Country
Trending

ಇದು ಐತಿಹಾಸಿಕ ಕ್ಷಣ, ಸಂಸತ್ತಿನಲ್ಲಿ ವಕ್ಫ್​ ತಿದ್ದುಪಡಿ ಮಸೂದೆ ಅಂಗೀಕಾರದ ಕುರಿತು ಪ್ರಧಾನಿ ಮೋದಿ ಮೊದಲ ಪ್ರತಿಕ್ರಿಯೆ

ನವದೆಹಲಿ, ಏಪ್ರಿಲ್ 04: ವಕ್ಫ್ ತಿದ್ದುಪಡಿ ಮಸೂದೆಯನ್ನು ಸಂಸತ್ತು ಅಂಗೀಕರಿಸಿದೆ. ಲೋಕಸಭೆಯ ನಂತರ, ವಕ್ಫ್ ತಿದ್ದುಪಡಿ ಮಸೂದೆ(Waqf Amendment Bill) 2025 ಅನ್ನು ರಾಜ್ಯಸಭೆಯಲ್ಲಿಯೂ ಅಂಗೀಕರಿಸಲಾಯಿತು. ಈಗ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ(Narendra Modi)ಯವರ ಮೊದಲ ಪ್ರತಿಕ್ರಿಯೆ ಬಂದಿದೆ. ಪ್ರಧಾನಿ ಮೋದಿ ಇದನ್ನು ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದ್ದಾರೆ.ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಪ್ರಧಾನಿ, ಸಂಸತ್ತಿನ ಎರಡೂ ಸದನಗಳಲ್ಲಿ ವಕ್ಫ್ (ತಿದ್ದುಪಡಿ) ಮಸೂದೆಯ ಅಂಗೀಕಾರವು ಸಾಮಾಜಿಕ-ಆರ್ಥಿಕ ನ್ಯಾಯ, ಪಾರದರ್ಶಕತೆ ಮತ್ತು ಸಮಗ್ರ ಬೆಳವಣಿಗೆಗಾಗಿ ನಮ್ಮ ಸಾಮೂಹಿಕ ಪ್ರಯತ್ನಗಳಲ್ಲಿ ಒಂದು ಐತಿಹಾಸಿಕ ಕ್ಷಣವಾಗಿದೆ. ದೀರ್ಘಕಾಲದವರೆಗೆ ಅಂಚಿನಲ್ಲಿರುವ ಮತ್ತು ಧ್ವನಿ ಮತ್ತು ಅವಕಾಶ ಎರಡರಿಂದಲೂ ವಂಚಿತರಾದವರಿಗೆ ಇದು ವಿಶೇಷವಾಗಿ ಸಹಾಯ ಮಾಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.ಸಂಸದೀಯ ಮತ್ತು ಸಮಿತಿ ಚರ್ಚೆಗಳಲ್ಲಿ ಭಾಗವಹಿಸಿ, ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ, ಈ ಕಾನೂನುಗಳನ್ನು ಬಲಪಡಿಸಲು ಕೊಡುಗೆ ನೀಡಿದ ಎಲ್ಲಾ ಸಂಸದರಿಗೆ ಧನ್ಯವಾದಗಳು. ಸಂಸದೀಯ ಸಮಿತಿಗೆ ತಮ್ಮ ಅಮೂಲ್ಯ ಸಲಹೆಗಳನ್ನು ಕಳುಹಿಸಿದ ಅಸಂಖ್ಯಾತ ಜನರಿಗೆ ವಿಶೇಷ ಧನ್ಯವಾದಗಳು ಎಂದರು.

ರಾಜ್ಯಸಭೆಯಲ್ಲಿ ಮಸೂದೆಯ ಮೇಲಿನ ಚರ್ಚೆ ಪೂರ್ಣಗೊಂಡ ನಂತರ, ತಡರಾತ್ರಿ 2 ಗಂಟೆಯ ನಂತರ ಮತದಾನ ನಡೆಸಲಾಯಿತು. ಈ ಸಮಯದಲ್ಲಿ, ಆಡಳಿತ ಪಕ್ಷವು ಮಸೂದೆಯನ್ನು ಅಂಗೀಕರಿಸುವಲ್ಲಿ ಯಶಸ್ವಿಯಾಯಿತು. ವಕ್ಫ್ ತಿದ್ದುಪಡಿ ಮಸೂದೆಯ ಪರವಾಗಿ 128 ಮತಗಳು ಮತ್ತು ವಿರುದ್ಧವಾಗಿ 95 ಮತಗಳು ಚಲಾವಣೆಯಾದವು.ಈ ರೀತಿಯಾಗಿ, 12 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಚರ್ಚೆಯ ನಂತರ, ರಾಜ್ಯಸಭೆಯು ಬೆಳಗಿನ ಜಾವ 2.32 ಕ್ಕೆ ವಕ್ಫ್ ಮಸೂದೆಯನ್ನು ಅಂಗೀಕರಿಸಿತು. ರಾಜ್ಯಸಭೆಯಲ್ಲಿ ಮಸೂದೆಯ ಪರವಾಗಿ 288 ಮತಗಳು ಚಲಾವಣೆಗೊಂಡರೆ, ವಿರುದ್ಧವಾಗಿ 232 ಮತಗಳು ಚಲಾವಣೆಯಾದವು.ರಾಜ್ಯಸಭೆಯಲ್ಲಿ ನಡೆದ ಚರ್ಚೆಗೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದವು, ಅವರು ಮಸೂದೆಯನ್ನು “ಮುಸ್ಲಿಂ ವಿರೋಧಿ” ಮತ್ತು “ಅಸಂವಿಧಾನಿಕ” ಎಂದು ಕರೆದರು, ಸರ್ಕಾರವು ಐತಿಹಾಸಿಕ ಸುಧಾರಣೆ ಅಲ್ಪಸಂಖ್ಯಾತ ಸಮುದಾಯಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂದು ಪ್ರತಿಕ್ರಿಯಿಸಿತು.

ವಕ್ಫ್​ ಕಾಯ್ದೆ ಎಂದರೇನು? ವಕ್ಫ್ ಎಂದು ಗುರುತಿಸಲಾಗಿರುವ, ದಾನ ಮಾಡಲಾದ ‘ಔಕಾಫ್’ ಆಸ್ತಿಗಳನ್ನು ನಿಯಂತ್ರಿಸಲು ಜಾರಿಗೊಳಿಸಲಾಗಿದ್ದು ಈ ವಕ್ಫ್ ಕಾಯ್ದೆ, 1995. ಈ ಕಾಯ್ದೆಯು “ವಾಕಿಫ್” ಅನ್ನು ಸಹ ಉಲ್ಲೇಖಿಸಿದೆ. ಅಂದರೆ ಮುಸ್ಲಿಂ ಕಾನೂನು ಪುಣ್ಯದ, ಧಾರ್ಮಿಕ ಅಥವಾ ದತ್ತಿ ಎಂದು ಗುರುತಿಸಲ್ಪಟ್ಟ ಯಾವುದೇ ಉದ್ದೇಶಕ್ಕಾಗಿ ಆಸ್ತಿಯನ್ನು ಅರ್ಪಿಸುವ ವ್ಯಕ್ತಿ ಎಂದರ್ಥ. ವಕ್ಫ್ ಕಾಯಿದೆಯನ್ನು 1954ರಲ್ಲಿ ಮೊದಲ ಬಾರಿಗೆ ಜಾರಿಗೆ ತರಲಾಯಿತು. ವಕ್ಫ್‌ನ ನಿರ್ವಹಣೆ ಉದ್ದೇಶಕ್ಕಾಗಿ ವಕ್ಫ್ ಕಾಯಿದೆ, 1954ಯನ್ನು ರಚಿಸಲಾಗಿತ್ತು.

Related Articles

Leave a Reply

Your email address will not be published. Required fields are marked *

Back to top button