ಇತ್ತೀಚಿನ ಸುದ್ದಿ
Trending

ಪತ್ನಿ ಕೊಲೆ ಮಾಡಿ ಸೂಟ್​ಕೇಸ್​ನಲ್ಲಿ ತುಂಬಿದ್ದ ಕೇಸ್

ಬೆಂಗಳೂರು: ಬೆಂಗಳೂರಿನ (Bengaluru) ಹುಳಿಮಾವು ಸಮೀಪದ ದೊಡ್ಡಕಮ್ಮನಹಳ್ಳಿಯ ಗೌರಿ (Gowri) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ರಾಕೇಶ್​ನನ್ನು​ ಆರು ದಿನಗಳ ಕಾಲ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಪತ್ನಿ ಗೌರಿಯನ್ನು ಕೊಲೆ ಮಾಡಿ, ಶವವನ್ನು ಸೂಟ್​ಕೇಸ್​ನಲ್ಲಿ ತುಂಬಿ ಪರಾರಿಯಾಗಲು ಯತ್ನಿಸಿದ್ದ ಪತಿ ರಾಕೇಶ್​ನನ್ನು ಬೆಂಗಳೂರು ಪೊಲೀಸರು ಪುಣೆಯಲ್ಲಿ ಬಂಧಿಸಿ ಕರೆತಂದಿದ್ದಾರೆ. ಆರೋಪಿ ರಾಕೇಶ್​ನನ್ನು 9ನೇ ಎಸಿಜೆಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ ಆರು ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ.ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ಪ್ರಾಥಮಿಕ ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಆರೋಪಿ ರಾಕೇಶ್​ ಹಲವು ವಿಚಾರಾಗಳನ್ನು ಪೊಲೀಸರ ಮುಂದೆ ಬಾಯಿಟ್ಟಿದ್ದಾನೆ. “ ಗೌರಿ ನಡವಳಿಕೆಯಿಂದ ಬೇಸತ್ತು ಕೊಲೆ ಮಾಡಿದ್ದಾಗಿ” ಹೇಳಿದ್ದಾನೆ. ಇಷ್ಟೇ ಅಲ್ಲದೇ, ಆರೋಪಿ ರಾಕೇಶ್​ ಇನ್ನೂ ಹಲವು ವಿಚಾರಗಳನ್ನು ಪೊಲೀಸರ ಮುಂದೆ ಹೇಳಿದ್ದಾನೆ.

“ಗೌರಿ ನನ್ನ ಕುಟುಂಬದ ಜೊತೆಗೆ ಹೊಂದಾಣಿಕೆ ಆಗಲಿಲ್ಲ. ಆಕೆ ಕುಟುಂಬದ ಒಳಗೆ ದಬ್ಬಾಳಿಕೆ ಮಾಡುತ್ತಿದ್ದಳು. ಕುಟುಂಬದ ಯಾವ ಸದಸ್ಯರ ಜೊತೆಗೆ ಹೊಂದಿಕೊಳ್ಳಲಿಲ್ಲಾ. ಬದಲಾಗಿ ಬೆಂಗಳೂರಿಗೆ ಹೋಗುವ, ಅಲ್ಲಿಯೇ ಇಬ್ಬರು ಕೆಲಸ ಮಾಡುವ ಎಂದು ಒತ್ತಾಯ ಮಾಡಿ ಇಲ್ಲಿಗೆ ಕರೆಸಿದಳು. ಒಂದು ತಿಂಗಳಾದರೂ ಆಕೆಗೆ ಕೆಲಸ ಸಿಗಲಿಲ್ಲ. ಕೆಲಸ ಹುಡುಕಲು ಆಕೆಗೆ ಸಹಾಯ ಮಾಡಿದರೂ ನೀನು ನನಗೆ ಕೆಲಸ ಹುಡುಕಲು ಸಹಾಯ ಮಾಡಿಲ್ಲ ಎಂದು ಪದೇ ಪದೇ ಗಲಾಟೆ ಮಾಡುತ್ತಿದ್ದಳು” ಎಂದು ಪತಿ, ಆರೋಪಿ ರಾಕೇಶ್​ ಹೇಳಿದ್ದಾನೆ.

“ನಾನು ಮನೆಯಿಂದಲೇ (Work From Home) ಕೆಲಸ ಮಾಡುತ್ತಿದ್ದ ಕಾರಣ ಗಲಾಟೆ ಮಾಡುತ್ತಿದ್ದಳು. ಆಕೆಯದ್ದೇ ನಡೆಯಬೇಕು ಎನ್ನುವ ರೀತಿಯಲ್ಲಿ ಇದ್ದಳು. ಆ ದಿನ (ಮಾ.26) ರಂದು ಸಹ ಇದೇ ವಿಚಾರಗಳುಗೆ ಜೋರು ಜಗಳಕ್ಕೆ ಕಾರಣವಾದವು. ಈ ವೇಳೆ ಆಕೆ ನನಗೆ ಚಾಕುವಿನಿಂದ ಹೊಡೆದಳು. ಬಳಿಕ ನಾನು ಚಾಕುವಿನಿಂದ ಆಕೆಯ ಕುತ್ತಿಗೆಗೆ ಚುಚ್ಚಿದೆ. ನಾನು ಸೆಲ್ಫ್ ಡಿಫೆನ್ಸ್​ಗಾಗಿ ಕೊಲೆ ಮಾಡಿದೆ. ನಂತರ ಕೃತ್ಯ ಮುಚ್ಚಿಹಾಕಲು ಬ್ಯಾಗ್​ಗೆ ತುಂಬಿದೆ. ಆದರೆ,  ಮೃತದೇಹ ಸಾಗಿಸುವುದು ಕಷ್ಟವಾದ ಕಾರಣ ಅಲ್ಲಿಯೇ ಬಿಟ್ಟು ಹೋದೆ” ಎಂದು ಬಾಯಿಬಿಟ್ಟಿದ್ದಾನೆ.

Related Articles

Leave a Reply

Your email address will not be published. Required fields are marked *

Back to top button