
ವಾಷಿಂಗ್ಟನ್: ಭಾರತ ಮೂಲದ ಅಮೇರಿಕನ್ ಗಗನಯಾತ್ರಿ ಸುನಿತಾ ವಿಲಿಯಮ್ಸ್(Sunita Williams) ಮತ್ತು ಬುಚ್ ವಿಲ್ಮೋರ್ ಬಾಹ್ಯಾಕಾಶದಿಂದ ಹಿಂದಿರುಗಿದ ನಂತರ ಮೊದಲ ಬಾರಿಗೆ ಪತ್ರಿಕಾಗೋಷ್ಠಿ ನಡೆಸಿದರು. ಈ ಸಮಯದಲ್ಲಿ ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣುತ್ತೆ ಎನ್ನುವ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ಬಾಹ್ಯಾಕಾಶದಿಂದ ಹಿಮಾಲಯದ ನೋಟ ಅದ್ಭುತವಾಗಿದೆ . ನಾವು ಹಿಮಾಲಯದ ಮೇಲೆ ಹಾದು ಹೋದಾಗಲೆಲ್ಲಾ ಬುಚ್ ವಿಲ್ಮರ್ ಅವುಗಳ ಅದ್ಭುತ ಛಾಯಾಚಿತ್ರಗಳನ್ನು ತೆಗೆದಿದ್ದಾರೆ ಎಂದು ಸುನಿತಾ ವಿಲಯಮ್ಸ್ ಹೇಳಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಇಬ್ಬರೂ ಗಗನಯಾತ್ರಿಗಳು ಅಧ್ಯಕ್ಷ ಟ್ರಂಪ್ ಮತ್ತು ಎಲಾನ್ ಮಸ್ಕ್ ಅವರಿಗೆ ಧನ್ಯವಾದ ಅರ್ಪಿಸಿದರು. ಹಗಲಿನಲ್ಲಿ ಹಿಮಾಲಯವನ್ನು ನೋಡುವುದು ಅದ್ಭುತವಾಗಿತ್ತು. ಭಾರತದಲ್ಲಿ, ದೊಡ್ಡ ನಗರಗಳಿಂದ ಸಣ್ಣ ಪಟ್ಟಣಗಳವರೆಗೆ, ರಾತ್ರಿಯಲ್ಲಿ ಅದ್ಭುತವಾಗಿ ಕಾಣುವ ದೀಪಗಳನ್ನು ಕಾಣುವುದು ಮತ್ತಷ್ಟು ಸುಂದರವಾಗಿತ್ತು.ಭಾರತವು ಒಂದು ಮಹಾನ್ ದೇಶ ಮತ್ತು ಅದ್ಭುತ ಪ್ರಜಾಪ್ರಭುತ್ವವಾಗಿದ್ದು, ಅದು ಬಾಹ್ಯಾಕಾಶದಲ್ಲಿ ತನ್ನ ಸ್ಥಾನವನ್ನು ಪಡೆಯಲು ಪ್ರಯತ್ನಿಸುತ್ತಿದೆ. ಇದು 2026 ರ ವೇಳೆಗೆ ಗಗನಯಾತ್ರಿಗಳನ್ನು ಕಕ್ಷೆಗೆ ಕಳುಹಿಸಲು ಸಜ್ಜಾಗಿದೆ. ಇದರಲ್ಲಿ ಭಾಗವಾಗುವ ಮೂಲಕ ನಾವು ಭಾರತಕ್ಕೆ ಸಹಾಯ ಮಾಡಲು ಬಯಸುತ್ತೇವೆ. ಶೀಘ್ರ ಭಾರತಕ್ಕೆ ಭೇಟಿ ನೀಡುತ್ತೇನೆ, ಅಲ್ಲಿಯ ಜನರೊಂದಿಗೆ ಸಾಧ್ಯವಾದಷ್ಟು ಅನುಭವವನ್ನು ಹಂಚಿಕೊಳ್ಳುತ್ತೇನೆ ಎಂದು ಸುನಿತಾ ಹೇಳಿದ್ದಾರೆ.
ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ದೀರ್ಘಕಾಲ ಉಳಿಯುವುದರಿಂದ ದೈಹಿಕ ಸವಾಲುಗಳನ್ನು ಎದುರಿಸುತ್ತಾರೆ ಎಂದು ಸುನೀತಾ ವಿಲಿಯಮ್ಸ್ ಹೇಳಿದರು. ಸ್ನಾಯು ದೌರ್ಬಲ್ಯ ಮತ್ತು ಮೂಳೆ ನಷ್ಟವನ್ನು ಕಡಿಮೆ ಮಾಡಲು ತಜ್ಞರ ತಂಡವಿದೆ ಎಂದು ವಿಲ್ಮೋರ್ ವಿವರಿಸಿದರು. ನಾವು ಇರುವ ಕಕ್ಷಯಿಂದ ಅತ್ಯಂತ ರಂಗು ರಂಗಾಗಿ ಭಾರತ ಗೋಚರಿಸುತ್ತದೆ.ಪ್ರಮುಖವಾಗಿ ಗುಜರಾತ್ ಮತ್ತು ಮುಂಬೈನ ಭೂಮಿಗಳು ಅದ್ಭುತವಾಗಿ ಕಾಣುತ್ತವೆ. ದೊಡ್ಡ ದೊಡ್ಡ ಸಿಟಿಗಳು ಪುಟ್ಟ ಪುಟ್ಟ ಹಳ್ಳಿಗಳಂತೆ ಅಲ್ಲಿ ನಮಗೆ ಗೋಚರಿಸುತ್ತವೆ ಎಂದು ಸುನಿತಾ ವಿಲಿಯಮ್ಸ್ ಭಾರತದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.