
ಬೆಂಗಳೂರು: ನಿನ್ನೆಯಿಂದ 2025ರ ಸಿಇಟಿ (KCET) ಪರೀಕ್ಷೆಗಳು ಆರಂಭವಾಗಿದ್ದು, ಇಂದು ಮತ್ತು ನಾಳೆ ಕೂಡ ಪರೀಕ್ಷೆಗಳು ನಡೆಯಲಿವೆ. ಆದರೆ ಕೆಇಎ ಎಷ್ಟೇ ರೂಲ್ಸ್ ಮಾಡಿದರೂ ವಿದ್ಯಾರ್ಥಿಗಳದ್ದು (students) ಅದೇ ರಾಗ.. ಅದೇ ಹಾಡು ಎನ್ನುವಂತಾಗಿದೆ. ಮೊದಲ ದಿನವೇ ಸಾಕಷ್ಟು ವಿದ್ಯಾರ್ಥಿಗಳು ರೂಲ್ಸ್ ಬ್ರೇಕ್ ಮಾಡಿದ್ದಾರೆ. ಫುಲ್ ತೋಳು ಶರ್ಟ್, ಮೊಬೈಲ್, ವಾಚ್, ಉಂಗುರ ಧರಿಸಿ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಆಗಮಿಸಿದ್ದರು. ಸಿಬ್ಬಂದಿಗಳು ವಿದ್ಯಾರ್ಥಿಗಳನ್ನ ಪರೀಶೀಲನೆ ಮಾಡುವಷ್ಟರಲ್ಲಿ ಸುಸ್ತಾಗಿ ಹೋಗಿದ್ದಾರೆ.ಇಂಜಿನಿಯರಿಂಗ್, ಕೃಷಿ ವಿಜ್ಞಾನ, ವೆಟರ್ನರಿ, ಫಾರ್ಮಸಿ, ನ್ಯಾಚುರೋಪಥಿ ಮತ್ತು ಯೋಗ ಹಾಗೂ ಬಿ.ಎಸ್ಸಿ ನರ್ಸಿಂಗ್ ಮುಂತಾದ ವೃತ್ತಿಪರ ಕೋರ್ಸ್ಗಳ ಪ್ರವೇಶಾತಿಗೆ ಸಿಇಟಿ ಪರೀಕ್ಷೆ ನಡೆಸಲಾಗಿದೆ. ಇದೇ ಮೊದಲ ಬಾರಿಗೆ ಪೇಸಿಯಲ್ ಎಂಟ್ರಿ ಅಳವಡಿಕೆ ಮಾಡಲಾಗಿದೆ. ನಿನ್ನೆ ಹೊರಭಾಗ ಹಾಗೂ ಗಡಿನಾಡು ಕನ್ನಡಿಗರಿಗಾಗಿ ಕಡ್ಡಾಯ ಕನ್ನಡ ಪರೀಕ್ಷೆ ನಡೆದಿದೆ.
ಒಟ್ಟು ಈ ಬಾರಿ ಸಿಇಟಿ ಪರೀಕ್ಷೆಗೆ 3ಲಕ್ಷದ 31ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದಾರೆ. ಒಟ್ಟು 755 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯನ್ನ ನಡೆಸಲಾಗುತ್ತಿದೆ. ಇಂದು 10:30 ರಿಂದ ಭೌತಶಾಸ್ತ್ರ ಹಾಗೂ ಮಧ್ಯಾಹ್ನ 2:30 ರಿಂದ ರಾಸಾಯನಶಾಸ್ತ್ರ, ಏಪ್ರೀಲ್ 17 ರಂದು ಬೆಳ್ಳಗ್ಗೆ ಗಣಿತ ಮತ್ತು ಮಧ್ಯಾಹ್ನ ಜೀವಶಾಸ್ತ್ರ ಪರೀಕ್ಷೆ ನಡೆಯಲ್ಲಿದೆ. ಆದರೆ ಕೆಇಎ ಎಷ್ಟೇ ರೂಲ್ಸ್ ಮಾಡಿದರೂ ವಿದ್ಯಾರ್ಥಿಗಳದ್ದು ಅದೇ ರಾಗ.. ಅದೇ ಹಾಡಾಗಿದೆ.ಏಕೆಂದರೆ ಎಕ್ಸಾಂಗೆ ಸಾಕಷ್ಟು ರೂಲ್ಸ್ ಮಾಡಿದರೂ ರೂಲ್ಸ್ ಬ್ರೇಕ್ ಮಾಡಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಪರೀಕ್ಷಾ ಕೇಂದ್ರಕ್ಕೆ ಫುಲ್ ತೋಳು ಶರ್ಟ್, ಮೊಬೈಲ್, ವಾಚ್, ಉಂಗುರ ಧರಿಸಿ ವಿದ್ಯಾರ್ಥಿಗಳು ಬರುತ್ತಿದ್ದಾರೆ. ವಿದ್ಯಾರ್ಥಿಗಳ ಪರಿಶೀಲನೆ ನಡೆಸಿ ಪರೀಕ್ಷೆ ಹಾಲ್ಗೆ ಕಳಿಸುವುದು ಕೆಇಎ ಅಧಿಕಾರಿಗಳಿಗೆ ದೊಡ್ಡ ತಲೆಬಿಸಿಯಾಗಿದೆ. ಮತ್ತೊಂದೆಡೆ ಕೆಇಎ ಕಠಿಣ ನಿಯಮಕ್ಕೆ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಇನ್ನೂ ಈ ಬಾರಿ ಸಿಇಟಿ ಪರೀಕ್ಷೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಳ್ಳಲಾಗಿದೆ. ವೆಬ್ ಕಾಸ್ಟಿಂಗ್ ಮೂಲಕ ಪರೀಕ್ಷೆ ನಡೆಸಲಾಗುತ್ತಿದೆ. ಜೊತೆಗೆ ಫೇಸ್ ರೆಕಗ್ನೈಸೇಷನ್ ಮೂಲಕ ವಿದ್ಯಾರ್ಥಿಗಳ ಡಿಟೇಲ್ಸ್ ಪರಿಶೀಲಿಸಲಾಗುತ್ತಿದೆ. ಇನ್ನೂ ಪರೀಕ್ಷೆಗೆ ವಸ್ತ್ರ ಸಂಹಿತೆ ಕೂಡ ಜಾರಿ ಮಾಡಲಾಗಿತ್ತು. ಪರೀಕ್ಷೆಗೆ ಬರುವ ವಿದ್ಯಾರ್ಥಿಗಳು ಯಾವುದೇ ರೀತಿ ತುಂಬು ತೋಳಿನ ಶರ್ಟ್, ಜೀನ್ಸ್ ಪ್ಯಾಂಟ್, ಹೆಚ್ಚಿನ ಪ್ಯಾಕೇಟ್ ಇರುವ ಪ್ಯಾಂಟ್ಗಳನ್ನ ಧರಿಸುವಂತಿಲ್ಲ. ಜೊತೆಗೆ ಯಾವುದೇ ರೀತಿ ಮೆಟಲ್ ವಸ್ತುಗಳನ್ನ ಧರಿಸುವಂತಿಲ್ಲ ಎಂದು ಮೊದಲೇ ತಿಳಿಸಲಾಗಿತ್ತು. ಆದರೆ ಮೊದಲ ದಿನವೇ ವಿದ್ಯಾರ್ಥಿಗಳು ರೂಲ್ಸ್ ಬ್ರೇಕ್ ಮಾಡಿದ್ದಾರೆ.
ಪರೀಕ್ಷೆ ಬರೆಯಲು ಬಂದಿದ್ದ ಬಹುತೇಕ ವಿದ್ಯಾರ್ಥಿಗಳು ತುಂಬು ತೋಳಿನ ಶರ್ಟ್, ಜೀನ್ಸ್ ಪ್ಯಾಂಟ್ ಹಾಗೂ ಉಂಗುರ, ಓಲೆ ಸರ ಧರಿಸಿಕೊಂಡು ಬಂದಿದ್ದರು. ಪ್ರತಿಯೊಬ್ಬ ವಿದ್ಯಾರ್ಥಿಗಳನ್ನ ಪರೀಶೀಲಿಸಿ ಪರೀಕ್ಷಾ ಕೊಠಡಿಯೊಳಗೆ ಕಳುಹಿಸುವಷ್ಟರಲ್ಲಿ ಸಿಬ್ಬಂದಿ ನಿಜಕ್ಕೂ ಕೂಡ ಹರಸಾಹಸವನ್ನೇ ಪಟ್ಟರು. ಒಟ್ಟಿನಲ್ಲಿ ಮೊದಲನೇ ದಿನದ ಪರೀಕ್ಷೆ ಸುಸೂತ್ರವಾಗಿ ನಡೆದಿದ್ದು, ಇನ್ನೂ ಎರಡು ದಿನಗಳ ಪರೀಕ್ಷೆ ಇದೆ ರೀತಿ ಕಟ್ಟುನಿಟ್ಟಿನ ಕ್ರಮಗಳಲ್ಲಿ ನಡೆಯಲಿದೆ.