ಇತ್ತೀಚಿನ ಸುದ್ದಿ
Trending

ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಗೆ ಶಾಸಕ ಕೆ.ಎಂ ಉದಯ್ ಚಾಲನೆ

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದಾದ್ಯಂತ ಹಮ್ಮಿಕೊಂಡಿರುವ ಕರ್ನಾಟಕ ರಾಜ್ಯ ನಾಗರಿಕ ಸಾಮಾಜಿಕ,ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಹಿನ್ನೆಲೆಯಲ್ಲಿ ಮದ್ದೂರು ತಾಲೂಕು ಆಡಳಿತ ಮತ್ತು ಶಿಕ್ಷಣ ಇಲಾಖೆಯ ವತಿಯಿಂದ ಹಮ್ಮಿಕೊಂಡಿರುವ ಸಮೀಕ್ಷೆಗೆ ಮದ್ದೂರು ಶಾಸಕ ಕೆ.ಎಂ ಉದಯ್ ರವರು ತಹಶೀಲ್ದಾರ್ ರವರ ಜೊತೆಗೂಡಿ ಚಾಲನೆ ನೀಡಿದರು.

ಕೆ.ಎಂ ದೊಡ್ಡಿ ಸಮೀಪದ ಗುರುದೇವರಹಳ್ಳಿ ಕಾಲೋನಿ ಗ್ರಾಮದಲ್ಲಿ ಕೃಷಪ್ಪ ಎಂಬುವವರ ಮನೆಯಿಂದ ಮನೆಯವರ ಕುಟುಂಬಸ್ಥರ ವಿವರಗಳನ್ನು ಪಡೆದು ಭಾವಚಿತ್ರ ತೆಗೆಯುವ ಮೂಲಕ ಚಾಲನೆ ನೀಡಿದರು.

ಇದೆ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೆ.ಎಂ ದೊಡ್ಡಿ ಈ ಸಮೀಕ್ಷೆಯೂ ಜಾತಿ ಸಮೀಕ್ಷೆಯಾಗಿರುವುದಿಲ್ಲ, ರಾಜ್ಯ ಸರ್ಕಾರವು ರಾಜ್ಯದ ಜನತೆಯ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕತೆಯ ಸ್ಥಿತಿಗತಿಯನ್ನು ತಿಳಿಸಲು ನಡೆಸುತ್ತಿರುವ ಮಹತ್ವಾಕಾಂಕ್ಷಿಯ ಸಮೀಕ್ಷೆಯಾಗಿದ್ದು, ಸಮೀಕ್ಷೆದಾರರು ಮನೆಗಳ ಬಳಿಗೆ ಬಂದಾಗ ಸಾರ್ವಜನಿಕರು ತಮ್ಮ ಕುಟುಂಬದ ಸ್ಥಿತಿಗತಿಗಳ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡಬೇಕು ಎಂದು ಮನವಿ ಮಾಡಿದರು.

ಸಮೀಕ್ಷೆದಾರರು ಸಹ ಮನೆಗಳಿಗೆ ಮಾಹಿತಿ ಪಡೆಯಲು ಭೇಟಿ ನೀಡುವ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಸಹನೆ ಮತ್ತು ಸೌಜನ್ಯದಿಂದ ವರ್ತಿಸಬೇಕು,ಅನಕ್ಷರಸ್ಥರಿಗೆ ಅರ್ಥವಾಗುವ ಅವರಿಗೆ ಪ್ರಶ್ನೆಗಳನ್ನು ಕೇಳಿ ಅವರಿಂದ ಮಾಹಿತಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಮದ್ದೂರು ತಾಲೋಕಿನ ವ್ಯಾಪ್ತಿಯಲ್ಲಿ 754 ಬ್ಲಾಕ್ ಗಳಿದ್ದು 754 ಗಣತಿದಾರರನ್ನು ನೇಮಕ ಮಾಡಲಾಗಿದೆ, ಒಬ್ಬ ಗಣತಿದಾರರಿಗೆ 120 ಕುಟುಂಬಗಳಂತೆ ಬ್ಲಾಕ್ ಹಂಚಿಕೆ ಮಾಡಲಾಗಿದೆ 20 ಗಣತಿದಾರರಿಗೆ ಒಬ್ಬರು ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ಮದ್ದೂರು ತಹಸೀಲ್ದಾರ್ ಪರಶುರಾಮ ಸತ್ತಿಗೇರಿ ರವರು ಮಾತನಾಡಿ ಕರ್ನಾಟಕ ರಾಜ್ಯ ನಾಗರಿಕ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಮನೆಯ ಮುಖ್ಯಸ್ಥರ ಹೆಸರು,ತಂದೆಯ ಹೆಸರು,ತಾಯಿಯ ಹೆಸರು, ರೇಷನ್ ಕಾರ್ಡ್ ಸಂಖ್ಯೆ, ಆಧಾರ್ ಸಂಖ್ಯೆ ಮತದಾರರ ಗುರುತಿನ ಚೀಟಿ, ಮನೆಯ ವಿಳಾಸದ ಮೊಬೈಲ್ ಸಂಖ್ಯೆ,ಕುಟುಂಬದ ಒಟ್ಟು ಸದಸ್ಯರ ಸಂಖ್ಯೆ ಧರ್ಮ,ಜಾತಿ/ಉಪಜಾತಿ, ಜಾತಿ ವರ್ಗ ,ಜಾತಿ ಪ್ರಮಾಣದ ಪತ್ರ, ಪ್ರಮಾಣ ಪತ್ರದ ಸಂಖ್ಯೆ,ಜನ್ಮ ದಿನಾಂಕ,ವಯಸ್ಸು, ಲಿಂಗ,ಕುಟುಂಬಸ್ಥರ ವೈವಾಹಿಕ ಸ್ಥಿತಿಗತಿಗಳು, ಜನ್ಮ ಸ್ಥಳ,ವಿದ್ಯಾಭ್ಯಾಸದ ಮಟ್ಟ,ಮನೆಯ ಸದಸ್ಯರ ಸ್ಥಿತಿಗತಿಗಳ ಬಗ್ಗೆ ಸೇರಿದಂತೆ 60 ಪ್ರಶ್ನೆಗಳನ್ನು ಕೇಳಲಾಗುವುದು ಎಂದು ವಿವರಿಸಿದರು.

ಇದೆ ಸಂದರ್ಭದಲ್ಲಿ ಮದ್ದೂರು ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ, ತಾಲೂಕು ಹಿಂದುಳಿದ ವರ್ಗಗಳ ಇಲಾಖಾಧಿಕಾರಿ ಸುನೀತಾ, ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರು ರಾಜೀವ್ ಕಂದಾಯ ನಿರೀಕ್ಷಕರಾದ ರವೀಂದ್ರ ,ಮೋಹನ್,ಗ್ರಾಮ ಆಡಳಿತಾಧಿಕಾರಿ ಮನೋಹರ್,ಚಿಕ್ಕರಸಿನಕೆರೆ ಪಿಡಿಓ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button