
ಪಡಿತರ ದಾಸ್ತಾನು ಮದ್ದೂರು ಗೋದಾಮುವಿನ ಬಾಗಿಲು ಮುರಿದು ಒಳ ಪ್ರವೇಶಿಸಿರುವ ದುಷ್ಕರ್ಮಿಗಳು 94 ಮೂಟೆ ಸುಮಾರು 47 ಕ್ವಿಂಟಾಲ್ ಅಕ್ಕಿ ಕಳವು ಮಾಡಿರುವ ಘಟನೆ ಪಟ್ಟಣದಲ್ಲಿ ಮಂಗಳವಾರ ಬೆಳಿಗಿನ ಜಾವ ಜರುಗಿದೆ,ಪಟ್ಟಣದ ಮಳವಳ್ಳಿ ರಸ್ತೆಯಲ್ಲಿರುವ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಗೋದಾಮಿನಲ್ಲಿ ಸುಮಾರು 2882.14 ಕ್ವಿಂಟಾಲ್ ಅಕ್ಕಿ, 586.19 ಕ್ವಿಂಟಾಲ್ ಗೋಧಿ 873.87 ಕ್ವಿಂಟಾಲ್ ರಾಗಿ, ದಾಸ್ತಾನು ಮಾಡಲಾಗಿತ್ತು ಇದರಲ್ಲಿ 50 ಕೆ. ಜಿ. ಯ 94 ಮೂಟೆ ಸುಮಾರು 47 ಕ್ವಿಂಟಾಲ್ ಅಕ್ಕಿಯನ್ನು ಕಳವು ಮಾಡಿದ್ದಾರೆ.
ಮಂಗಳವಾರ ಮುಂಜಾನೆಯ ಸುಮಾರು 2 ಗಂಟೆ ಸಮಯದಲ್ಲಿ ಮಿನಿ ಲಾರಿಯೊಂದಿಗೆ ಆಗಮಿಸಿದ ದುಷ್ಕರ್ಮಿಗಳು ಗೋದಮಿನ ಬೀಗ ಮುರಿದು ಒಳ ಪ್ರವೇಶಿಸಿ 94 ಮೂಟೆ ಅಕ್ಕಿಯನ್ನು ಕಳವು ಮಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಪತ್ತೆಯಾಗಿದೆ. ಗೊದಾಮಿನಲ್ಲಿ ದಾಸ್ತಾನು ಇಟ್ಟಿದ್ದ ಪಡಿತರ ಪದಾರ್ಥಗಳು ವಿವಿಧ ನ್ಯಾಯಬೆಲೆ ಅಂಗಡಿಗಳಿಗೆ ಸರಬರಾಜು ಮಾಡಲು ಶೇಖರಣೆ ಮಾಡಿಟ್ಟಿದ್ದರೆನ್ನಾಗಿದ. ಸಂಬಂಧಿಸಿದ ಅಧಿಕಾರಿಗಳು ಕಚೇರಿಗೆ ಆಗಮಿಸಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮಳವಳ್ಳಿ ಡಿವೈಎಸ್ಪಿ ಕೃಷ್ಣಪ್ಪ, ಆಹಾರ ನಾಗರಿಕ ಸರಬರಾಜು ಜಂಟಿ ನಿರ್ದೇಶಕ ಎಂ.ಪಿ. ಕೃಷ್ಣಕುಮಾರ್, ವೃತ್ತ ನಿರೀಕ್ಷಕ ಶಿವಕುಮಾರ್, ಹಾಗೂ ಆಹಾರ ಇಲಾಖೆಯ ಶಿರಸ್ತೆದಾರ್ ಹಾಗೂ ಇತರ ಇಲಾಖೆ ಅಧಿಕಾರಿಗಳು ಘಟನಾಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗೋದಾಮು ವ್ಯವಸ್ಥಾಪಕ ನಟರಾಜ್ ನೀಡಿದ ದೂರಿನ ಮೇರೆಗೆ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಪೊಲೀಸರು ಅಗತ್ಯ ಕ್ರಮವಹಿಸಿದ್ದಾರೆ. ಗೋದಾಮ ಸರಿಯಾಗಿ ನಿರ್ವಹಣೆ ಮಾಡಿಲ್ಲಾ ,ಸಿ ಸಿ ಟಿ ವಿ ಇದ್ದರು ಪ್ರಯೋಜವಿಲ್ಲಾ ಕೆಟ್ಟು ಹೋಗಿವೆ. ರಾತ್ರಿ ಪಾಳಿ ಭ್ರದತೆಗೆ ಯಾವುದೇ ಗಾರ್ಡ್ ನೇಮಿಸಿಲ್ಲಾ , ಅಧಿಕಾರಿಗಳನ್ನು ಪ್ರಶ್ನಿಸಿದರೆ ನಾವು ಗೋದಾಮು ಬಾಡಿಗೆಗೆ ಪಡೆದಿದೇವೆ ಟಿ ಎ ಪಿ ಎಮ್ ಎಸ್ ರವರ ಜವಾಬ್ದಾರಿ ಎನ್ನುತಾರೆ ಆದರೆ ಸುಮಾರು ಜನರ ಹೊಟ್ಟೆ ತುಂಬಿಸಬೇಕಾಗಿದ ಅಕ್ಕಿ ಕಳ್ಳರ ಪಾಲಾಗಿದೆ ಇನ್ನೂ ಮುಂದಾದರೂ ತಾಲ್ಲೂಕು ಆಡಳಿತ ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು,ಅಧಿಕಾರಿಗಳ ಬೇಜವಾಬ್ದಾರಿಯಿಂದ ಯಿಂದ ಈ ಕಳ್ಳತನ ನಡೆದಿದೆ, ಇಲಾಖೆಗಳು ಸರಿಯಾಗಿ ತಮ್ಮ ಕರ್ತವ್ಯ ನಿರ್ವಹಿಸ ಬೇಕು ಎಂದು ಸಾರ್ವಜನಿಕರ ಅಭಿಪ್ರಾಯ ವಾಗಿದೆ.


