ಇತ್ತೀಚಿನ ಸುದ್ದಿ

ಬೆಂಗಳೂರು ರೈಲು ಪ್ರಯಾಣಿಕರ ಗಮನಕ್ಕೆ

ಬೆಂಗಳೂರು: ಅತ್ಯಂತ ಜನನಿಬಿಡ ಬೆಂಗಳೂರು ಕಂಟೋನ್ಮೆಂಟ್‌ ರೈಲು ನಿಲ್ದಾಣದಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಪ್ರಯಾಣಿಕರ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೈಋುತ್ಯ ರೈಲ್ವೆ ಪ್ರಯಾಣಿಕರಿಗೆ ನಿಲ್ದಾಣ ಪ್ರವೇಶಕ್ಕೆ ಕೆಲವು ಮಾರ್ಗಸೂಚನೆ ನೀಡಿದೆ.ಈ ನಿಲ್ದಾಣದ ಮೂಲಕ ಬೈಯಪ್ಪನಹಳ್ಳಿ ಕಡೆಗೆ ಹೋಗುವ ಎಲ್ಲಾ ರೈಲುಗಳನ್ನು ಪ್ಲಾಟ್‌ಫಾರ್ಮ್‌ ಸಂಖ್ಯೆ 2 ರಿಂದ ನಿರ್ವಹಿಸಲಾಗುತ್ತಿದೆ. ಇಲ್ಲಿಗೆ ಟರ್ಮಿನಲ್‌ 2 (ಮಿಲ್ಲರ್ಸ್‌ ರಸ್ತೆ ಹಿಂಭಾಗದ ಪ್ರವೇಶ ದ್ವಾರ) ಮೂಲಕ ಪ್ರವೇಶಿಸಬಹುದು.ರೈಲು ಸಂಖ್ಯೆ 20671/2 (ಬೆಂಗಳೂರು ಕಂಟೋನ್ಮೆಂಟ್‌- ಮಧುರೈ ವಂದೇ ಭಾರತ್‌ ಎಕ್ಸ್‌ಪ್ರೆಸ್‌) ಮತ್ತು ರೈಲು ಸಂಖ್ಯೆ 20641/2 (ಬೆಂಗಳೂರು ಕಂಟೋನ್ಮೆಂಟ್‌ – ಕೊಯಮತ್ತೂರು) ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳನ್ನು ಪ್ಲಾಟ್‌ಫಾರ್ಮ್‌ 1ರ (ಕಂಟೋನ್ಮೆಂಟ್‌ ರಸ್ತೆ/ಶಿವಾಜಿನಗರ ಬದಿ) ಕೊನೆಯಲ್ಲಿ ಹೊಸದಾಗಿ ನಿರ್ಮಿಸಲಾದ 1ಎ ನಿಂದ 1ಇ ಪ್ಲಾಟ್‌ಫಾಮ್‌ರ್‍ಗಳಿಂದ ನಿರ್ವಹಿಸಲಾಗುತ್ತಿದೆ.ನಿಲ್ದಾಣಕ್ಕೆ ಬಸ್ಸಿನಲ್ಲಿ ಬರುವ ಪ್ರಯಾಣಿಕರು ಕಂಟೋನ್ಮೆಂಟ್‌ ಬಸ್‌ ನಿಲ್ದಾಣದಲ್ಲಿ ಇಳಿದು ಟರ್ಮಿನಲ್‌ 1 (ಕಂಟೋನ್ಮೆಂಟ್‌ ರಸ್ತೆ/ಶಿವಾಜಿನಗರ ಬದಿ) ತಲುಪಬಹುದು. ವಂದೇ ಭಾರತ್‌ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಪ್ಲಾಟ್‌ಫಾರ್ಮ್ 1 ರ ಬದಿಯಲ್ಲಿರುವ ಮುಖ್ಯ ದ್ವಾರದಲ್ಲಿ(ಟರ್ಮಿನಲ್‌ 1) ಇಳಿದು ಪ್ಲಾಟ್‌ಫಾರ್ಮ್ 1ರ ಮೂಲಕ ಈ ರೈಲುಗಳು ನಿಲ್ಲುವ ಪ್ಲಾಟ್‌ಫಾರ್ಮ್ 1ಎ ನಿಂದ 1ಇ ವರೆಗೆ ತಲುಪಬಹುದಾಗಿದೆ. ಅಲ್ಲದೆ, ಪ್ರಯಾಣಿಕರು ನಿಲ್ದಾಣದ ಮುಂಭಾಗದಲ್ಲಿರುವ ಟರ್ಮಿನಲ್‌ 1ರ ಬಳಿ ಇರುವ ತಾತ್ಕಾಲಿಕ ಪ್ರವೇಶ ದ್ವಾರ ಬಳಸಬಹುದು ಎಂದು ತಿಳಿಸಿದೆ.ಈ ತಾತ್ಕಾಲಿಕ ಪ್ರವೇಶ ದ್ವಾರದಿಂದ ಸರಿಸುಮಾರು 100 ಮೀಟರ್‌ ದೂರ ಕ್ರಮಿಸಿದರೆ ಪ್ಲಾಟ್‌ಫಾರ್ಮ್ 1ಎ ನಿಂದ 1ಇ ತಲುಪಬಹುದು. ಇತರ ಎಲ್ಲಾ ರೈಲುಗಳಿಗೆ, ಪ್ರಯಾಣಿಕರು ಟರ್ಮಿನಲ್‌ 2 (ಮಿಲ್ಲರ್ಸ್‌ ರಸ್ತೆ/ ಹಿಂಭಾಗದ ಗೇಟ್‌) ಬಳಸಲು ಕೋರಲಾಗಿದೆ.ಪ್ರಸ್ಥುತ ನಿಲ್ದಾಣದಲ್ಲಿ ಅಭಿವೃಧಿ ಕಾರ್ಯ ನಡೆಯುತ್ತಿರುವುದರಿಂದ ಟರ್ಮಿನಲ್‌ 2 (ಪ್ಲಾಟ್‌ಫಾರ್ಮ್ 2 ಬದಿ) ರಲ್ಲಿ ಪ್ರಸ್ತುತ ಪಾರ್ಕಿಂಗ್‌ ಸೌಲಭ್ಯವಿರುವುದಿಲ್ಲ. ಪ್ರಯಾಣಿಕರು ಪಾರ್ಕಿಂಗ್‌ ಸೌಲಭ್ಯಕ್ಕೆ ಬೇಕಾದಲ್ಲಿ ಟರ್ಮಿನಲ್‌ 1 (ಮುಂಭಾಗದ ಪ್ರವೇಶ) ರಲ್ಲಿ ಲಭ್ಯವಿರುವ ಪಾರ್ಕಿಂಗ್‌ ಸೌಲಭ್ಯಗಳನ್ನು ಬಳಸಲು ವಿನಂತಿಸಲಾಗಿದೆ.ಪ್ರಯಾಣಿಕರು ಒಂದು ವೇಳೆ ತಪ್ಪಾದ ಟರ್ಮಿನಲ್‌ ಮೂಲಕ ನಿಲ್ದಾಣವನ್ನು ಪ್ರವೇಶಿಸಿದರೆ, ಪ್ಲಾಟ್‌ಫಾಮ್‌ರ್‍ಗಳ ನಡುವೆ ದಾಟಲು (ಅಥವಾ ಟರ್ಮಿನಲ್‌ಗಳನ್ನು ಬದಲಾಯಿಸಲು) ಪಾದಚಾರಿ ಮೇಲ್ಸೇತುವೆ ಬಳಸಬಹುದಾಗಿದೆ.ಪ್ರಯಾಣಿಕರ ಅನುಕೂಲಕ್ಕಾಗಿ ನಿಲ್ದಾಣದ ಪ್ಲಾಟ್‌ಫಾರ್ಮ್‌ 1ರ ಬದಿಯಲ್ಲಿ(ಮುಂಭಾಗದ ಪ್ರವೇಶದ್ವಾರ/ಕಂಟೋನ್ಮೆಂಟ್‌ ರಸ್ತೆ) ಪ್ರಯಾಣಿಕರ ರಿಸರ್ವೇಷನ್‌ ಕೌಂಟರ್‌ ಮತ್ತು ನಾಲ್ಕು ಕಾಯ್ದಿರಿಸದ ಟಿಕೆಟ್‌ ಕೌಂಟರ್‌ಗಳು ಕಾರ್ಯನಿರ್ವಹಿಸುತ್ತಿವೆ. ಹಾಗೆಯೇ ಪ್ಲಾಟ್‌ಫಾರ್ಮ್ 2ರ ಕಡೆ (ಹಿಂಭಾಗದ ಪ್ರವೇಶ ದ್ವಾರ/ಮಿಲ್ಲರ್ಸ್‌ ರಸ್ತೆ) ಎರಡು ಕಾಯ್ದಿರಿಸದ ಟಿಕೆಟ್‌ ಕೌಂಟರ್‌ಗಳು ಮತ್ತು ಒಂದು ಸ್ವಯಂಚಾಲಿತ ಟಿಕೆಟ್‌ ವೆಂಡಿಂಗ್‌ ಮೆಷಿನ್‌ (ಎಟಿವಿಎಂ) ಕಾರ್ಯನಿರ್ವಹಿಸುತ್ತಿವೆ. ಯಾವುದೇ ಅನಾನುಕೂಲತೆ ತಪ್ಪಿಸಲು ಪ್ರಯಾಣಿಕರು ಸಾಕಷ್ಟು ಮುಂಚಿತವಾಗಿ ನಿಲ್ದಾಣಕ್ಕೆ ಆಗಮಿಸಬೇಕು ಮತ್ತು ನಿಲ್ದಾಣದಲ್ಲಿ ಲಭ್ಯವಿರುವ ಸೂಚನಾ ಫಲಕಗಳನ್ನು ಗಮನಿಸಬೇಕು ಎಂದು ಸೂಚಿಸಲಾಗಿದೆ.


Related Articles

Leave a Reply

Your email address will not be published. Required fields are marked *

Back to top button