ಇತ್ತೀಚಿನ ಸುದ್ದಿ
Trending

ಕರವೇ ಪ್ರತಿಭಟನೆ , ಕೆ.ಆರ್.ಪೇಟೆ ಪುರಸಭೆ ವಾಣಿಜ್ಯ ಮಳಿಗೆ ಸೇರಿದಂತೆ ಇತರೆ ಬಾಬುಗಳ ಹರಾಜು ಪ್ರಕ್ರಿಯೆಯನ್ನು ಅನಿರ್ದಿಷ್ಟಾವಧಿಗೆ ಮುಖ್ಯಾಧಿಕಾರಿ ನಟರಾಜ್

ತಾಲೂಕು ಕರವೇ ಕಾರ್ಯಕರ್ತರು ಜಿಲ್ಲಾಧ್ಯಕ್ಷ ಹೊನ್ನೇನಹಳ್ಳಿ ವೇಣು ಅವರ ನೇತೃತ್ವದಲ್ಲಿ ಪುರಸಭೆ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಇಂದು ನಡೆಯಬೇಕಾಗಿದ್ದ ಕೆ.ಆರ್.ಪೇಟೆ ಪುರಸಭೆಯ ವಿವಿಧ ಬಾಬುಗಳ ಬಹಿರಂಗ ಹರಾಜು ಪ್ರಕ್ರಿಯೆಯನ್ನು ಅನಿರ್ದಿಷ್ಟಾವಧಿಗೆ ಮುಖ್ಯಾಧಿಕಾರಿ ನಟರಾಜ್ ಮುಂದೂಡಿದರು.

ಪಟ್ಟಣದಲ್ಲಿ ಪುರಸಭೆ ಮಾಲೀಕತ್ವದ 125ಕ್ಕೂ ಹೆಚ್ಚಿನ ವಾಣಿಜ್ಯ ಮಳಿಗೆಗಳು ಸೇರಿದಂತೆ ವಿವಿಧ ಬಾಬುಗಳ ಹರಾಜುಗಳ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸದೇ ಪುರಸಭೆಯ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ಹಣವನ್ನು ವಂಚಿಸಲಾಗುತ್ತಿದೆ. ಪುರಸಭೆಯ ಎಲ್ಲಾ ಆಡಳಿತ ವ್ಯವಹಾರಗಳು ಪಾರದರ್ಶಕವಾಗಿ ಬಹಿರಂಗವಾಗಿ ನಡೆಯಬೇಕು ದೇಶದ ಎಲ್ಲಾ ನಗರಸಭೆ, ಪುರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಒಂದು ಕಾನೂನಾದರೆ ಕೆ.ಆರ್. ಪೇಟೆಯಲ್ಲಿ ಮಾತ್ರ ಅಂಧಾ ದರ್ಬಾರ್ ನಡೆಯುತ್ತಿದೆ. ಸಂವಿಧಾನ ಬದ್ಧವಾಗಿ

ಬಹಿರಂಗ ಹರಾಜು ನಡೆಸಿ, ಕರಪತ್ರಗಳನ್ನು ಹಂಚಿ, ದಿನಪತ್ರಿಕೆಗಳಲ್ಲಿ ಸಾರ್ವಜನಿಕ ಪ್ರಕಟಣೆ ಹೊರಡಿಸಿ ವಾಣಿಜ್ಯ ಮಳಿಗೆಗಳು ಸೇರಿದಂತೆ ವಿವಿಧ ಬಾಬುಗಳ ಹರಾಜು ಪ್ರಕ್ರಿಯೆ ನಡೆಸಬೇಕು. ಆದರೆ ಕೆ.ಆರ್. ಪೇಟೆ ಪುರಸಭೆಯಲ್ಲಿ ಕಳೆದ 25 ವರ್ಷಗಳಿಂದ ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು ನಡೆಸದೇ ಒಳಗೊಳಗೇ ಲಂಚದ ಹಣ ಪಡೆದುಕೊಂಡು ಪ್ರಸ್ತುತ ಅಂಗಡಿ ಮಳಿಗೆಗಳನ್ನು ಬಾಡಿಗೆಗೆ ಪಡೆದುಕೊಂಡಿರುವ ವರನ್ನೇ ಕಡಿಮೆ ಬಾಡಿಗೆಗೆ ಮುಂದುವರೆಸಲಾಗುತ್ತಿದೆ.ಕಡಿಮೆ ಹಣಕ್ಕೆ ಬಾಡಿಗೆಗೆ ವಾಣಿಜ್ಯ ಮಳಿಗೆಗಳನ್ನು ಪಡೆದುಕೊಂಡಿರುವ ಪ್ರಭಾವಿಗಳು ಮಳಿಗೆಗಳನ್ನು ಸಬ್ ಲೀಸ್ ಮಾಡಿ ಹೆಚ್ಚಿನ ಬಾಡಿಗೆ ಹಣವನ್ನು ತಮ್ಮ ಜೇಬಿಗೆ ಇಳಿಸಿಕೊಂಡು ಪುರಸಭೆಗೆ ವಂಚಿಸುತ್ತಿರು ವುದರಿಂದ ನಟರಾಜ್ ಅವರು ಹರಾಜು ಪ್ರಕ್ರಿಯೆಯನ್ನು ಮುಂದೂಡಬೇಕು ಎಂದು ಕರವೇ ಜಿಲ್ಲಾಧ್ಯಕ್ಷ ವೇಣು ಆಗ್ರಹಿಸಿದಾಗ, ಅಧ್ಯಕ್ಷೆ ಪಂಕಜಾ ಅವರ ನಿರ್ದೇಶನದಂತೆ ಇಂದು ನಿಗಧಿಯಾಗಿದ್ದ ಪುರಸಭೆಯ ಎಲ್ಲಾ ಬಾಬುಗಳ ಹರಾಜು ಪ್ರಕ್ರಿಯೆಯನ್ನು ಅನಿರ್ದಿಷ್ಟಾವಧಿಗೆ ಚೀಫ್ ಆಫೀಸರ್ ನಟರಾಜ್ ಮುಂದೂಡಿದರು.

ಈ ಸಂಧರ್ಭದಲ್ಲಿ ಕರವೇ ತಾಲೂಕು ಘಟಕದ ಅಧ್ಯಕ್ಷ ಟೆಂಪೋ ಶ್ರೀನಿವಾಸ್, ಕರವೇ ಪದವೀಧರ ವಿಭಾಗದ ಜಿಲ್ಲಾ ಉಪಾಧ್ಯಕ್ಷ ಚೇತನ್ ಕುಮಾರ್, ಕರವೇ ಪದಾಧಿಕಾರಿಗಳಾದ ಶಿವಪ್ರಸಾದ್, ಗೋಪಾಲ್, ಕರವೇ ನಗರ ಘಟಕದ ಅಧ್ಯಕ್ಷ ಮದನ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಆರ್. ರವೀಂದ್ರಬಾಬು, ಸದಸ್ಯರಾದ ಡಿ.ಪ್ರೇಮ್ ಕುಮಾರ್, ಕೆ.ಬಿ. ಪ್ರಕಾಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button