
ಸಕಲೇಶಪುರ : ಎಲ್ಲಾ ಧರ್ಮಗಳಲ್ಲಿ ಅರಿವಿಲ್ಲದೆ ಹಲವರು ಪಂಚಶೀಲ ಪಾಲಿಸಿಕೊಂಡು ಬಂದಿದ್ದಾರೆ ಅವರೆಲ್ಲರೂ ಬೌದ್ಧ ಅನುಯಾಯಿಗಳೇ ಎಂದು ಧಮ್ಮಾಚಾರಿ ಜಯಸೇನ ಹೇಳಿದರು.ಸಕಲೇಶಪುರ ಡಾ!!ಬಿ ಆರ್ ಅಂಬೇಡ್ಕರ್ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಕಲೇಶಪುರ ವತಿಯಿಂದ ಭಗವಾನ್ ಬುದ್ದರ 2569 ನೇ ಜಯಂತಿ ಆಚರಣೆ ಮಾಡಿದರು. ಬೆಂಗಳೂರಿನ ಮಹಾಬೋದಿ ಸೊಸೈಟಿ ಬೌದ್ದ ಬಿಕ್ಕುಗಳು ಪಾಳಿ ಭಾಷೆಯ ಬುದ್ದರ ಉಪದೇಶ ಎಲ್ಲರೊಂದಿಗೆ ಪಠನೆ ಮಾಡಿ ಆಶಿರ್ವಚನ ನೀಡಿದರು.
ಈ ಸಂಧರ್ಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಸಿಮೆಂಟ್ ಮಂಜು. ಪ್ರಪಂಚದ ಎಲ್ಲಾ ಕಡೆ ಬುದ್ದರ ಪ್ರತಿಮೆ ಮತ್ತು ಹೆಸರನ್ನು ಕೇಳಬಹುದು. ನೇಪಾಳದಲ್ಲಿ ಬುದ್ದ ಹುಟ್ಟಿರಬಹುದು. ಆದರೆ ನೇಪಾಳ ಕ್ಕಿಂತ ಚೀನಾ. ಥೈಲ್ಯಾಂಡ್. ವಿಯೆಟ್ನಾಂ. ಜಪಾನ್. ಕೋರಿಯಾ. ಇನ್ನೂ ಮುಂತಾದ ಹಲವಾರು ರಾಷ್ರಗಳಲ್ಲಿ ಬೌದ್ದ ಅನುಯಾಯಿಗಳು ಇದ್ದಾರೆ. ಇಡೀ ಪ್ರಪಂಚಕ್ಕೆ ಶಾಂತಿ ಮಾರ್ಗದ ಸಂದೇಶ ತೋರಿದ ಗೌತಮ ಬುದ್ಧರ ಅನುಯಾಯಿ ಬಾಬಾ ಸಾಹೇಬ್ ಅಂಬೇಡ್ಕರ್ ಆದರು. ಅವರ ಜೊತೆ ಲಕ್ಷಾಂತರ ಜನ ಅನುಯಾಯಿಗಳು ಆದರು. ನಮ್ಮ ಪ್ರಧಾನ ಮಂತ್ರಿ ಗಳು ದೀಕ್ಷಾ ಭೂಮಿಗೆ ಬೇಟಿ ನೀಡಿದ್ದನ್ನು ಸ್ಮರಿಸಿದರು.
ಈ ಬೌದ್ಧ ಜಯಂತಿ ಕಾರ್ಯಕ್ರಮ ಯಶಸ್ವಿಯಾಗಿ ಪ್ರಾರ್ಥನೆ ಮಾಡುವ ಮುಖಾಂತರ ಪ್ರಾರಂಭ ಮಾಡಿದ್ದೀರ ನಾನು ಕೂಡ ಬೌದ್ಧ ಅನುಯಾಯಿ ಆಗಿ ಪ್ರಾರ್ಥನೆ ಮಾಡಿದ್ದು ನನಗೆ ಹೊಸ ಅನುಭವ ಆಗಿದೆ. ಎಲ್ಲರೂ ಬಿಳಿ ಬಣ್ಣದ ಡ್ರಸ್ ನಲ್ಲಿ ಪಾಲ್ಗೊಂಡಿರುವುದು ವಿಷೇಷವಾಗಿದೆ. ಬಿಳಿ ಬಣ್ಣ ಶಾಂತಿಯ ಸಂಕೇತ . ಈ ಒಂದು ಬುದ್ದರ ಜಯಂತಿ ಕಾರ್ಯಕ್ರಮದಲ್ಲಿ ಅವಕಾಶ ಸಿಕ್ಕಿದ್ದಕ್ಕೆ ಧನ್ಯವಾದ ಹೇಳಿದರು.
ಧಮ್ಮಾಚಾರಿ ಜಯಸೇನಾ ಮಾತನಾಡಿ ನಾವು ಇದುವರೆಗೂ ಪೂಜೆ ಮಾಡಿ ತ್ರಿಸರಣ- ಪಂಚಶೀಲಗಳ ಸಂದೇಶ ವಿವರಿಸುತ್ತಾ ಪಾಳಿ ಭಾಷೆಯಲ್ಲಿ ಬಿಕ್ಕುಗಳು ಪಂಚ ಶೀಲ ಬೋದಿಸಿದ್ದಾರೆ.
ಅದರ ಅರ್ಥ
- ಪಾಣಾತಿಪಾತ ವೇರಮಣಿ ಎಂದರೆ ಪ್ರಾಣ ಹತ್ಯೆ ಮಾಡುವುದಿಲ್ಲ. ಪ್ರಾಣಿ ಹತ್ಯೆ ಎಂದು ತಿಳಿದುಕೊಳ್ಳಬೇಡಿ ಬುದ್ದರ ಸಂದೇಶ ವಿಶಾಲವಾಗಿದೆ. ಪಾಣ ಹತ್ಯೆ ಎಂದರೆ ಪ್ರತಿಯೊಂದು ಜೀವಿಯನ್ನು ಹತ್ಯೆ ಮಾಡುವುದಿಲ್ಲ.
- ಅದಿನ್ನ ದಾನ ಎಂದರೆ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದೊಂದು ವೃತ್ತಿ ಜೀವನದಲ್ಲಿ ನಡೆಸಬೇಕಾಗಿರುತ್ತದೆ ಆದರೆ ತನಗೂ ಯೋಗ್ಯವಾಗಿರುವ ಮತ್ತು ಇತರಿಗೂ ಜೀವನ ನಡೆಸಲು ಮತ್ತು ಆತ್ಮ ವಂಚನೆ ಜೀವನ ನಡೆಸಬಾರದು ಕ್ರಮಬದ್ಧವಾದ ಜೀವನ ನಡೆಸಲು ಬುದ್ದ ಹೇಳಿದ್ದಾರೆ.
ಹಾಗೆ. - ಕಾಮೇಸು ಮಿಚ್ಚಾಚ್ಚಾರ ಎಂದರೆ. ಎಲ್ಲರೂ ಕೂಡ ಸಾಂಸಾರಿಕ ಜೀವನ ನಡೆಸುತ್ತೇವೆ. ಸಾಂಸಾರಿಕ ಜೀವನದಲ್ಲಿ ಶುದ್ದವಾಗಿರಬೇಕು. ಯಾವುದೇ ಅತ್ಯಾಚಾರ ಕಾಮ ಪ್ರಕರಣ ಮಾಡಬಾರದು. ಪರಿಶುದ್ದ ದಾಂಪತ್ಯ ಮಾಡಬೇಕು ಎನ್ನುವುದು.
- ಮೂಸವಾದ ವೇರಮಣಿ ಎಂದರೆ ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎಂಬಂತೆ ನಾವು ಏನು ಜನರೊಂದಿಗೆ ಮಾತನಾಡುತ್ತೇವೆ ಆ ಮಾತುಗಳು ಬಾಂಧವ್ಯ ಬೆಳೆಯುವಂತೆ ಇರಬೇಕು. ಯಾವುದೇ ತಾರತಮ್ಯ ಇರಬಾರದು. ಬದುಕಿಗೆ ಒಳಿತನ್ನು ಮಾಡುವಂತಿರಬೇಕು. ಅಸಹ್ಯ ಮಾತು ಉಚ್ಚಾರಣೆ ಮಾಡಬಾರದು. ಬದಲಾಗಿ ಪ್ರೀತಿ ಕರುಣೆ ಮೈತ್ರಿ.
ಇಲ್ಲಿ ಹಲವರು ಉಪಾಸಕರಾಗಿ ಜೀವನ ನಡೆಸುತ್ತಿದ್ದಾರೆ. ಈ ಮೇಲಿನ ಐದು ಬೋಧನೆಗಳನ್ನು ಯಾರು ಬೋದಿಸುತ್ತಾರೋ ಅವರೆಲ್ಲಾ ಬೌದ್ದರು. ಬೌದ್ಧ ಧರ್ಮ ಒಂದೇ ಅಲ್ಲ ಹಲವಾರು ಧರ್ಮಗಳಲ್ಲಿದ್ದು ಈ ಐದು ಪಂಚಶೀಲಗಳನ್ನು ಪಾಲನೆ ಮಾಡುವವರಿದ್ದಾರೆ. ವಿಶಾಲವಾದ ದೃಷ್ಟಿ ಕೋನದಲ್ಲಿ ಇದನ್ನು ಯಾರು ಅನುಸರಿಸುತ್ತಾರೋ ಅವರೆಲ್ಲರೂ ಬುದ್ದರ ಅನುಯಾಯಿಗಳೇ. ಬುದ್ದರ ಬೋದನೆ ಯಾವುದೇ ಒಂದು ಧರ್ಮಕ್ಕೆ ಸೀಮಿತ ಆಗಿಲ್ಲ ಎಲ್ಲರೂ ಸುಖ ಶಾಂತಿ ನೆಮ್ಮದಿ ಪಥದಲ್ಲಿ ಸಾಗಲಿ ಎಂಬುದು ಬುದ್ದರ ಸಂದೇಶ. ಎಲ್ಲರೂ ಅರ್ಥ ಮಾಡಿಕೊಂಡು ತತ್ವ ಅಳವಡಿಸಿ ಕೊಂಡು ಅನುಸರಿಸಿ ಸಹಬಾಳ್ವೆ ಯಿಂದ ಜೀವನ ನಡೆಸೋಣ ಎಂಬುದು ಬುದ್ದರ ಆಶಯ. ಈ ಕಾರ್ಯಕ್ರಮದಲ್ಲಿ ಉಪ ವಿಭಾಗಾಧಿಕಾರಿ ಡಾ!! ಶೃತಿ. ಸದ್ದಮ್ಮ ಬೌದ್ಧ ವಿಹಾರದ ಅಧ್ಯಕ್ಷರಾದ ನಾಗಸೇನ. ಜಂಬೂದ್ವೀಪ ಬೌದ್ಧ ವಿಹಾರದ ಅಧ್ಯಕ್ಷ ಚಂದ್ರಶೇಖರ್. ಮಾತನಾಡಿದರು.ತಹಶಿಲ್ದಾರ್ ಅರವಿಂದ್. ಪುರಸಭೆ ಮುಖ್ಯಾಧಿಕಾರಿ ಮಹೇಶ್ವರಪ್ಪ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದೇವರಾಜ್ ನಿರೂಪಣೆ ಮಾಡಿದರು. ಸಕಲೇಶಪುರ ತಾಲೋಕಿನ ಬೌದ್ಧ ಕುಟುಂಬಗಳು ನಾಗರೀಕರು ಹಾಗು ಮುಖಂಡರು ಭಾಗವಹಿಸಿದ್ದರು


