ಗುರು ಹಿರಿಯರನ್ನು ಯಾರು ಚೆನ್ನಾಗಿ ನೋಡಿಕೊಳ್ಳು ವವರು ಅವರಿಗೆ ಒಳ್ಳೆಯ ಸಂಸ್ಕೃತಿ ಇದ್ದಾಂಗೆ: ರವಿಶಂಕರ್ ಡಾಕೋಜಿ

ಮಳವಳ್ಳಿ: ಪ್ರಾಣಿಗಳು, ತಂದೆತಾಯಿ, ಗುರು ಹಿರಿಯರನ್ನು ಯಾರು ಚೆನ್ನಾಗಿ ನೋಡಿಕೊಳ್ಳು ವವರು ಅವರಿಗೆ ಒಳ್ಳೆಯ ಸಂಸ್ಕೃತಿ ಇದ್ದಾಂಗೆ ಎಂದು ನಿಯೋಜಿತ ಜಿಲ್ಲಾ ಪಾಲಕರಾದ ರವಿಶಂಕರ್ ಡಾಕೋಜಿ ತಿಳಿಸಿದರು.
ಮಳವಳ್ಳಿ ಪಟ್ಟಣದ ರೋಟರಿ ಶಾಲಾ ಆವರಣದಲ್ಲಿ
ರೋಟರಿ ಸಂಸ್ಥೆ ನೂತನ ಅಧ್ಯಕ್ಷರಾಗಿ ಆರೀಫ್ ಪಾಷ ಕಾರ್ಯದರ್ಶಿ ಯಾಗಿ ಟಿ.ಎಸ್ ಪ್ರಕಾಶ್ ಅಧಿಕಾರ ಪದ ಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರನ್ನು ಗೌರವದಿಂದ ಕಾಣುವ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು.
ರೋಟರಿ ಸಂಸ್ಥೆ ಉತ್ತಮವಾಗಿ ನಡೆಯುತ್ತಿರುವ ಒಳ್ಳೆಯ ಬೆಳವಣಿಗೆ ಎಂದು ಶ್ಲಾಘಿಸಿದರು.
ಇದೇ ವೇಳೆ ರೋಟರಿ ಸಂಸ್ಥೆ ನೂತನ ಅಧ್ಯಕ್ಷರಾಗಿ ಆರೀಫ್ ಪಾಷ ಕಾರ್ಯದರ್ಶಿ ಯಾಗಿ ಟಿ.ಎಸ್ ಪ್ರಕಾಶ್ ಹಾಗೂ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು.
ಕಾರ್ಯಕ್ರಮದಲ್ಲಿ ನಿಯೋಜಿತ ಜಿಲ್ಲಾ ಪಾಲಕರಾದ ರವಿಶಂಕರ್ ಡಾಕೋಜಿ,
ಜಿಲ್ಲಾ ಕಾರ್ಯದರ್ಶಿ ಹೊನ್ನೇಗೌಡ,
ವೆಂಕಟೇಶ್, ರಾಜೇಶ್, ವಲಯ ಕಾರ್ಯದರ್ಶಿ ಬಾರ್ನಾಡಪ್ಪ, ಎಂ. ಜೆ. ಸುರೇಶ್ , ಘನಶ್ಯಾಮ್ ದಾಸ್ ಸೇರಿದಂತೆ ಹಲವರು ಇದ್ದರು.


