ನಗರಸಭೆ
Trending

ನೀರಾವರಿ ಯೋಜನೆಗಳ ಅಭಿವೃದ್ಧಿಗೆ ಹೆಚ್ಚಿನ ಶ್ರಮ ಶಾಸಕ ಕೆ.ಎಂ ಉದಯ್

ತಾಲೂಕಿನ ಕೆರೆಗಳ ಸಮಗ್ರ ಅಭಿವೃದ್ಧಿ ಮಾಡಿ, ನೀರು ತುಂಬಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು ರೈತರ ಬೆಳೆಗಳ ಉಳಿಸಿ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಲಿದೆ ಈ ನಿಟ್ಟಿನಲ್ಲಿ ಮದ್ದೂರು ತಾಲೋಕಿನಲ್ಲಿನ ನೀರಾವರಿ ಯೋಜನೆಗಳ ಅಭಿವೃದ್ಧಿಗೆ ಹೆಚ್ಚಿನ ಶ್ರಮವನ್ನು ವಹಿಸಲಾಗುವುದು ಎಂದು ಶಾಸಕ ಕದಲೂರು ಉದಯ್ ತಿಳಿಸಿದರು.

ಭಾರತಿನಗರ ಸಮೀಪದ ಕೂಳಗೆರೆ ಏತ ನೀರಾವರಿ ಬಿ ಬಿಂದುವಿನ ಉನ್ನತೀಕರಣ ಮತ್ತು ಪುನರುಜ್ಜೀವನಗೊಳಿಸುವ ಕಾಮಗಾರಿ ಉದ್ಘಾಟನೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು

ಗ್ರಾಮೀಣ ಪ್ರದೇಶಗಳಲ್ಲಿ ಮಳೆ ಹಾಗೂ ಕಾಲುವೆ ನೀರಾವರಿಗಳಿಂದ ಕೆರೆಗಳಿಗೆ ನೀರು ತುಂಬುವುದರಿಂದ ಅಂತರ್ಜಲ ವೃದ್ಧಿಯಾಗಿ ರೈತರ ಬೋರ್‌ವೆಲ್‌ಗಳಲ್ಲಿ ಹೆಚ್ಚು ವೃದ್ಧಿಸಲಿದ್ದು ಉತ್ತಮ ಬೆಳೆದು ಹೆಚ್ಚಿನ ಆದಾಯಪಡೆಯಲು ವರದಾನವಾಗಲಿದೆ ಎಂದು ತಿಳಿಸಿದರು.

ಶಿಂಪಾ ನದಿ ತೀರದ ಕೂಳಗೆರೆ ಯಿಂದ ಮಲ್ಲನಕುಪ್ಪೆ ವರೆಗೆ ಮಳೆ ಹಾಗೂ ಬೋರ್ ವೆಲ್ ಆಶ್ರಿತ ಪ್ರದೇಶವಾಗಿರುವುದರಿಂದ ಈ ಭಾಗದ ಕೆರೆಗಳ ಅಭಿವೃದ್ಧಿ ಹಾಗೂ ನೀರು ತುಂಬಿಸುವ ಮೂಲಕ ಅಂತರ್ಜಲ ಹೆಚ್ಚಿಸುವ ಜತೆಗೆ ಮುಂದೆ ಈ ಭಾಗದಲ್ಲಿ ಎಂದಿಗೂ ಕುಡಿಯಲು ಮತ್ತು ಬೇಸಾಯ ಮಾಡಲು ನೀರಿಗೆ ತೊಂದರೆಯಾಗದಂತೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ಬೇಸಿಗೆ ಆರಂಭವಾಗುತಿದ್ದು ನೀರಿನ ಭವಣೆ ನೀಗಿಸಲು ಈಗಾಗಲೇ ಅಧಿಕಾರಿಗಳ ಜತೆಯಲ್ಲಿ ಹಲವಾರು ಬಾರಿ ಸಭೆ ನಡೆಸಿ ಚರ್ಚಿಸಲಾಗಿದ್ದು, ಶಾಶ್ವತವಾಗಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಕೂಳಗೆರೆ ಏತ ನೀರಾವರಿಗೆ ೧೯೭೭ರಲ್ಲಿ ಚಾಲನೆ ಆಗಿತ್ತು. ಆದರೆ ಅಲ್ಲಿಂದ ಇಲ್ಲಿಯವರೆಗೆ ರೈತರಿಗೆ ಈ ಯೋಜನೆಯಿಂದ ಸಮರ್ಪಕವಾಗಿ ಅನುಕೂಲವಾಗುತ್ತಿರಲಿಲ್ಲ. ಈ ಬಗ್ಗೆ ಗ್ರಾಮಸ್ಥರು ನನ್ನ ಗಮನಕ್ಕೆ ತಂದ ಕಾರಣ ಯೋಜನೆಗೆ ಎರಡೂವರೆ ಕೋಟಿ ರೂ ವೆಚ್ಚದಲ್ಲಿ ಪುನರುಜ್ಜೀವನ ಗೊಳಿಸಿ ಸುಮಾರು ೨೧೦೦ ಎಕೆರೆ ಜಮೀನಿಗೆ ನೀರುಣಿಸುವ ಕಾಮಗಾರಿ ಆಗಿದ್ದು ಇದರ ಉಪಯೋಗವನ್ನು ರೈತರು ಸಮರ್ಪಕವಾಗಿ ಉಪಯೋಗಿಸಿಕೊಂಡು ಆರ್ಥಿಕವಾಗಿ ಸಧೃಡವಾಗಬಹುದೆಂದು ವಿಶ್ವಾಸ ವ್ಯಕ್ತಪಡಿಸಿದರು.ಕೆಆರ್‌ಎಸ್ ಕೊನೆಯ ಭಾಗವಾದ್ದರಿಂದ ಕೊಳವೆ ಬಾವಿ ಮತ್ತು ಮಳೆ ಆಶ್ರಿತ ವ್ಯವಸಾಯ ಮಾಡುತ್ತಿದ್ದು, ಇಪ್ಪತ್ತು ವರ್ಷಗಳಿಂದ ಕೆಟ್ಟುನಿಂತ ಏತ ನೀರಾವರಿ ಪುನರುಜ್ಜೀವನ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಬನ್ನಹಳ್ಳಿ ಏತ ನೀರಾವರಿ ಯೋಜನೆ ಸಹ ಕೆಲವೇ ದಿನಗಳಲ್ಲಿ ಉದ್ಘಾಟನೆ ಮಾಡುವ ಬಗ್ಗೆ ಭರವಸೆ ನೀಡಿದರು.

ಕೆರೆಗಳು ತುಂಬುವುದರಿಂದ ಅಂತರ್ಜಾಲ ಹೆಚ್ಚಾಗಿ ರೈತರಿಗೆ ಅನುಕೂಲ ವಾಗಲಿದ್ದು ಮುಂದಿನ ಮುಂಗಾರು ಮಳೆ ವೇಳೆಗೆ ಎಲ್ಲಾ ಕೆರೆ ತುಂಬಿಸುವ ಕಾರ್ಯ ಯಶಸ್ವಿಯಾಗಿ ಆಗಲಿದೆ, ಪಕ್ಕದ ಚನ್ನಪಟ್ಟಣ ತಾಲೂಕಿನಿಂದ ಮದ್ದೂರು ತಾಲೂಕಿನ ಕೆರೆಗಳು ಸಹ ನೀರು ತುಂಬಿಸುವ ಮೂಲಕ ಅನುಕೂಲ ಕಲ್ಪಿಸಲಾಗುವುದು ಎಂದರು.

ಇದೆ ಸಂದರ್ಭದಲ್ಲಿ ಮನ್‌ಮುಲ್ ನಿರ್ದೇಶಕ ಹರೀಶ್ ಬಾಬು, ಮದ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ. ಚಲುವರಾಜು, ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರಾದ ಮೋಹನ್, ನವೀನ್, ಸಹಾಯಕ ಅಭಿಯಂತರೆ ಚೈತ್ರ, ಪಿಡಿಒ ರಾಜಣ್ಣ, ಮುಖಂಡರಾದ ಶ್ರೀನಿವಾಸ , ಕೃಷ್ಣ, ಜಯರಾಮು, ಕೆಂಪರಾಜು, ಗುತ್ತಿಗೆದಾರ ರಮಣರೆಡ್ಡಿ ಸೇರಿದಂತೆ ಹಲವರು ಮತ್ತಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button