ಇತ್ತೀಚಿನ ಸುದ್ದಿ
Trending

ಮಹಾರಾಣಿ, ಶ್ವಾನದ ಮೇಲೇರಿ ಬೀದಿಗಳಲ್ಲಿ ಸವಾರಿ

ಶ್ವಾನ (dogs) ಗಳ ನಿಷ್ಕಲ್ಮಶ ಪ್ರೀತಿ, ನಿಷ್ಠೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮನುಷ್ಯನ ಆಪ್ತ ಸ್ನೇಹಿತನಾಗಿ ಸದಾ ಜೊತೆಗೆ ಇರುತ್ತದೆ. ಇದು ಪುಟಾಣಿ ಮಕ್ಕಳ ಉತ್ತಮ ಸ್ನೇಹಿತ ಅಂದ್ರೆ ತಪ್ಪಾಗಲಾರದು. ಕೆಲವೊಮ್ಮೆ ಈ ಶ್ವಾನಗಳು ಮಕ್ಕಳಿಗೆ ಹೈ ಸೆಕ್ಯೂರಿಟಿ ನೀಡುತ್ತವೆ. ಆದರೆ ಇದೀಗ ಪುಟ್ಟ ಬಾಲಕಿ (little girl) ಹಾಗೂ ಶ್ವಾನಗಳ ಬಾಂಧವ್ಯ ಸಾರುವ ವಿಡಿಯೋವೊಂದು ವೈರಲ್ ಆಗಿದ್ದು, ಬಾಲಕಿಯೊಬ್ಬಳು ಬೀದಿ ನಾಯಿಯ ಮೇಲೆ ಸವಾರಿ ಮಾಡಿದ್ದಾಳೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಈ ನಿಷ್ಕಲ್ಮಶ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.@annju00 ಹೆಸರಿನ ಖಾತೆಯಲ್ಲಿ ಹೃದಯಸ್ಪರ್ಶಿ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಬೀದಿ ನಾಯಿಗಳ ಜೊತೆಗೆ ಪುಟ್ಟ ಬಾಲಕಿ ಒಂದೊಳ್ಳೆ ಬಾಂಧವ್ಯ ಹೊಂದಿರುವುದನ್ನು ಕಾಣಬಹುದು. ಶ್ವಾನಗಳ ಜೊತೆ ಸೇರಿ ಪುಟ್ಟ ಬಾಲಕಿ ರಸ್ತೆ ದಾಟಿದ್ದಾಳೆ. ಹೌದು ಶ್ವಾನದ ಮೇಲೇರಿ ಸವಾರಿ ಮಾಡಿದ್ದು, ಆ ಬಳಿಕ ಈ ಶ್ವಾನಗಳ ಗುಂಪು ಆಕೆಯನ್ನೆ ಹಿಂಬಾಲಿಸಿದೆ. ಈ ನಿಷ್ಕಲ್ಮಶ ಪ್ರೀತಿಯನ್ನು ಸಾರುವ ವಿಡಿಯೋ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.

ಈ ವಿಡಿಯೋವೊಂದು ನಾಲ್ಕು ಲಕ್ಷ ಐವತ್ತು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ಈ ವಿಡಿಯೋವನ್ನು ಮೆಚ್ಚಿಕೊಂಡಿದ್ದಾರೆ. ಬಳಕೆದಾರರೊಬ್ಬರು, ಈ ಭದ್ರತೆಗೆ ಎಷ್ಟು ಪಾರ್ಲೆ ಜಿ ಬಿಸ್ಕೆಟ್ ಹಾಕಿದ್ದೀರಿ ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಉನ್ನತ ಮಟ್ಟದ ಭದ್ರತೆ ಎಂದಿದ್ದಾರೆ. ಇನ್ನೊಬ್ಬರು, ಶ್ವಾನಗಳ ಪ್ರಪಂಚದಲ್ಲಿ ಈಕೆಯೇ ರಾಣಿ ಎಂದು ಕಾಮೆಂಟ್ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button