ಇತ್ತೀಚಿನ ಸುದ್ದಿ
Trending

ನಾಲ್ಕೈದು ದಿನ ರಜೆಗೆಂದು ಬೆಂಗಳೂರಿನಿಂದ ಊರಿಗೆ ಹೊರಟವರಿಗೆ ಶಾಕ್

ಬೆಂಗಳೂರು, ಏಪ್ರಿಲ್ 10: ಯುಗಾದಿ, ಗೌರಿ- ಗಣೇಶ, ದಸರಾ, ದೀಪಾವಳಿ, ಸಂಕ್ರಾಂತಿ… ಹೀಗೆ ಹಬ್ಬಗಳ ಸೀಸನ್ ಬಂತು ಅಂದರೆ ಖಾಸಗಿ ಬಸ್ ಮಾಲೀಕರಿಗೆ ಭರ್ಜರಿ‌ ಲಾಟರಿ. ಸಿಕ್ಕಿದ್ದೇ ಚಾನ್ಸ್ ಎಂದು ಜನರಿಂದ ದುಪ್ಪಟ್ಟು ವಸೂಲಿಗೆ ಇಳಿದು ಬಿಡುತ್ತಾರೆ. ರಜೆ (Holidays) ಅಂತ ಮನೆ ಕಡೆ ಹೊರಟವರ ಜೇಬಿಗೆ ಗುನ್ನ ಇಡುತ್ತಾರೆ. ಹೀಗೆ ಅವಕಾಶ ಸಿಕ್ಕಗಾಲೆಲ್ಲ ದರ ಏರಿಸುವ ಪ್ರವೇಟ್ ಬಸ್ (Private Bus Ticket Price Hike) ಮಾಲೀಕರು, ಈ ಬಾರಿಯೂ ವಸೂಲಿಗೆ ಮುಂದಾಗಿದ್ದಾರೆ. ಈ ಬಾರಿ ಸಾಲಾಗಿ ನಾಲ್ಕೈದು ದಿನ ರಜೆ ಸಿಕ್ಕಿದ್ದು ಜನ ತಮ್ಮ ತಮ್ಮ ಊರಿನ ಕಡೆ ಮುಖ ಮಾಡಿದ್ದಾರೆ. ಇಂದು (ಗುರುವಾರ) ಮಹಾವೀರ ಜಯಂತಿ, ಶುಕ್ರವಾರ ಒಂದು ದಿನ ರಜೆ ಹಾಕಿಕೊಂಡರೆ ಶನಿವಾರ ಸೆಕೆಂಡ್ ಸ್ಯಾಟರ್​ಡೇ ಮತ್ತು ಹನುಮಜಯಂತಿ ರಜೆ, ಭಾನುವಾರ ಹೇಗೂ ರಜೆ ಸಿಗುತ್ತದೆ. ಸೋಮವಾರ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ. ಸರ್ಕಾರಿ ರಜೆ. ಅಲ್ಲಿಗೆ ಶುಕ್ರವಾರ ಒಂದು ದಿನ ರಜೆ ಹಾಕಿಕೊಂಡರೆ ಐದು ದಿನ ರಜೆ ಸಿಗುತ್ತದೆ. ಈ ಹಿನ್ನೆಲೆ ಜನ ಬೆಂಗಳೂರಿನಿಂದ (Bengaluru) ಊರಿಗೆ ಹೋಗಲು ಮುಂದಾಗುತ್ತಿದ್ದಾರೆ.ಆದರೆ ಖಾಸಗಿ ಬಸ್ ದರ ದುಪ್ಪಟ್ಟು ಆಗಿರುವುದು ಊರಿಗೆ ಹೊರಟವರಿಗೆ ಶಾಕ್ ನೀಡಿದೆ. ಇದಕ್ಕೆ ಜನ ಆಕ್ರೋಶ ವ್ಯಕ್ತಪಡಿದ್ದಾರೆ. ಮಂಗಳವಾರ ದೇವದುರ್ಗದಿಂದ ಬೆಂಗಳೂರಿಗೆ ಖಾಸಗಿ ಬಸ್​ನಲ್ಲಿ 750 ರುಪಾಯಿ ಟಿಕೆಟ್ ದರ ಇತ್ತು. ಗುರುವಾರ ಆನ್​​ಲೈನ್​​ನಲ್ಲಿ 2 ಸಾವಿರ ರುಪಾಯಿ ತೋರಿಸುತ್ತಿದೆ ಎಂದು ಪ್ರಯಾಣಿಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಖಾಸಗಿ ಬಸ್ ದರ ಏರಿಕೆ ವಿವರ (ರೂಪಾಯಿಗಳಲ್ಲಿ)

ಬೆಂಗಳೂರು-ಧಾರವಾಡ

  • ಹಿಂದಿನ ದರ = 750 – 2999
  • ಪ್ರಸ್ತುತ ದರ = 850 – 10,000

ಬೆಂಗಳೂರು- ಧರ್ಮಸ್ಥಳ

  • ಹಿಂದಿನ ದರ = 600-850
  • ಪ್ರಸ್ತುತ ದರ = 1250-2000

ಬೆಂಗಳೂರು-ಮೈಸೂರು

  • ಹಿಂದಿನ ದರ = 190-1600
  • ಪ್ರಸ್ತುತ ದರ = 300-5999

ಬೆಂಗಳೂರು-ಕೊಡಗು

  • ಹಿಂದಿನ ದರ = 580-990
  • ಪ್ರಸ್ತುತ ದರ = 1000-1900

ಬೆಂಗಳೂರು-ಚಿಕ್ಕಮಗಳೂರು

  • ಹಿಂದಿನ ದರ = 500-700
  • ಪ್ರಸ್ತುತ ದರ = 599-1150

ಬೆಂಗಳೂರು-ಮಂಗಳೂರು

  • ಹಿಂದಿನ ದರ = 600-2999
  • ಪ್ರಸ್ತುತ ದರ = 900-3000

ಬೆಂಗಳೂರು-ಹುಬ್ಬಳ್ಳಿ

  • ಹಿಂದಿನ ದರ = 759-3,800
  • ಪ್ರಸ್ತುತ ದರ = 819-10,000

ಬೆಂಗಳೂರು- ಕಾರವಾರ

  • ಹಿಂದಿನ ದರ = 850-2999
  • ಪ್ರಸ್ತುತ ದರ = 1499-3000

ಬೆಂಗಳೂರು-ಕಲ್ಬುರ್ಗಿ

  • ಹಿಂದಿನ ದರ = 850-4000
  • ಪ್ರಸ್ತುತ ದರ = 1399-2400

ಬೆಂಗಳೂರು-ಶಿವಮೊಗ್ಗ

  • ಹಿಂದಿನ ದರ = 350-1899
  • ಪ್ರಸ್ತುತ ದರ = 799-2299

ಈ ಬಾರಿ ರಜೆಗೆ ಊರಿಗೆ ಹೋಗುವವರಿಗೆ ಖಾಸಗಿ ಬಸ್​ಗಳು ಮಾತ್ರ ದರ ಏರಿಕೆ ಮಾಡಿಲ್ಲ. ಕೆಎಸ್ಆರ್​​ಟಿಸಿ ಬಸ್​ಗಳೂ ದರ ಏರಿಕೆ ಮಾಡಿವೆ. ಕೆಎಸ್ಆರ್​​ಟಿಸಿ ಬಸ್​ಗ ಶೇ 15 ರಿಂದ 20 ರಷ್ಟು ದರ ಏರಿಕೆ ಮಾಡಿವೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸಾಮಾನ್ಯವಾಗಿ ಬೆಂಗಳೂರು – ಹುಬ್ಬಳ್ಳಿಗೆ ಎಸಿ ಸ್ಲೀಪರ್ ಸಾಮಾನ್ಯ ದರ – 1100 ರುಪಾಯಿ. ಆದ್ರೆ ಬುಧವಾರ -1350 ಆಗಿದೆ. ನಾನ್ ಎಸಿ ಸ್ಲೀಪರ್ ಸಾಮಾನ್ಯ ದರ -800 ರುಪಾಯಿ ಬುಧವಾರ – 1100 ರೂ ಆಗಿದೆ. ಬೆಂಗಳೂರು – ಬೀದರ್ ಎಸಿ ಸ್ಲೀಪರ್ ಸಾಮಾನ್ಯ ದರ – 1500 ಇತ್ತು. ಈಗ 1900 ರಿಂದ 2100 ಆಗಿದೆ. ನಾನ್ ಎಸಿ ಸ್ಲೀಪರ್ ಸಾಮಾನ್ಯ ದರ – 1200 ಯಿಂದ 1850 ರೂ.ಗೆ ಜಾಸ್ತಿ ಆಗಿದೆ. ಬೆಂಗಳೂರು – ಮಂಗಳೂರು ಎಸಿ ಸ್ಲೀಪರ್ ಸಾಮಾನ್ಯ ದರ – 1500 ರೂ. ಈಗಿನ ದರ – 1850 ರೂ. ಆಗಿದೆ. ನಾನ್ ಎಸಿ ಸಾಮಾನ್ಯ ದರ – 1100 ರೂ, ಈಗಿನ ದರ – 1500 ಆಗಿದೆ.

Related Articles

Leave a Reply

Your email address will not be published. Required fields are marked *

Back to top button