ಇತ್ತೀಚಿನ ಸುದ್ದಿ
Trending

ಮದ್ದೂರು ಪಟ್ಟಣದ್ದ 100 ಅಡಿ ರಸ್ತೆಗೆ 175 ಕೋಟಿ ರೂ ಪ್ರಸ್ತಾವನೆ

ಮದ್ದೂರು ಪಟ್ಟಣದ ನಗರಸಭಾ ಕಛೇರಿಯಲ್ಲಿ ಎಸ್.ಎಂ. ಕೃಷ್ಣ ಸಭಾಂಗಣದಲ್ಲಿ ಅಧ್ಯಕ್ಷೆ ಕೋಕಿಲಾ ಅರುಣ್ ರವರ ಅಧ್ಯಕ್ಷತೆಯಲ್ಲಿ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಶಾಸಕರಾದ ಕೆಎಂ ಉದಯ್ ರವರು ಭಾಗವಹಿಸಿ ಮದ್ದೂರು ಪಟ್ಟಣದ ಸಮಗ್ರ ಅಭಿವೃದ್ಧಿ ಬಗ್ಗೆ ಚರ್ಚೇ ನಡೆಸಿ
ಮಾತನಾಡಿ ರಾಜ್ಯ ಸರ್ಕಾರ ಮದ್ದೂರು ಪುರಸಭೆಯನ್ನು ನಗರಸಭೆಯನ್ನಾಗಿ ಮೆಲ್ದರ್ಜೆಗೇರಿಸಿರುವ ಹಿನ್ನೆಲೆಯಲ್ಲಿ, ಮುಂದಿನ ಎರಡು ಮೂರು ತಿಂಗಳಲ್ಲಿ 50 ಕೋಟಿಗೂ ಹೆಚ್ಚಿನ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳು ಕೈಗೊಳ್ಳಲಾಗುವುದೆಂದು ತಿಳಿಸಿದರು.
ಕೆಮ್ಮಣ್ಣು ನಾಲೆ ಆಧುನೀಕರಣ ಕಾರ್ಯ ನಡೆಯುತ್ತಿದ್ದು, ಒಳಚರಂಡಿ ನೀರು ನಾಲೆಗೆ ಸೇರದಂತೆ ಕ್ರಮ ಕೈಗೊಳ್ಳಲಾಗಿದೆ. ಮುಖ್ಯರಸ್ತೆಯ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಿ, ಶೀಘ್ರದಲ್ಲೇ ರಸ್ತೆ ಅಗಲೀಕರಣಕ್ಕೆ ಚಾಲನೆ ನೀಡಲಾಗುವುದು ಎಂದರು
ಸರ್ಕಾರಿ ಪ್ರೌಢ ಶಾಲೆಯ ವೃತ್ತ–ಕರ್ನಾಟಕ ಟಾಕೀಸ್ ರಸ್ತೆ–ಗೊರವನಹಳ್ಳಿ ಮಾರ್ಗದ ಅಭಿವೃದ್ಧಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಪಟ್ಟಣದ ಅಭಿವೃದ್ಧಿಗೆ ಯಾವುದೇ ರಾಜಕೀಯ ಮಾಡದೆ, ಪ್ರತಿಪಕ್ಷ ಸದಸ್ಯರ ವಾರ್ಡ್‌ಗಳಿಗೂ ಸಮಾನ ಆದ್ಯತೆ ನೀಡಲಾಗುವುದೆಂದು ಸಭೆಯಲ್ಲಿ ತಿಳಿಸಿದರು ನಗರಸಭೆ ವ್ಯಾಪ್ತಿಯಲ್ಲಿ ನಾಯಿಗಳ ಕಚ್ಚುವಿಕೆಯಿಂದ ಗಾಯಗೊಂಡವರಿಗೆ ₹5,000 ಚಿಕಿತ್ಸೆ ವೆಚ್ಚವನ್ನು ನಗರಸಭೆಯಿಂದ ನೀಡಲು ಒಪ್ಪಿಗೆ. ಶವ ಸಾಗಿಸುವ ವಾಹನವನ್ನು ಉಚಿತವಾಗಿ ಬಳಸಲು ವ್ಯವಸ್ಥೆ.
ಪಟ್ಟಣದ ಪ್ರಮುಖ ವೃತ್ತಗಳಲ್ಲಿ ನಾಡಪ್ರಭು ಕೆಂಪೇಗೌಡ, ಅಮರಶಿಲ್ಪಿ ಜಕಣಾಚಾರಿ, ಬಸವಣ್ಣ, ಕನಕದಾಸ, ಬಾಲಗಂಗಾಧರನಾಥಸ್ವಾಮಿಜಿ ಸೇರಿದಂತೆ ಹಲವು ಗಣ್ಯರ ಪುತ್ಥಳಿಯನ್ನು ನಿರ್ಮಿಸುವ ಸಂಬಂಧ ಚರ್ಚಿಸಿ ಕ್ರಮ ಕೈಗೊಳ್ಳಲಾಯಿತು. 23 ವಾರ್ಡ್‌ಗಳಿಗೆ ಎಲ್‌ಇಡಿ ಬೀದಿ ದೀಪ ಅಳವಡಿಕೆ ಹಾಗೂ ಬೀದಿ ನಾಯಿಗಳಿಗೆ ಎಬಿಸಿ ಶಸ್ತ್ರಚಿಕಿತ್ಸೆ ನಿರ್ವಹಣೆ.ಸಭೆಯಲ್ಲಿ ಕುಡಿಯುವ ನೀರು, ರಸ್ತೆ–ಚರಂಡಿ, ನೈರ್ಮಲೀಕರಣ, ಆರೋಗ್ಯ, ಕಾನೂನು-ಸುವ್ಯವಸ್ಥೆ ಸೇರಿದಂತೆ ಹಲವಾರು ಮೂಲಭೂತ ಸೌಕರ್ಯಗಳ ಕುರಿತು ಚರ್ಚಿಸಿ ಒಮ್ಮತದ ನಿರ್ಣಯಗಳನ್ನು
ಕೈಗೊಳ್ಳಲಾಯಿತು. ನಂತರ ಸಾರ್ವಜನಿಕರ ಕುಂದು ಕೊರತೆ ಸಭೆ ನಡೆಸಿ ಸಂಬಂಧ ಪಟ್ಟ ಅಧಿಕಾರಿಗಳ ಜೊತೆಯಲಿ ಚರ್ಚೆನಡೆಸಿ ಸ್ಥಳದಲ್ಲೆ ಕೇಲವು ಸಮಸ್ಯೆಗಳನ್ನು ಬಗೆಹರಿಸಿದರು
……ಬಾಕ್ಸ್ ಹೇಳಿಕೆ ……
ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಸ್ವಪ್ನ ಹೆಚ್ ಜಿ ವಿದ್ಯಾರ್ಥಿನಿಯ ಉನ್ನತ ವಿದ್ಯಾಭ್ಯಾಸಕ್ಕೆ ತಮ್ಮ ಟ್ರಸ್ಟ್ ವತಿಯಿಂದ ಶಾಸಕರಾದ ಕೆಎಂ ಉದಯ್ ರವರು ಆರ್ಥಿಕ ಸಹಾಯ ನೀಡಿ ಪ್ರೋತ್ಸಾಹ ನೀಡಿದರು.
ಈ ಸಭೆಯಲ್ಲಿ ಶಾಸಕರಾದ ಕೆಎಂ ಉದಯ್, ನಗರಸಭೆ ಅಧ್ಯಕ್ಷೆ ಕೋಕಿಲಾ ಅರುಣ್, ಉಪಾಧ್ಯಕ್ಷ ಪ್ರಸನ್ನ ಕುಮಾರ್, ಸ್ಥಾಯಿ ಸಮಿತಿಯ ಅಧ್ಯಕ್ಷೆ ವನಿತಾ, ನಗರಸಭೆ ಸದಸ್ಯರುಗಳು, 5 ನಾಮ ನಿರ್ದೇಶಕ ಸದಸ್ಯರು ಹಾಗೂ ನಗರಸಭೆಯ ಆಯುಕ್ತರಾದ ಪರಶುರಾಮ್ ಸತ್ತೇಗೆರಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button