
ಮೂಲ ಸೌಲಭ್ಯಗಳಲ್ಲಿ ಒಂದಾದ ಅಡುಗೆ ಅನಿಲ ವಿತರಣೆಯನ್ನು ದಂಧೆ ಮಾಡಿಕೊಂಡಿರುವ ತಾಲೂಕಿನ ವಿಜಯ ಏಜೆನ್ಸಿನಲ್ಲಿ ಗ್ರಾಹಕರಿಂದ ಹೆಚ್ಚುವರಿ ಹಣವಸೂಲಿ ಮಾಡುತ್ತಿರ ಬಗ್ಗೆ ದೂರು ಸಲ್ಲಿಕೆ ಅಡುಗೆ ಅನಿಲ ಮನೆಗಳಿಗೆ ವಿತರಿಸಲು 50 ರೂ. ಹೆಚ್ಚುವರಿಯಾಗಿ ವಸೂಲಿ ಮಾಡುತ್ತಿದ್ದು, ಹಣ ನೀಡಲು ಒಪ್ಪದ ಕುಟುಂಬಗಳಿಗೆ ವಿತರಣೆ ನಿಲ್ಲಿಸುವುದು ವಿಳಂಬ ಮಾಡುವ ಪ್ರಕರಣಗಳು ತಾಲೂಕಿನಾದ್ಯಂತ ಕಂಡುಬರುತಿದೆ. ಗುಂಡ್ಲುಪೇಟೆ ಪಟ್ಟಣದ ನಿವಾಸಿಯೊಬ್ಬರು ಗ್ಯಾಸ್ ಬುಕಿಂಗ್ ಮಾಡಿದು ನಂತರ ಡೀಲವರಿ ನೀಡಿದ್ದ ನಂತರ ನೆಟ್ ಹೆಸರಿನಲ್ಲಿ 50 ರೂಪಾಯಿ ಹೆಚ್ಚುವರಿ ಹಣಪಡೆದಿರುವುದು ಕಂಡು ಬಂದಿದೆ ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿ ಮಾಡುವುದು ಅಗತ್ಯ ಸಾಮಗ್ರಿ ಕಾಯ್ದೆಯ ಪ್ರಕಾರ ಕ್ರಿಮಿನಲ್ ಅಪರಾಧವಾಗಿದ್ದರೂ ಯಾವುದೇ ಏಜೆನ್ಸಿಗಳು ಅಂಜುತಿಲ್ಲ ವೆಂಬುದು ಗ್ರಾಹಕರ ಆರೋಪ. ಸರಕಾರ ವಿತರಕರಿಗೆ 5 ಕಿಮಿ ಒಳಗಿನ ಗ್ರಾಹಕರಿಗೆ ಉಚಿತ ಪೂರೈಕೆ ಸೇರಿದಂತೆ ಅವರ ನಿರ್ವಹಣೆಗೆ ಪ್ರತಿ ಸಿಲೆಂಡರ್ಗೆ 45 ರೂ. ಹೆಚ್ಚು ಕಮೀಷನ್ ಹಣ ನೀಡುತಿದೆ. ಆದರೆ ಹಣದ ಲಾಲಸೆಗೆ ಬಿಳುತಿದ್ದು, ವಿತರಣೆ ಹೆಸರಿನಲ್ಲಿ ಹೆಚ್ಚುವರಿ ಹಣ ಪಡೆಯುತಿದ್ದಾರೆ.
ಸರಕಾರದ ಆದೇಶದ ಪ್ರಕಾರ ಅಡುಗೆ ಅನಿಲವನ್ನು 5 ಕಿ.ಮೀ. ಒಳಗಿನ ಕುಟುಂಬಗಳಿಗೆ ವಿತರಕ ಕಂಪನಿಗಳು ಉಚಿತವಾಗಿ ವಿತರಿಸಬೇಕಿದೆ. ಅಲ್ಲದೆ 5 ಕಿ.ಮೀ.ಗೂ ಹೆಚ್ಚು ದೂರದ ಗ್ರಾಹಕರಿಗೆ 1 ಕಿಮಿಗೆ 2 ರೂ.ನಂತೆ ಹಣ ಪಡೆಯಬೇಕೆಂಬ ನಿಯಮ ವಿಧಿಸಿದೆ. ಆದರೆ ಈ ಕುರಿತಂತೆ ಯಾವುದೇ ಏಜೆನ್ಸಿಗಳು ಸರಕಾರದ ಆದೇಶ ಪಾಲಿಸುತ್ತಿಲ್ಲ.ವಿತರಣೆ ಹೆಸರಲ್ಲಿ ಸರಕಾರ ನಿಗಧಿಪಡಿಸಿರುವ ದರಕ್ಕಿಂತ ಹೆಚ್ಚು ಹಣ ಪಡೆಯುವ ಏಜೆನ್ಸಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಅಧಿಕಾರಿಗಳೇ ಜಾಣ ಕುರುಡು ಪ್ರದರ್ಶಿಸುತ್ತಾರೆ. ವೈಯಕ್ತಿಕ ಕಾರ್ಯಗಳ ಒತ್ತಡ ಹಾಗೂ ಏಜೆನ್ಸಿ ಬಳಿ ಹೋದಾಗ ಸಿಲಿಂಡರ್ ಇಲ್ಲ ನಾಳೆ ಬನ್ನಿ ಹೀಗೆ ಹಲವು ಕಾರಣಗಳಿಂದ ಗ್ರಾಹಕರು ಅನಿವಾರ್ಯವಾಗಿ ಡೆಲಿವರಿ ಬಾಯ್ಗಳನ್ನೇ ನಂಬಿದ್ದಾರೆ. ಆದರೆ ಅವರು ಇದನ್ನೇ ದಂಧೆಯಾಗಿಸಿಕೊಂಡು ಹೆಚ್ಚುವರಿ ಹಣ ಪೀಕುತ್ತಿದ್ದಾರೆ. ಪ್ರಶ್ನಿಸಿದರೆ ವಿತರಣೆಯಲ್ಲಿ ವಿಳಂಬ ಮಾಡುತ್ತಾರೆ.
ಪಟ್ಟಣದ ವಿಜಯ ಗ್ಯಾಸ್ ಏಜೆನ್ಸಿ ಅವರು ಹೆಚ್ಚುವರಿಯಾಗಿ 50 ರೂಪಾಯಿ ಹಣಪಡೆದುಕೊಂಡಿದ್ದರೆ ಇದರ ಬಗ್ಗೆ ಆಹಾರ ಇಲಾಖೆಯ ಉಪ ನಿರ್ದೇಶಕರಿಗೆ ದೂರು ನೀಡಲಾಗಿದೆ


