ಇತ್ತೀಚಿನ ಸುದ್ದಿ
Trending

ಗೌತಮ ಬುದ್ಧರ ಬೋಧನೆಗಳು ಪ್ರತಿ ಯುಗದಲ್ಲೂ ಸಾಗುತ್ತಿವೆ ’ಅರುಂಧತಿಯಾರ್’ ಎಂದು ಬರೆಸಲು ಆರ್.ಕೃಷ್ಣ ಮನವಿ

ಮೈಸೂರು : ಪರಿಶಿಷ್ಟ ಜಾತಿಗೆ ಸೇರಿದ ಆದಿ ದ್ರಾವಿಡ, ಅದಿ ಆಂಧ್ರ, ಅದಿ ಕರ್ನಾಟಕ ಜಾತಿ ಧೃಡಿಕರಣದಲ್ಲಿರುವ ಪೌರ ಕಾರ್ಮಿಕರು, ಸಪಾಯಿ ಕರ್ಮಚಾರಿಗಳು, ಮ್ಯಾನುಯಲ್ ಸ್ಕ್ಯಾವೆಂಜರ್‌ಗಳು ಮತ್ತು ರಾಷ್ಟ್ರೀಯ ಸಫಾಯಿ ಕರ್ಮಾಚಾರಿಗಳ ನಾಯಕರಾದ ಐಪಿಡಿ ಸಾಲಪ್ಪ ಅವರ ಕುಲಬಾಂಧವರೆಲ್ಲಾ ರಾಜ್ಯಾದ್ಯಂತ ನಡೆಯುತ್ತಿರುವ ಒಳ ಮೀಸಲಾತಿ ಸಮೀಕ್ಷೆಯಲ್ಲಿ ಉಪ ಜಾತಿ ಕ್ರಮ ಸಂಖ್ಯೆ-9 ರಲ್ಲಿ ’ಅರುಂಧತಿಯಾರ್’ ಎಂದು ಬರೆಸಬೇಕೆಂದು ಅಖಿಲ ಕರ್ನಾಟಕ ಅರುಂಧತಿಯಾರ್ ಮಹಾಸಭಾ ಅಧ್ಯಕ್ಷರಾದ ಆರ್.ಕೃಷ್ಣ ಮನವಿ ಮಾಡಿದರು.

ನಗರದ ನಜರ್‌ಬಾದ್‌ನಲ್ಲಿರುವ ಸರ್ಕಾರಿ ಅತಿಥಿಗೃಹದಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಯ ಚಾಮರಾಜನಗರ ಜಿಲ್ಲೆಯ ಮುಖಂಡರುಗಳಾದ ಸಾಹಿತಿ ಅಂಕನಶೆಟ್ಟಿಪುರ ಶಂಕರ್, ಮೈಸೂರು ಜಿಲ್ಲಾ ಮುಖಂಡರಾದ ಸುಂದರ್, ಸೋಮ, ಮಂಡ್ಯ ಜಿಲ್ಲಾ ಮುಖಂಡರಾದ ಸಿದ್ದರಾಜು ನೇತೃತ್ವದಲ್ಲಿ ಸಮಾಲೋಚನಾ ಸಭೆ ನಡೆಸಿ ಒಳ ಮೀಸಲಾತಿ ಸಮೀಕ್ಷೆಯಲ್ಲಿ ಆದಿ ದ್ರಾವಿಡ ಕುಲ ಬಾದವರೆಲ್ಲ ಸಮೀಕ್ಷೆಯ ಕಾಲಂ ನಂ-9 ರಲ್ಲಿ ಅರುಂಧತಿಯಾರ್ ಎಂದು ಬರೆಸುವಂತೆ ಅಚಿತಿಮ ತೀರ್ಮಾನ ಕೈಗೊಂಡು ಮಾತನಾಡಿದರು.

ಜಸ್ಟೀಸ್ ನಾಗಮೋಹನ್‌ದಾಸ್ ಅವರ ನೇತೃತ್ವದ ಏಕ ಸದಸ್ಯ ವಿಚಾರಣಾ ಆಯೋಗವು ಏಪ್ರಿಲ್ 6 ರಿಂದ 21ರವರೆಗೆ ಒಳ ಮಿಸಲಾತಿ ಹಂಚಿಕೆಗಾಗಿ ಜಾತಿ ಗಣತಿ ಸಮೀಕ್ಷೆ ನಡೆಸುತ್ತಿದೆ,ಆದಿ ದ್ರಾವಿಡ ಕುಲ ಬಾದವರೆಲ್ಲ ಸ್ಥಾಭಿಮಾನದಿಂದ ಸಮೀಕ್ಷೆಯ ಕಾಲಂ ನಂ-9 ರಲ್ಲಿ ಅರುಂಧತಿಯಾರ್ ಎಂದು ಕಡ್ಡಾಯವಾಗಿ ಬರೆಸಬೇಕು. ಇದರಿಂದ ನಮ್ಮ ಸಮುದಾಯಕ್ಕೆ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಅವಕಾಶಗಳನ್ನು ದೊರಕಿಸಿಕೊಳ್ಳಲು ಸಾಧ್ಯವಿದೆ ಎಂದರು.

ಸ್ವಾತಂತ್ರ್ಯ ಬಂದು 78 ವರ್ಷ ಕಳೆದರು ಸರ್ಕಾರದಿಂದ ಸಿಗುವ ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ, ರಾಜಕೀಯ ಮತ್ತು ಸಾಮಾಜಿಕ ಸ್ಥಾನಮಾನಗಳಿಂದ ನಾವು ವಂಚಿತರಾಗಿದ್ದೇವೆ. ಕಸ ಗುಡಿಸುವುದು, ಶೌಚಾಲಯಗಳನ್ನು ಸ್ವಚ್ಛಗೊಳಿಸುವಂತರ ಹೀನಾಯವಾದ ವೃತ್ತಿಗಳನ್ನು ಮಾಡಿಕೊಂಡು ಇಂದಿಗೂ ಹಸಿದ ಕುಟುಂಬಗಳಾಗಿ ಬದುಕುತ್ತಿದ್ದೇವೆ.ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಮತ್ತು ಸಮಾಜದಲ್ಲಿ ಒಂದು ಸ್ಥಾನಮಾನ ಪಡೆದು ಬದುಕಬೇಕಾದರೆ ಪಕ್ಕದ ತಮಿಳುನಾಡು ರಾಜ್ಯದ ಮಾದರಿ ಪ್ರತ್ಯೇಕ ಒಳ ಮೀಸಲಾತಿ ಪಡೆಯಲು ಅಗತ್ಯವಿದೆ. ಸರ್ಕಾರವೇ ನಮ್ಮ ಮನೆ ಬಾಗಿಲಗೆ ಬಂದು ಒಂದು ಸುವರ್ಣಾವಕಾಶವನ್ನು ನಮಗೆ ನೀಡಿದೆ. ಸಮುದಾಯದವರು ಕ್ರಮ ಸಂಖ್ಯೆ 9 ರಲ್ಲಿ ಅರುಂಧತಿಯಾರ್ ಎಂಬ ಮೂಲ ಜಾತಿಗೆ ಸೇರಿದವರೆಂದು ಸಮೀಕ್ಷೆ ನಡೆಸುವ ಸರ್ಕಾರಿ ಅಧಿಕಾರಿಗಳಿಗೆ ಸ್ಪಷ್ಟವಾಗಿ ಹೇಳಿ ಬರೆಸಬೇಕು. ಈ ಸಂದರ್ಭದಲ್ಲಿ ಯಾವುದೇ ಒತ್ತಡಕ್ಕೂ ಮಣಿಯಬಾರದು ಎಂದರು.

ಈ ವಿಷಯವನ್ನು ತಮ್ಮ ತಮ್ಮ ಗ್ರಾಮಗಳಲ್ಲಿ, ಬಡಾವಣೆಗಳಲ್ಲಿ ಅಕ್ಕ ಪಕ್ಕದ ಗ್ರಾಮಗಳು, ಸಂಬಂಧಿಕರಲ್ಲಿ ಪ್ರಚಾರ ಮಾಡುವ ಮೂಲಕ ಅಗತ್ಯಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಮೈಸೂರು ಜಿಲ್ಲೆ ಆದಿ ದ್ರಾವಿಡ ಸಂಘದ ಮಾಜಿ ಅಧ್ಯಕ್ಷರಾದ ಸುಂದರ್, ಸಮುದಾಯದ ಮುಖಂಡರಾದ ಅಂಕನಶೆಟ್ಟಿಪುರ ಶಂಕರ್, ಸೋಮು, ಮಂಡ್ಯ ಜಿಲ್ಲೆಯ ಕರ್ನಾಟಕ ಜನಶಕ್ತಿ ಸಂಘಟನೆಯ ಕಾರ್ಯದರ್ಶಿ ಸಿದ್ದರಾಜು, ಮುಟ್ಟನಪುರ ಎಂ.ಆರ್.ಮಹೇಶ್, ಸುಬ್ರಹ್ಮಣ್ಯ, ಅವನಾಶಿ, ಪಳನಿ, ನಾಗಮಣಿ, ಬಾಬು ಆರ್., ಚಲುವರಾಜು, ಬಿಬಿಕೇರಿ ಶಂಕರ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button