ಇತ್ತೀಚಿನ ಸುದ್ದಿ

ಕರ್ನಾಟಕದ ಅತಿ ದೊಡ್ಡ ದೇವರ ರಥವಿದು

ಚಿತ್ರದುರ್ಗ: ಕರ್ನಾಟಕದ ಅತಿ ದೊಡ್ಡ ದೇವರ ರಥ ಎಂಬ ಖ್ಯಾತಿ ಹೊಂದಿರುವ ತಿಪ್ಪೇರುದ್ರಸ್ವಾಮಿ ರಥಕ್ಕೆ 2.5 ಕೋಟಿ ರೂ. ವಿಮೆ ಒದಗಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ವಿಮೆ ಪಾಲಿಸಿ ಪ್ರತಿಯನ್ನು ಕಂಪನಿಯ ಪ್ರತಿನಿಧಿಗಳು ಚಿತ್ರದುರ್ಗ ಜಿಲ್ಲಾಧಿಕಾರಿಗೆ ನೀಡಿದರು.ಈ ವೇಳೆ ದಾವಣಗೆರೆ ವೃತ್ತದ ದಿ ನ್ಯೂ ಇಂಡಿಯ ಅಶ್ಯುರೆನ್ಸ್‌ ಕಂಪನಿಯ ವಿಭಾಗೀಯ ಮ್ಯಾನೇಜರ್‌ ದೇವದಾಸ್‌ ಮಾತನಾಡಿ, ಜಾತ್ರೆಯ ದಿನ ಹಾಗೂ ವರ್ಷದ ಯಾವುದೇ ದಿನ ರಥಕ್ಕೆ ಉಂಟಾಗಬಹುದಾದ ಅನಾಹುತಕ್ಕೆ ಸಂಬಂಧಿಸಿದಂತೆ ವಿಮೆ ನೀಡಲಾಗಿದೆ. 22.03.2025ರಿಂದ 21.03.2026 ರವರೆಗೆ ಒಂದು ವರ್ಷದವರೆಗೆ ಈ ವಿಮೆ ಅನ್ವಯವಾಗಲಿದೆ. ಒಂದು ವರ್ಷದ ಅವಧಿಗೆ ರಥಕ್ಕೆ 2.5 ಕೋಟಿ ರೂ. ವಿಮೆ ಒದಗಿಸಲಾಗಿದೆ ಎಂದು ತಿಳಿಸಿದರು.ಈ ವೇಳೆ ದಾವಣಗೆರೆ ವೃತ್ತದ ದಿ ನ್ಯೂ ಇಂಡಿಯ ಅಶ್ಯುರೆನ್ಸ್‌ ಕಂಪನಿಯ ವಿಭಾಗೀಯ ಮ್ಯಾನೇಜರ್‌ ದೇವದಾಸ್‌ ಮಾತನಾಡಿ, ಜಾತ್ರೆಯ ದಿನ ಹಾಗೂ ವರ್ಷದ ಯಾವುದೇ ದಿನ ರಥಕ್ಕೆ ಉಂಟಾಗಬಹುದಾದ ಅನಾಹುತಕ್ಕೆ ಸಂಬಂಧಿಸಿದಂತೆ ವಿಮೆ ನೀಡಲಾಗಿದೆ. 22.03.2025ರಿಂದ 21.03.2026 ರವರೆಗೆ ಒಂದು ವರ್ಷದವರೆಗೆ ಈ ವಿಮೆ ಅನ್ವಯವಾಗಲಿದೆ. ಒಂದು ವರ್ಷದ ಅವಧಿಗೆ ರಥಕ್ಕೆ 2.5 ಕೋಟಿ ರೂ. ವಿಮೆ ಒದಗಿಸಲಾಗಿದೆ ಎಂದು ತಿಳಿಸಿದರು.ಇದಕ್ಕಾಗಿ 24,462 ವಿಮೆ ಹಣವನ್ನು ದೇವಾಲಯ ವತಿಯಿಂದ ನೀಡಲಾಗಿದೆ. ವಿಮಾ ಪಾಲಿಸಿಯಲ್ಲಿ ರಥದಲ್ಲಿನ ಫರ್ನಿಚರ್ಸ್, ಫಿಟ್ಟಿಂಗ್ಸ್‌ಗಳನ್ನು ಒಳಗೊಂಡಿದೆ. ಕಳೆದ ವರ್ಷದ ವಿಮಾ ಪಾಲಿಸಿಯನ್ನು ಈ ವರ್ಷವೂ ಮುಂದುವರಿಸಲಾಗಿದೆ. ಕೆಲವು ವರ್ಷಗಳ ಹಿಂದೆ ಕೊಟ್ಟೂರು ಪಟ್ಟಣದ ಕೊಟ್ಟೂರೇಶ್ವರ ರಥವು ಮುರಿದಬಿದ್ದ ನಂತರ ಇಲ್ಲಿನ ರಥಕ್ಕೆ ವಿಮೆ ರಕ್ಷಣೆ ಒದಗಿಸಲಾಗುತ್ತಿದೆ.ರಥೋತ್ಸವದಲ್ಲಿ ಅವಘಡ ಸಂಭವಿಸಿದಲ್ಲಿ 89 ಅನಾಮಿಕ ಭಕ್ತರಿಗೆ ತಲಾ 2 ಲಕ್ಷ ರೂ. ವಿಮೆಯನ್ನು 30 ದಿನದವರೆಗೆ ನೀಡಲಾಗಿದೆ. ರಥದ ಸುತ್ತಲೂ ರಥ ಚಲಾಯಿಸುವ ಹಾಗೂ ಸಾಂಪ್ರದಾಯಿಕ ಸೇವಾಕರ್ತರು ಭಾಗವಹಿಸುತ್ತಾರೆ. ಇವರ ಹೆಸರನ್ನು ಪಟ್ಟಿ ಮಾಡಲಾಗಿದೆ. ಇಂಥ ಸೇವಾಭಕ್ತರಾಗಿರುವ 101 ನಾಮನಿರ್ದೇಶಿತ ಜನರಿಗೆ ತಲಾ 2 ಲಕ್ಷ ರೂ. ವಿಮೆ ಒದಗಿಸಲಾಗಿದೆ. ಇದರಲ್ಲಿದೇವಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ಒಳಗೊಂಡಿದ್ದಾರೆ. ವಿಮೆ ಮೊತ್ತವಾಗಿ ದೇವಾಲಯ ವತಿಯಿಂದ 15,000 ರೂ. ಸಂಗ್ರಹಿಸಲಾಗಿದೆ. ಇದರ ಜತೆಗೆ ಸಾರ್ವಜನಿಕರಿಗಾಗಿ 25 ಲಕ್ಷ ರೂ. ವಿಮೆ ಒದಗಿಸಲಾಗಿದೆ. ಇದಕ್ಕಾಗಿ 11,770 ರೂ.ಗಳನ್ನು ದೇವಾಲಯ ವತಿಯಿಂದ ಪಾವತಿಸಲಾಗಿದೆ ಎಂದು ಮ್ಯಾನೇಜರ್‌ ದೇವದಾಸ್‌ ಹೇಳಿದರು.ಚಿತ್ರದುರ್ಗ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ” ರಥವು ಸಂಪೂರ್ಣವಾಗಿ ಮರದಿಂದ ಮಾಡಲ್ಪಟ್ಟಿದೆ. ಮುಂಜಾಗ್ರತ ಕ್ರಮವಾಗಿ ವಿಮೆಯನ್ನು ಒದಗಿಸಲಾಗಿದೆ. ರಥದ ರಕ್ಷಣೆ ಮತ್ತು ಭಕ್ತಾದಿಗಳ ಜೀವರಕ್ಷಣೆ ಎರಡೂ ಅಂಶಗಳನ್ನು ಹೊಂದಲಾಗಿದೆ. ರಥ ಮತ್ತು ಭಕ್ತಾಧಿಗಳ ಸುರಕ್ಷತೆಗೆ ಈ ಕ್ರಮಕೈಗೊಳ್ಳಲಾಗಿದೆ ” ಎಂದರು.ದೇವಾಲಯ ಉಸ್ತುವಾರಿ ಹೊಂದಿರುವ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಚಿತ್ರದುರ್ಗ ವಿಮಾಶಾಖೆಯ ನವೀನ್‌ ಪ್ರಸಾದ್‌, ದೇವಾಲಯ ಇಒ ಎಚ್‌. ಗಂಗಾಧರಪ್ಪ, ಸಿಬ್ಬಂದಿ ಸತೀಶ್‌, ವಕೀಲ ಬಿ.ಎಂ.ಅರುಣ್‌ ಕುಮಾರ್‌ ಇದ್ದರು.


Related Articles

Leave a Reply

Your email address will not be published. Required fields are marked *

Back to top button