ವಿಧಾನಸಭೆ

ಮಾರ್ಚ್​ 9 ರಂದು ವಿಧಾನಸೌಧ ಸುತ್ತಮುತ್ತ ವಾಹನ ಸಂಚಾರಕ್ಕಿಲ್ಲ ಅವಕಾಶ

ಬೆಂಗಳೂರಿನಲ್ಲಿ ಭಾನುವಾರ ನಡೆಯಲಿರುವ ಕರ್ನಾಟಕ ಪೊಲೀಸ್ ರನ್‌ನ ಎರಡನೇ ಆವೃತ್ತಿಯಿಂದಾಗಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ. ವಿಧಾನಸೌಧದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಪಾರ್ಕಿಂಗ್‌ಗೆ ಅನುಮತಿಸಲಾದ ಸ್ಥಳಗಳು, ನಿರ್ಬಂಧಿಸಲಾದ ಪ್ರದೇಶಗಳ ಮಾಹಿತಿಯನ್ನು ಮತ್ತು ಸುಗಮ ಸಂಚಾರಕ್ಕಾಗಿ ಸೂಚನೆಗಳನ್ನು ಪಾಲಿಸಲು ಸಾರ್ವಜನಿಕರಿಗೆ ಬೆಂಗಳೂರು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಪೊಲೀಸ್ (Karnataka Police) ಇಲಾಖೆಯ ವತಿಯಿಂದ 2ನೇ ಆವೃತ್ತಿಯ ರಾಜ್ಯ ಮಟ್ಟದ ಕರ್ನಾಟಕ ಪೊಲೀಸ್ ರನ್ (Karnataka Police Run) ಕಾರ್ಯಕ್ರಮವನ್ನು ಭಾನುವಾರ (ಮಾ.09) ರಂದು ಬೆಂಗಳೂರಿನಲ್ಲಿ (Bengaluru) ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ.ಕಾರ್ಯಕ್ರಮವು ವಿಧಾಸೌಧ ಮುಂಭಾಗದಲ್ಲಿರುವ ಗ್ರಾಂಡ್ ಸ್ಪಪ್ ಮೆಟ್ಟಿಲುಗಳಿಂದ ಆರಂಭವಾಗಲಿದ್ದು, ಕೆ.ಆರ್ ವೃತ್ತ, ನೃಪತುಂಗರಸ್ತೆ, ಕಸ್ತೂರಬಾ ರಸ್ತೆ, ಸಿದ್ದಲಿಂಗಯ್ಯ ವೃತ್ತ, ಕ್ಲೀನ್ಸ್ ಪ್ರತಿಮೆ ವೃತ್ತ, ಸಿಟಿಒ ಜಂಕ್ಷನ್, ಪೊಲೀಸ್ ತಿಮ್ಮಯ್ಯ ವೃತ್ತದ ಮೂಲಕ ವಿಧಾನಸೌಧವನ್ನು ತಲುಪಲಿದೆ. ಈ ಹಿನ್ನೆಲೆಯಲ್ಲಿ ವಿಧಾನಸೌಧ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ ಎಂದು ಬೆಂಗಳೂರು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

ವಾಹನ ಸಂಚಾರ ನಿರ್ಬಂಧ

  1. ವಿಧಾನಸೌಧದ ಕಡೆಗೆ ಸಂಚರಿಸುವ ವಾಹನಗಳನ್ನು ಕೆ.ಆರ್ ಸರ್ಕಲ್‌ನಲ್ಲಿ ಮಾರ್ಗ ಬದಲಾಯಿಸಿ ಪೊಲೀಸ್‌ ಕಾರ್ನರ್ ಕಡೆಗೆ ಚಲಿಸಲು ಅವಕಾಶ ಕಲ್ಪಿಸಲಾಗಿದೆ ಹಾಗೂ ವಿಧಾನಸೌಧದ ಕಡೆಗೆ ಯಾವುದೇ ವಾಹನಗಳ ಪ್ರವೇಶಕ್ಕೆ ಬೆಳಗ್ಗೆ 06:00 ರಿಂದ 10:00 ಗಂಟೆಯವರೆಗೆ ಅವಕಾಶವಿರುವುದಿಲ್ಲ.
  2. ಬಾಳೇಕುಂದ್ರಿ ವೃತ್ತ ಮತ್ತು ಸಿಟಿಒ ಜಂಕ್ಷನ್‌ನಿಂದ ವಿಧಾನಸೌಧ ಕಡೆಗೆ ಹೋಗುವ ವಾಹನಗಳನ್ನು ಪೊಲೀಸ್ ತಿಮ್ಮಯ್ಯ ಜಂಕ್ಷನ್‌ನಲ್ಲಿ ರಾಜಭವನದ ಕಡೆಗೆ ಹಾಗೂ ಕನ್ನಿಂಗ್ ಹ್ಯಾಮ್ ರಸ್ತೆ ಕಡೆಗೆ ಕಳುಹಿಸಲಾಗುವುದು. ವಿಧಾನಸೌಧ ಕಡೆಗೆ ಯಾವುದೇ ವಾಹನಗಳ ಪ್ರವೇಶಕ್ಕೆ ಬೆಳಗ್ಗೆ 06:00 ರಿಂದ 10:00 ಗಂಟೆಯವರೆಗೆ ಅವಕಾಶವಿರುವುದಿಲ್ಲ.
  3. ಹಳೆ ಮದ್ರಾಸ್ ರಸ್ತೆ ಮತ್ತು ಹಳೆ ವಿಮಾನ ನಿಲ್ದಾಣ ರಸ್ತೆಯ ಕಡೆಗೆ ಹೋಗುವ ವಾಹನಗಳನ್ನು ಪಡ್ಲನ್ ಜಂಕ್ಷನ್‌ನಿಂದ ದೇವಾಂಗ ರಸ್ತೆ, ಶಾಂತಿನಗರ ಮತ್ತು ರಿಚ್ಮಂಡ್​ ವೃತ್ತಕ್ಕೆ ಕಳುಹಿಸಲಾಗುವುದು.

ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿರುವ ಸ್ಥಳಗಳು

  • ನೆಹರು ಪ್ಲಾನೆಟೋರಿಯಮ್ ಅವರಣ
  • ಹೈಕೋರ್ಟ್ ಪಾರ್ಕಿಂಗ್ ಪ್ರದೇಶ
  • ಎಂ.ಎಸ್​ ಬಿಲ್ಡಿಂಗ್ ಸುತ್ತ ಮುತ್ತಲಿನ ಪ್ರದೇಶಗಳು
  • ಸ್ಕೌಟ್​ ಆ್ಯಂಡ್​ ಗೈಡ್​ ಮೈದಾನ, ಅರಮನೆ ರಸ್ತೆ
  • ಶ್ರೀ ಕಂಠೀರದ ಸ್ಟೇಡಿಯಂ ಆವರಣ
  • ಸಾರ್ವಜನಿಕರ ಶಿಕ್ಷಣ ಇಲಾಖೆಯ ಕಟ್ಟಡದ ಅವರಣ
  • ಜ್ಞಾನ ಜ್ಯೋತಿ ಆಡಿಟೋರಿಯಂ ಆವರಣ
  • ಲೋಕೋಪಯೋಗಿ ಇಲಾಖಾ ಕಚೇರಿಯ ಆವರಣ. ಕೆ.ಆರ್. ವೃತ್ತ.
  • ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು ಆವರಣ
  • ಯು.ಬಿ.ಸಿಟಿ (ಪಾವತಿ ಆಧಾರದ ಮೇಲೆ)
  • ಎಂ.ಎಲ್.ಸಿ.ಪಿ. ಪಾರ್ಕಿಂಗ್ ಫ್ರೀಡಂ ಪಾರ್ಕ್ ಹತ್ತಿರ (ಪಾವತಿ ಆಧಾರದ ಮೇಲೆ)
  • ಸರ್ವೇ ಇಲಾಖೆಯ ಕಚೇರಿಯ ಆವರಣ
  • ಬೆಳಕು ಭವನ ಕಛೇರಿಯ ಆವರಣ, ಕೆ.ಆರ್.ಸರ್ಕಲ್
  • ಕೃಷಿ ಇಲಾಖೆ ಕಚೇರಿಯ ಆವರಣ

ವಾಹನ ನಿಲುಗಡೆ ನಿರ್ಬಂಧಿತ ಸ್ಥಳಗಳು

  • ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ
  • ರಾಜಭವನರಸ್ತೆ
  • ನೃಪತುಂಗರಸ್ತೆ
  • ಸ್ಯಾಂಕಿ ರಸ್ತೆ
  • ಕೆಬಿ ರಸ್ತೆ
  • ಎ.ಜಿ ಕಚೇರಿಯಿಂದ ಚಾಲುಕ್ಯ ಜಂಕ್ಷನ್ ವರೆಗೆ
  • ಮ್ಯೂಸಿಯಂ ರಸ್ತೆ.

ಕ್ಯಾಬ್/ಆಟೋ- ಪಿಕಪ್ ಮತ್ತು ಡ್ರಾಪ್ ಆಫ್ ಮಾಡುವ ಸ್ಥಳಗಳು

  • ಸಿ.ಟಿ.ಓ. ಜಂಕ್ಷನ್
  • ಎ.ಜಿ. ಜಂಕ್ಷನ್
  • ಗಾಲ್ಸ್ ರಸ್ತೆ (ಕ್ಯಾಪಿಟಲ್ ಹೋಟೆಲ್ ಮುಂಭಾಗ)
  • ಸಿ.ಐ.ಡಿ. ಜಂಕ್ಷನ್ (ದರ್ಗಾ ಮುಂಭಾಗ)
  • ರೇಸ್‌ಕೋರ್ಸ್ ರಸ್ತೆ

Related Articles

Leave a Reply

Your email address will not be published. Required fields are marked *

Back to top button