೇಲೆ ಮೆರವಣಿಗೆ ಮಾಡಿಸುವಂತೆ, ಎಲ್ಲಾ ಸರ್ಕಾರಿ ಕಛೇರಿಗಳಲ್ಲೂ ದೀಪಾಲಂಕಾರವಾಗಬೇಕು, ಕಲಾತಂಡಗಳ ಮೆರವಣಿಗೆ, ಎಲ್ಲಾ ಬೇಡಿಕೆಗಳನ್ನು ಇಟ್ಟಿದ್ದಾರೆ, ಈ ಕಾರ್ಯಕ್ರಮದಲ್ಲಿ ಎಲ್ಲಾ ಬೇಡಿಕೆಗಳನ್ನು ಬಹುಪಾಲು ಈಡೇರಿಸಲಾಗುವುದು ಭಾವಚಿತ್ರವನ್ನು ಆನೆಯ ಮೇಲೆ ಮೆರವಣಿಗೆ ಮಾಡಿಸಬೇಕು ಎಂದು ಕೇಳಿದ್ದಾರೆ ಆನೆಯನ್ನು ಕರೆಸಲು 100 ಕ್ಕೆ 100 ರಷ್ಟು ಪ್ರಯತ್ನ ಮಾಡಲಾಗುವುದು ನಾನು ಕೂಡ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಕಟ್ಟ ಅನುಯಾಯಿ ಕಾಟಾಚಾರಕ್ಕೆ ಅಂಬೇಡ್ಕರ್ ರವರ ಹೆಸರು ಹೇಳುವವನಲ್ಲ, ನಾನು ಅಂಬೇಡ್ಕರ್ ರವರ ರಕ್ತ, ಯಾರೋ ಸುಮ್ಮನೆ ಏನೋ ಹೇಳುವುದಲ್ಲ, ನಾನು ಮಂಟೇಸ್ವಾಮಿಯ ಒಕ್ಕಲಿನವನು ಮಂಟೇಸ್ವಾಮಿ ಸಿದ್ದಪ್ಪಾಜಿ ಮಹದೇಶ್ವರರ ಪೂಜೆ ಆಚರಣೆ ಅದು ನಮ್ಮ ಮೂಲ ನಿವಾಸಿಗಳ ಪರಂಪರೆ, ಯಾರು ಬೇಕಾದರೂ ಅವರ ಪರಂಪರೆಯ ದೇವರ ಪೂಜೆಯನ್ನು ಮಾಡಬಹುದು, ಆದರೆ ಬಾಬಾ ಸಾಹೇಬ್ ಅಂಬೇಡ್ಕರ್ ರವರು ನಮ್ಮೆಲ್ಲರ ದೈವ, ಘನತೆ, ಅವರ ಜಯಂತಿ ಆಚರಣೆ ನಮಗೆ ಹಬ್ಬ, ಆ ದಿನವನ್ನ ಬಹಳ ವಿಜೃಂಭಣೆಯಿಂದ ಆಚರಿಸಬೇಕು ಬಾಬಾ ಸಾಹೇಬ್ ಅಂಬೇಡ್ಕರ್ ರವರ ಬಗ್ಗೆ ನಮ್ಮ ಜನರಿಗೆ ಮನಮುಟ್ಟುವಂತೆ ತಿಳಿಸಲು ಈ ರೀತಿ ಕಾರ್ಯಕ್ರಮಗಳ ಅಗತ್ಯ ಇದೆ ಆದ್ದರಿಂದ ನಮ್ಮ ಎಲ್ಲಾ ಸಮುದಾಯದವರು ದ್ವೇಷ ಅಸೂಯೆಗಳನ್ನು ಬಿಟ್ಟು ಎಲ್ಲರು ಒಂದಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು, ತಾಲ್ಲೂಕಿನ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಬಂದ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು, ನಗರಸಭೆಯವರು ನಗರದಲ್ಲಿ ಅನೈರ್ಮಲ್ಯ ಇಲ್ಲದಂತೆ ಸ್ವಚ್ಛತೆಯನ್ನು ಕಾಪಾಡಬೇಕು ಎಂದರು,
ಸಭೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ರಮೇಶ್ ರವರು ಮಾತಿನ ಬರದಲ್ಲಿ ಕುಲಕ್ಕೆ 1 ಲಕ್ಷ ಕೊಡುತ್ತೇನೆ ಎಂದು ಹೇಳಿದ್ದರು, ಕುಲ ಎಂಬ ಪದವನ್ನು ಬಳಸಿದ ಇವರ ಮಾತಿಗೆ ಪ್ರತಿರೋದ ವ್ಯಕ್ತ ಪಡಿಸಿ ಮುಖಂಡರಾದ ವರದರವರು ಮಾತನಾಡಿ ಇದು ಸರ್ಕಾರಿ ಕಾರ್ಯಕ್ರಮ ಆದ್ದರಿಂದ ಕುಲ ಎಂಬ ಪದವನ್ನು ಯಾರು ಬಳಸಬಾರದು ರಮೇಶ್ ರವರು ಕುಲಕ್ಕೆ ಒಂದು ಲಕ್ಷ ಕೊಡುತ್ತೇನೆ ಎಂದು ಹೇಳಿರುವುದು ಸರಿಯಲ್ಲಿ ಆದ್ದರಿಂದ ಯಜಮಾನರು ಇದರ ಬಗ್ಗೆ ಕುಲ ಸೇರಿಸಿ ಮಾತನಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು,
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಉಪಾಧ್ಯಕ್ಷ ಎ. ಪಿ. ಶಂಕರ್, ರಾಷ್ಟ್ರಿಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರಾದ ತಹಸೀಲ್ದಾರ್ ಬಸವರಾಜ್, ಡಿ. ವೈ. ಎಸ್. ಪಿ ಧರ್ಮೇಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ಸಮಾಜ ಕಲ್ಯಾಣಾಧಿಕಾರಿ ಕೇಶವಮೂರ್ತಿ, ನಗರಸಭೆ ಪ್ರಭಾರ ಆಯುಕ್ತರಾದ ಪರಶಿವಮೂರ್ತಿ, ಚಿಕ್ಕಮಾಳಿಗೆ, ಹಾಗೂ ಇನ್ನಿತರರು ಇದ್ದರು.