ವಿಧಾನಸಭೆ
Trending

ಬಿಜೆಪಿ ಶಾಸಕ ಮುನಿರತ್ನಗೆ ಡಿ.ಕೆ.ಶಿವಕುಮಾರ್ ಕೊಟ್ಟ ಸಲಹೆ

ಬೆಂಗಳೂರು : ನಿರೀಕ್ಷೆಯಂತೆ ಸಹಕಾರ ಸಚಿವ ಕೆ.ಎನ್.ರಾಜಣ್ಣ, ವಿಧಾನಸಭೆಯಲ್ಲೇ ಹನಿಟ್ರ್ಯಾಪ್ ವಿಚಾರ ಪ್ರಸ್ತಾವಿಸಿದ್ದರಿಂದ, ಕಾಂಗ್ರೆಸ್ ಒಳಗೆ ಈ ವಿಚಾರ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಿಜೆಪಿಯ ಶಾಸಕ ಮುನಿರತ್ನಗೆ ಮಹತ್ವದ ಸಲಹೆಯನ್ನು ಕೊಟ್ಟಿದ್ದಾರೆ.ಹನಿಟ್ರ್ಯಾಪ್ ಹಿಂದೆ ಡಿ.ಕೆ.ಶಿವಕುಮಾರ್ ಅವರ ಕೈವಾಡವಿದೆ, ಮಧ್ಯರಾತ್ರಿ ಎರಡು ಗಂಟೆಗೆ ಇವರ ಟೀಂ ಸಭೆಯನ್ನು ಸೇರುತ್ತಾರೆ. ನನ್ನನ್ನು ಈಗಾಗಲೇ ಈ ಬಲೆಗೆ ಬೀಳಿಸಿದ್ದಾರೆ, ಈಗ ನನ್ನನ್ನು ಮುಗಿಸಲು ಸಂಚು ರೂಪಿಸುತ್ತಿದ್ದಾರೆ ಎನ್ನುವ ಗಂಭೀರ ಆರೋಪವನ್ನು ಮುನಿರತ್ನ ಮಾಡಿದ್ದರು.ಇದಕ್ಕೆ ಉತ್ತರವನ್ನು ಕೊಟ್ಟಿರುವ ಡಿಕೆಶಿ, ” ಮಾಧ್ಯಮಗಳ ಮುಂದೆ ಹನಿಟ್ರ್ಯಾಪ್ ವಿಚಾರ ಮಾತನಾಡುವುದಿಲ್ಲ. ಈ ಬಗ್ಗೆ ಪೊಲೀಸರಿಗೆ ದೂರನ್ನು ನೀಡಲಿ, ಸೂಕ್ತವಾದ ತನಿಖೆಯನ್ನು ನಡೆಸುತ್ತೇವೆ. ಮುನಿರತ್ನಗೆ ಚಿಕಿತ್ಸೆಯ ಅವಶ್ಯಕತೆಯಿದೆ ” ಎಂದು ಡಿಸಿಎಂ ಹೇಳಿದ್ದಾರೆ.ರಾಜಣ್ಣ ಅವರು ದೂರು ಕೊಟ್ಟರೆ ಉನ್ನತ ಮಟ್ಟದ ತನಿಖೆ ಮಾಡಿಸಲಾಗುತ್ತದೆ. ರಾಜಣ್ಣ ಅವರು ಯಾರ ಹೆಸರನ್ನೂ ಹೇಳಿಲ್ಲ. ಹೇಳಿದ್ದರೆ ಕ್ರಮ ತೆಗೆದುಕೊಳ್ಳಬಹುದಾಗಿತ್ತು. ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಸದನದಲ್ಲಿ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ.” ಮುನಿರತ್ನ ಅವರಿಗೆ ಏನೋ ಆರೋಗ್ಯ ಸಮಸ್ಯೆ ಇದ್ದಂಗಿದೆ, ಬಿಜೆಪಿಯವರು ಅವರನ್ನು ಎಲ್ಲಾದರೂ ಒಳ್ಳೆಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಿ. ಹಿಟ್ ಎಂಡ್ ರನ್ ರೀತಿಯಲ್ಲಿ ಏನೋ ಒಂದು ಹೇಳಿಕೆಯನ್ನು ನೀಡುವುದಲ್ಲ. ನನಗೆ ಹನಿಟ್ರ್ಯಾಪ್ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ ” ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.ನಿನ್ನೆನೇ ನಾನು ಹೇಳಿದ್ದೆ, ಮೊದಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಬೇಕೆಂದು. ಇಂತದ್ದೆಲ್ಲಾ ಮೊದಲು ನಡೆಯಬೇಕು. ಇದನ್ನೆಲ್ಲಾ ಲೇಟ್ ಮಾಡಬಾರದು, ತನಿಖೆ ಆಗಬೇಕೆಂದು ನಾನೂ ಒತ್ತಾಯ ಮಾಡುತ್ತಿದ್ದೇನೆ. ಮೊದಲು, ಮುನಿರತ್ನ ಚಿಕಿತ್ಸೆ ತೆಗೆದುಕೊಳ್ಳಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.” ನೀವು ಊಹೆ ಮಾಡಿದ್ದಕ್ಕಿಂತ ಹೆಚ್ಚು ದೇವರು ನಿಮ್ಮನ್ನು ಬೆಳೆಸಿದ್ದಾರೆ, 20 ರೂಪಾಯಿ ಕೈಯಲ್ಲಿ ನಿಮ್ಮಲ್ಲಿ ಇಲ್ಲದೇ ಇರುವ ದಿನಗಳಿಂದ ನಿಮ್ಮನ್ನು ನೋಡಿದವನು ನಾನು. ನೀವು ಮತ್ತು ನಾನು ಹತ್ತಿರದಿಂದ ಬದುಕಿರುವವರು, ನನಗೆ ನೀವು ಈ ರೀತಿ ಮಾಡಬಾರದಾಗಿತ್ತು ” ಎಂದು ಮುನಿರತ್ನ ಆರೋಪಿಸಿದ್ದರು.ಮುಖ್ಯಮಂತ್ರಿ ಸ್ಥಾನಕ್ಕೆ ಹೋಗುತ್ತಿರುವವರು ನೀವು, ಕೀಳು ಮಟ್ಟಕ್ಕೆ ಇಳಿಯಬೇಡಿ. ಹನಿಟ್ರ್ಯಾಪ್ ಹಿಂದೆ ನೀವೇ ಇದ್ದೀರಿ, ಕುಟುಂಬವನ್ನು ಹಾಳು ಮಾಡೋಕೆ ಹೋಗಬೇಡಿ. ಸೋತವನ್ನು ಸತ್ತ ಎಂದು ಡಾ.ಪರಮೇಶ್ವರ್ ಅವರಿಗೆ 2013ರಲ್ಲಿ ನೀವು ಹೇಳಿದ್ದೀರಿ ಎಂದು ಮುನಿರತ್ನ, ಡಿಕೆಶಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಸಚಿವರಾದ ಕೆ.ಎನ್.ರಾಜಣ್ಣ ಅವರು ಹನಿಟ್ರ್ಯಾಪ್ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಇದಕ್ಕೆ ಕಾರಣರಾದವರನ್ನು ವಜಾ ಮಾಡಬೇಕು ಹಾಗೂ ಸದನದಲ್ಲಿ ಈ ಬಗ್ಗೆ ಮುಖ್ಯಮಂತ್ರಿಗಳು ಉತ್ತರಿಸಿ ಸದನದ ಮೌಲ್ಯವನ್ನು ಎತ್ತಿಹಿಡಿಯಬೇಕೆಂದು ಹಾಗೂ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಬಿಜೆಪಿ ಸದಸ್ಯರು ಒತ್ತಾಯಿಸಿದ್ದಾರೆ.


Related Articles

Leave a Reply

Your email address will not be published. Required fields are marked *

Back to top button