
ಬೀದರ್: ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ನಲ್ಲಿ ಮಾರ್ಗ ಮಧ್ಯದಲ್ಲೇ ಬೆಂಕಿ ಅವಘಡಕ್ಕೀಡಾದ ಘಟನೆಯು ಬುಧವಾರ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಕಪ್ಪಿಕೆರೆ ಗ್ರಾಮದ ಬಳಿ ನಡೆದಿದೆ.ಬಧುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಬೀದರ್ನಿಂದ ಔರಾದ್ ಕಡೆಗೆ ಬಸ್ ಹೊರಟಿತ್ತು. ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು, ಕೆಲ ನಿಮಿಷಗಳಲ್ಲಿಯೇ ಬಸ್ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಬಸ್‌ನಲ್ಲಿ ಸುಮಾರು 25 ಮಂದಿ ಪ್ರಯಾಣಿಕ ಮಾಡುತ್ತಿದ್ದು, ಯಾವುದೇ ಅಪಾಯ ಇಲ್ಲದೆ ಬಚಾವ್ ಆಗಿದ್ದಾರೆ.ಮೊದಲಿಗೆ ಬಸ್‌ನ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಗಮನಿಸಿದ ಚಾಲಕ ಬಸ್ ನಿಲ್ಲಿಸಿ, ಎಲ್ಲಾ ಪ್ರಯಾಣಿಕರನ್ನೂ ಕೆಳಗಿಳಿಸಿದ್ದಾರೆ. ಬಳಿಕ ಸಂಪೂರ್ಣ ಬಸ್ ಬೆಂಕಿಗೆ ಹೊತ್ತಿ ಧಗಧಗಿಸಿದೆ. ಆ ಬಳಿಕ ಅಗ್ನಿಶಾಮಕ ವಾಹನ ಬಂದು ಬೆಂಕಿ ನಂದಿಸಿದೆ. ಪೊಲೀಸ್ ಕೇಸ್ ದಾಖಲಾಗಿದೆ.


