ಇತ್ತೀಚಿನ ಸುದ್ದಿ
Trending

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಜ್ಯೋತಿಲಕ್ಷ್ಮಿ ಬಿ.ವೈ.ಬಾಬು ಅವರ ಅಧ್ಯಕ್ಷತೆ ತುರ್ತು ಸಭೆ ನಡೆಯಿತು.

ಪಾಂಡವಪುರ : ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಜ್ಯೋತಿಲಕ್ಷ್ಮಿ ಬಿ.ವೈ.ಬಾಬು ಅವರ ಅಧ್ಯಕ್ಷತೆ ತುರ್ತು ಸಭೆ ನಡೆಯಿತು.ಸಭೆ ಪ್ರಾರಂಭಕ್ಕೂ ಮುನ್ನ ಪಹಲ್ಗಾಮ್ ದಾಳಿಯಲ್ಲಿ ಮಡಿದ ಭಾರತೀಯ ಪ್ರವಾಸಿಗರು ಹಾಗೂ ಪಾಕಿಸ್ತಾನ್ ವಿರುದ್ಧ ನಡೆದ ಆಪರೇಷನ್ ‘ಸಿಂಧೂರ’ ಕಾರ್ಯಾಚರಣೆಯಲ್ಲಿ ಮಡಿದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಈ ವೇಳೆ ಸದಸ್ಯ ಪಾರ್ಥಸಾರಥಿ ಮಾತನಾಡಿ, ಪಾಕಿಸ್ತಾನ ಪರ ಮಾತನಾಡುವ ಹಾಗೂ ದೇಶ ವಿರೋಧಿ ಚಟುವಟಿಕೆ ನಡೆಸುವವರಿಗೆ ಸರ್ಕಾರದ ಸೌಲಭ್ಯ ಸ್ಥಗಿತಗೊಳಿಸುವ ಜತೆಗೆ ಮತದಾನದ ಹಕ್ಕು ಹಾಗೂ ಭಾರತದ ಪೌರತ್ವವನ್ನು ರದ್ದುಪಡಿಸಬೇಕು ಎಂದರು.

ಬಳಿಕ ನಡೆದ ತುರ್ತುಸಭೆಯಲ್ಲಿ 2025-26ನೇ ಸಾಲಿಗೆ ಎಸ್ ಎಫ್ ಸಿ ಮುಕ್ತ ನಿಧಿಯಲ್ಲಿ ಬಂಡವಾಳ ಆಸ್ತಿಗಳ ಸೃಜನೆಗಾಗಿ ಹಂಚಿಕೆಯಾಗಿರುವ 5 ಲಕ್ಷ ರೂ. ಮೊತ್ತದಲ್ಲಿ ಉಳಿಕೆ 3.04 ಲಕ್ಷ ರೂ.ಗಳನ್ನು ಬೀರಶೆಟ್ಟಹಳ್ಳಿ ಸ್ಮಶಾನ ಹಾಗೂ ಶಾಂತಿನಗರ ಹಿಂದೂಗಳ ಸ್ಮಶಾನಗಳ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳುವ ಸಂಬಂಧ ಲೈಟಿಂಗ್ಸ್ ಹಾಗೂ ನೀರಿನ ವ್ಯವಸ್ಥೆ ಮಾಡಬೇಕು. ಅದಕ್ಕೆ ಸದಸ್ಯ ಆರ್.ಸೋಮಶೇಖರ್ ಪ್ರತಿಕ್ರಿಯಿಸಿ ಎರಡು ಸ್ಮಶಾನಗಳಲ್ಲಿ ರಸ್ತೆ ನಿರ್ಮಾಣಕ್ಕೆ ಈ‌ ಅನುದಾನ ಬಳಸಿ ಎಂದರು. ಜತೆಗೆ 59.80 ಲಕ್ಷ ರೂ.ಗಳ ಅನುದಾನದಲ್ಲಿ ಸ್ಮಶಾನಗಳ ಅಭಿವೃದ್ಧಿಗೆ 10 ಲಕ್ಷ ಬಳಸಿಕೊಳ್ಳಿ ಎಂದರು.

ಸಭೆಯಲ್ಲಿ 4 ಪ್ರಮುಖ ವಿಷಯಗಳ ಬಗ್ಗೆ ಸದಸ್ಯರು ವಿಸ್ತೃತ ಚರ್ಚೆ ನಡೆಸಿದರು.23 ವಾರ್ಡ್ ಸದ್ಯರಿಗೆ ಅನುದಾನ ಹಂಚಿಕೆ ವಿಚಾರದಲ್ಲಿ ಸರ್ಕಾರದ ನಾಮಿನಿ ಸದಸ್ಯರಿಗೂ ಅನುದಾನ ಹಂಚಿಕೆ ಮಾಡಿ ಎಂದ ಸರ್ಕಾರದ ನಾಮಿನಿ ಸದಸ್ಯ ಹಾರೋಹಳ್ಳಿ ಲಕ್ಷ್ಮೇಗೌಡ ಹಾಗೂ ರೈತಸಂಘದ ಸದಸ್ಯ ಪಾರ್ಥಸಾರಥಿ ಅವರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.

ಹಿಂದಿನ‌ ಸಿಒ ವಿರುದ್ಧ ಕ್ರಮಕ್ಕೆ ಆಗ್ರಹ : ಈ ಮಧ್ಯೆ ಜೆಡಿಎಸ್ ಸದಸ್ಯ ಯಶವಂತ್ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ ಭೂ ಪರಿವರ್ತನೆ ಶುಲ್ಕವನ್ನು (ಅನ್ಯ ಕ್ರಾಂತ) ಗುಂಟೆಯೊಂದಕ್ಕೆ 10ಸಾವಿರದಿಂದ 25ಸಾವಿರಕ್ಕೆ ಹೆಚ್ಚಿಸಲು ಸಾಮಾನ್ಯ ಸಭೆಯಲ್ಲಿ ಈ ಹಿಂದೆ ಕೈಗೊಂಡರೂ ಹಿಂದಿನ ಮುಖ್ಯಾಧಿಕಾರಿ ವೀಣಾ ಹಳೆ ದರ ಪಾವತಿ ಮಾಡಿಸುವ ಮೂಲಕ ಪುರಸಭೆಗೆ ಲಕ್ಷಾಂತರ ರೂ. ನಷ್ಟವನ್ನುಂಟು ಮಾಡಿದ್ದಾರೆ. ಈ ಹಣದಿಂದ ವಾಟರ್ ಮನ್ ಹಾಗೂ ಪೌರ ಕಾರ್ಮಿಕರ ಸಂಬಳ ಪಾವತಿ ಮಾಡುವ ಜತೆಗೆ ಕೆಟ್ಟು ನಿಂತಿರುವ ಪುರಸಭೆ ವಾಹನಗಳ ದುರಸ್ತಿಗೆ ಕ್ರಮ ವಹಿಸಬಹುದಿತ್ತು. ಹೀಗಾಗಿ ವೀಣಾ ಅವರ ಮೇಲೆ ಸೂಕ್ತ ಕ್ರಮಕ್ಕಾಗಿ ಈ ಹಿಂದಿನ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದರೂ ಕ್ರಮವಾಗಿಲ್ಲ. ಅವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದರಲ್ಲದೇ ಆ ಸಭೆಯ ನಿರ್ಣಯವನ್ನು ಸಭೆಗೆ ಮಂಡಿಸಬೇಕು ಎಂದು‌ ಒತ್ತಾಯಿಸಿದರು. ಜತೆಗೆ ತಿಂಗಳಿಗೊಮ್ಮೆ ಸಾಮಾನ್ಯ ಸಭೆ ಕರೆಯುವ‌ ಬದಲಿಗೆ ಇಂದಿನ ತುರ್ತು ಸಭೆಯ ಅವಶ್ಯಕತೆ ಇತ್ತೆ ಎಂದು‌ ಪ್ರಶ್ನಿಸಿದರು.

ಸದಸ್ಯ ಚಂದ್ರು ಮಾತನಾಡಿ, ಪಾಂಡವಪುರ ವ್ಯಾಪ್ತಿಯಲ್ಲಿ 23ವಾರ್ಡ್ ಗಳಲ್ಲಿಯೂ ಪ್ರಭಾವಿ ಸದಸ್ಯರು ಸೇರಿದಂತೆ ಇತರೆ ಪ್ರಭಾವಿಗಳ ಒತ್ತಡಕ್ಕೆ ಮಣಿಯದೆ ಪುರಸಭೆ ಆಸ್ತಿ ತೆರವುಗೊಳಿಸಿ ಹದ್ದುಬಸ್ತ್ ಗುರುತಿಸಿ ಬೋರ್ಡ್ ಹಾಕಬೇಕು. ಇದಕ್ಕೆ ನಾವು ಸಹಕಾರ ನೀಡುತ್ತೇವೆ ಎಂದರು.

ಸಭೆಯಲ್ಲಿ ಸದಸ್ಯರಾದ ಎಂ.ಗಿರೀಶ್,ಆರ್.ಸೋಮಶೇಖರ್, ಶಿವಕುಮಾರ್, ಜಯಲಕ್ಷ್ಮಿ, ಖಮರುನ್ನಿಸ್ಸಾ, ಗೀತಾ, ನಾಮಿನಿ ಸದಸ್ಯರಾದ ಎಂ.ಮುರಳೀಧರ್, ಪಾಪು, ಲಕ್ಷ್ಮೇಗೌಡ, ಪಟೇಲ್ ರಮೇಶ್, ಮುಖ್ಯಾಧಿಕಾರಿ ಸತೀಶ್ ಕುಮಾರ್ ಇತರರಿದ್ದರು.

Related Articles

Leave a Reply

Your email address will not be published. Required fields are marked *

Back to top button