ಇತ್ತೀಚಿನ ಸುದ್ದಿ
Trending

ಆರಂಭಿಕ ಪಂದ್ಯದಲ್ಲೇ, ಕೆಕೆಆರ್ ವಿರುದ್ದ ಹೊಸ ಮೈಲಿಗಲಿನತ್ತ ’ರನ್ ಮೆಷಿನ್’ ಕೊಹ್ಲಿ ?

ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಮ್ಮ ಮೊದಲ ಐಪಿಎಲ್ 2025 ಕ್ರೀಡಾಕೂಟವನ್ನು ಕೋಲ್ಕತ್ತ ನೈಟ್ ರೈಡರ್ಸ್ ತಂಡದೊಂದಿಗೆ ನಾಳೆ (ಮಾ.22) ಆಡಲಿದೆ. ಇದು ಈ ಪ್ರತಿಷ್ಠಿತ ಕ್ರೀಡಾಕೂಟದ ಮೊದಲ ಪಂದ್ಯವಾಗಿದೆ. ಈ ಪಂದ್ಯ, ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯಲಿದೆ.ರಾಯಲ್ ಚಾಲೆಂಜರ್ಸ್ ತಂಡದ ಪ್ರಮುಖ ಬ್ಯಾಟರ್, ವಿರಾಟ್ ಕೊಹ್ಲಿ ಅವರು ಐಎಪಿಎಲ್ ನಲ್ಲಿ, ಕೆಕೆಆರ್ ವಿರುದ್ಧ 1,000 ರನ್ ಗಳಿಸಿದ ಮೂರನೇ ಬ್ಯಾಟರ್ ಆಗಲಿದ್ದಾರೆ. ಡೇವಿಡ್ ವಾರ್ನರ್ ಮತ್ತು ರೋಹಿತ್ ಶರ್ಮಾ ಈ ಸಾಧನೆ ಮಾಡಿದ ಇತರ ಆಟಗಾರರು.36 ವರ್ಷದ ಕೊಹ್ಲಿ, ವಾರ್ನರ್, ರೋಹಿತ್ ಮತ್ತು ಸುರೇಶ್ ರೈನಾ ನಂತರ KKR ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ನಾಲ್ಕನೇ ಆಟಗಾರರಾಗುವತ್ತ ಸಾಗುತ್ತಿದ್ದಾರೆ. ಆರಂಭಿಕ ಪಂದ್ಯದಲ್ಲಿ ಈ ಮೈಲಿಗಲ್ಲು ತಲುಪಲು ವಿರಾಟ್ ಕೊಹ್ಲಿಗೆ ಉತ್ತಮ ಅವಕಾಶವಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ 8,004 ರನ್ (252 ಪಂದ್ಯ) ಗಳಿಸುವ ಮೂಲಕ, ಇತಿಹಾಸದಲ್ಲಿ ಇದುವರೆಗೆ ಅತಿಹೆಚ್ಚು ರನ್ ಗಳಿಸಿದ ಆಟಗಾರ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ.ಈಗಾಗಲೇ ಮೂರು ತಂಡಗಳ ವಿರುದ್ದ (ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್) ಸಾವಿರ ರನ್ ಅನ್ನು ಕೊಹ್ಲಿ ಗಳಿಸಿದ್ದಾಗಿದೆ. ಈಗ, ಕೋಲ್ಕತ್ತಾ ತಂಡದ ವಿರುದ್ದವೂ ಈ ಮೈಲಿಗಲ್ಲು ತಲುಪಲು ವಿರಾಟ್ ಕೊಹ್ಲಿಗೆ ಅವಕಾಶವಿದೆ.ಈಡನ್ ಗಾರ್ಡನ್ ಮೈದಾನದಲ್ಲಿ ಈಗಾಗಲೇ ನೆಟ್ ಪ್ರಾಕ್ಟೀಸ್ ಆರಂಭಿಸಿರುವ ವಿರಾಟ್ ಕೊಹ್ಲಿ, ನೆಟ್ ನಲ್ಲಿ ನಾಲ್ಕು ಸಿಕ್ಸರ್ ಹೊಡೆದಿದ್ದಾರೆ. ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಜೋಶ್ ಹ್ಯಾಜಲ್‌ವುಡ್ ಅವರ ಬೌಲಿಂಗ್ ಅನ್ನು ಕೊಹ್ಲಿ ಎದುರಿಸಿದ್ದಾರೆ.ತಂಡದ ನಾಯಕ ರಜತ್ ಪಾಟೀದಾರ್ ಆಗಿದ್ದರೂ, ಎಲ್ಲರೊಂದಿಗೆ ಬೆರೆಯುವ ಮೂಲಕ, ತಮ್ಮಲ್ಲಿರುವ ನಾಯಕತ್ವದ ಗುಣಗಳನ್ನು ಮತ್ತೆ ಕೊಹ್ಲಿ ಪ್ರದರ್ಶಿಸಿದ್ದಾರೆ. ಕೊಹ್ಲಿ, ಐದು ಹಂತದ ತರಬೇತಿಯನ್ನು ಮಾಡುತ್ತಿದ್ದಾರೆ. ನೆಟ್ಸ್ ನಲ್ಲಿ ಥ್ರೋಡೌನ್, ಮೂರು ನೆಟ್ಸ್ ನಲ್ಲಿ ಪ್ರಾಕ್ಟೀಸ್ ಮತ್ತು ದೊಡ್ಡ ಹೊಡೆತ ಹೊಡೆಯುವ ತಾಲೀಮನ್ನು ಮಾಡಿದರು.ಆಸ್ಟ್ರೇಲಿಯಾದ ಸ್ಫೋಟಕ ಆರಂಭಿಕ ಆಟಗಾರ ಡೇವಿಡ್ ವಾರ್ನರ್, ಇದುವರೆಗೆ ಕೋಲ್ಕತ್ತಾ ವಿರುದ್ದ 28 ಪಂದ್ಯಗಳನ್ನು ಆಡಿದ್ದಾರೆ. 43.72 ಸರಾಸರಿ ಮತ್ತು 145.15 ಸ್ಟ್ರೈಕ್ ರೇಟ್ ಮೂಲಕ 1093 ರನ್ ಅನ್ನು ಹೊಡೆದಿದ್ದಾರೆ. ಇದಾದ ನಂತರದ ಸರದಿ ರೋಹಿತ್ ಶರ್ಮಾ ಅವರದ್ದು.

ರೋಹಿತ್ ಶರ್ಮಾ, ಕೆಕೆಆರ್ ವಿರುದ್ದ 34 ಪಂದ್ಯಗಳನ್ನು ಆಡಿದ್ದಾರೆ. 40 ಸರಾಸರಿ ಮೂಲಕ 1070 ರನ್ ಅನ್ನು ಹೊಡೆದಿದ್ದಾರೆ. ಇದಾದ ನಂತರ, ವಿರಾಟ್ ಕೊಹ್ಲಿ. ಸರಾಸರಿ 39 ಮತ್ತು ಸ್ಟ್ರೈಕ್ ರೇಟ್ 132.14 ಮೂಲಕ ಇದುವರೆಗೆ 962 ರನ್ ಅನ್ನು ಕೊಹ್ಲಿ ಹೊಡೆದಿದ್ದಾರೆ. ಅವರಿಗೆ 1000 ರನ್ ದಾಟಲು 39 ರನ್ ಬೇಕಿದೆ.ಬೆಂಗಳೂರು ಮತ್ತು ಕೋಲ್ಕತ್ತಾ ತಂಡಗಳ ನಡುವೆ ಇದುವರೆಗೆ 35 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ, ಕೆಕೆಆರ್ 21 ಬಾರಿ ಮತ್ತು ರಾಯಲ್ ಚಾಲೆಂಜರ್ಸ್ 14 ಬಾರಿ ಗೆಲುವನ್ನು ಸಾಧಿಸಿದೆ. ನಾಳೆಯ ಆರಂಭಿಕ ಪಂದ್ಯದಲ್ಲಿ 36ನೇ ಬಾರಿ ಎದುರಾಗಲಿವೆ.


Related Articles

Leave a Reply

Your email address will not be published. Required fields are marked *

Back to top button