ನಗರಸಭೆ
Trending

ಕರ್ನಾಟಕದಲ್ಲಿನ್ನು ಎಲ್‌ಕೆಜಿ, ಯುಕೆಜಿ ಮಕ್ಕಳಿಗೂ ಬಿಸಿಯೂಟ

ಬೆಂಗಳೂರು: ಪ್ರಸ್ತುತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಸೀಮಿತವಾಗಿರುವ ಮಧ್ಯಾಹ್ನದ ಬಿಸಿಯೂಟ ಯೋಜನೆ ಇನ್ಮುಂದೆ ಪೂರ್ವ ಪ್ರಾಥಮಿಕ ಶಾಲೆಗಳಿಗೂ ವಿಸ್ತರಣೆಯಾಗಲಿದೆ. ಮುಂದಿನ ಶೈಕ್ಷಣಿಕ ವರ್ಷದಿಂದಲೇ ಎಲ್‌ಕೆಜಿ, ಯುಕೆಜಿ ಮಕ್ಕಳಿಗೂ ಬಿಸಿಯೂಟ ಸಿಗಲಿದೆ.ಸರಕಾರಿ ಶಾಲೆಗಳಲ್ಲಿಮಕ್ಕಳ ದಾಖಲಾತಿ, ಹಾಜರಾತಿ ಹಾಗೂ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರಕಾರ 2002-03ರಲ್ಲಿಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಮಹತ್ವಾಕಾಂಕ್ಷೆಯ ಮಧ್ಯಾಹ್ನದ ಬಿಸಿಯೂಟ ಯೋಜನೆ ಆರಂಭಿಸಿತು. ನಂತರ ಹಂತ- ಹಂತವಾಗಿ ಅದನ್ನು ಪ್ರೌಢ ಹಾಗೂ ಅನುದಾನಿತ ಶಾಲೆಗಳಿಗೂ ವಿಸ್ತರಿಸಲಾಗಿದೆ. ಪ್ರಸ್ತುತ 1ರಿಂದ 10ನೇ ತರಗತಿ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಈಗ, ಪೂರ್ವ ಪ್ರಾಥಮಿಕ ಶಾಲೆಗಳಿಗೂ ಯೋಜನೆಯನ್ನು ವಿಸ್ತರಿಸುವಂತೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.ರಾಜ್ಯ ಸರಕಾರ ಇತ್ತೀಚೆಗೆ ಆರಂಭಿಸಿರುವ ಎಲ್‌ಕೆಜಿ, ಯುಕೆಜಿ ಶಾಲೆಗಳಿಗೆ ರಾಜ್ಯದಲ್ಲಿಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸದ್ಯ, ಪೂರ್ವ ಪ್ರಾಥಮಿಕ ತರಗತಿಗಳು ಪ್ರಾಥಮಿಕ ಶಾಲೆಗಳಲ್ಲಿಯೇ ನಡೆಯುತ್ತಿದ್ದರೂ, ಆ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಊಟ ಒದಗಿಸಲಾಗುತ್ತಿಲ್ಲ. ಬದಲಿಗೆ ಪ್ರಾಥಮಿಕ ಶಾಲೆ ಮಕ್ಕಳು ಪುಟಾಣಿಗಳೊಂದಿಗೆ ಊಟ ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ, ಎಲ್‌ಕೆಜಿ- ಯುಕೆಜಿ ಮಕ್ಕಳಿಗೂ ಬಿಸಿಯೂಟ ಒದಗಿಸಬೇಕೆಂಬ ಉದ್ದೇಶ ಸರಕಾರ ಹೊಂದಿದೆ. ಇದಕ್ಕೆ ಕೇಂದ್ರದಿಂದ ಗ್ರೀನ್‌ ಸಿಗ್ನಲ್‌ ದೊರೆತರೆ, ಬರುವ ಶೈಕ್ಷಣಿಕ ವರ್ಷದಿಂದಲೇ ಎಲ್‌ಕೆಜಿ, ಯುಕೆಜಿ ಮಕ್ಕಳಿಗೂ ಬಿಸಿಯೂಟ ಸಿಗಲಿದೆ.

55 ಲಕ್ಷ ವಿದ್ಯಾರ್ಥಿಗಳಿಗೆ ಬಿಸಿಯೂಟ

ಪ್ರಸ್ತುತ ರಾಜ್ಯದಲ್ಲಿರುವ 20,174 ಕಿರಿಯ ಪ್ರಾಥಮಿಕ, 21,739 ಹಿರಿಯ ಪ್ರಾಥಮಿಕ ಹಾಗೂ 4,844 ಸರಕಾರಿ ಪ್ರೌಢ ಶಾಲೆಗಳು ಮತ್ತು 6,320 ಅನುದಾನಿತ ಶಾಲೆಯ 55 ಲಕ್ಷ ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟದ ಪ್ರಯೋಜನೆ ಪಡೆಯುತ್ತಿದ್ದಾರೆ. ಸರಕಾರಿ ಶಾಲೆಗಳ ಪೈಕಿ 1ರಿಂದ 10ನೇ ತರಗತಿಯ 42.92 ಲಕ್ಷ ಮತ್ತು ಅನುದಾನಿತ ಶಾಲೆಯ 12.32 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಿಂದ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳ ಸಂಖ್ಯೆ 2 ಲಕ್ಷಕ್ಕೆ ಹೆಚ್ಚಿಸಲಾಗುತ್ತಿದ್ದು, ಅವರಿಗೂ ಯೋಜನೆ ಪ್ರಯೋಜನ ದೊರೆಯಲಿದೆ.

ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೂ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ವಿಸ್ತರಿಸುವಂತೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮತಿ ದೊರೆತರೆ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಪ್ರಾರಂಭಿಸಲಾಗುವುದು.


ಯೋಜನೆ ಉದ್ದೇಶ

ಶಾಲಾ ಮಕ್ಕಳ ದಾಖಲಾತಿ ಮತ್ತು ಹಾಜರಾತಿ ಹೆಚ್ಚಳ
ಶೈಕ್ಷಣಿಕ ವರ್ಷದ ಮಧ್ಯೆ ಶಾಲೆ ತೊರೆಯದಂತೆ ತಡೆಯುವುದು
ಪೌಷ್ಟಿಕಾಂಶ ಆಹಾರದಿಂದ ಶಾಲಾ ಮಕ್ಕಳ ಆರೋಗ್ಯ ವೃದ್ಧಿ.

2 ಲಕ್ಷ ಮಕ್ಕಳಿಗೆ ಅನುಕೂಲ

ರಾಜ್ಯದಲ್ಲಿಸದ್ಯ 2619 ಸರಕಾರಿ ಪೂರ್ವ ಪ್ರಾಥಮಿಕ ಶಾಲೆಗಳಿದ್ದು, 90,195 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿಶಾಲೆಗಳ ಸಂಖ್ಯೆಯನ್ನು 5 ಸಾವಿರಕ್ಕೆ ಹೆಚ್ಚಿಸಲಾಗುತ್ತಿದ್ದು, ವಿದ್ಯಾರ್ಥಿಗಳ ಸಂಖ್ಯೆ 2 ಲಕ್ಷ ತಲುಪಲಿದೆ. ಈಗಾಗಲೇ ಪ್ರಧಾನ ಮಂತ್ರಿ ಪೋಷಣ್‌ ಯೋಜನೆಯಡಿ ಕೇಂದ್ರ ಸರಕಾರ ಶೇ. 60 ರಷ್ಟು ಅನುದಾನ ಒದಗಿಸುತ್ತಿದ್ದು, ರಾಜ್ಯ ಸರಕಾರದ ಪಾಲು ಶೇ. 40 ರಷ್ಟಿದೆ. ಇದೇ ಮಾದರಿಯಲ್ಲಿಯೋಜನೆ ವಿಸ್ತರಿಸಿ, 5 ಸಾವಿರ ಪೂರ್ವ ಪ್ರಾಥಮಿಕ ಶಾಲೆಗಳ 2 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವಂತೆ ಕೋರಿದೆ.

Related Articles

Leave a Reply

Your email address will not be published. Required fields are marked *

Back to top button