
ಕೊಳ್ಳೇಗಾಲ. 2023-24 ನೇ ಸಾಲಿನ ತಾ.ಪಂ ವಿಕಲಚೇತನರ ಶೇ.5 ರಷ್ಟು ಅನುದಾನದಲ್ಲಿ ಆಯ್ಕೆಯಾಗಿದ್ದ 9 ಮಂದಿ ವಿಕಲಚೇತನ ಫಲಾನುಭವಿಗಳಿಗೆ ಹನೂರು ಶಾಸಕರ ಎಂ. ಆರ್. ಮಂಜುನಾಥ್ ರವರು ಉಚಿತ ಲ್ಯಾಪ್ ಟಾಪ್ ವಿತರಣೆ ಮಾಡಿದರು.ಪಟ್ಟಣದ ತಾ.ಪಂ ಕಚೇರಿಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಫಲಾನುಭವಿಗಳಿಗೆ ಲ್ಯಾಪ್ ಟಾಪ್ ವಿತರಿಸಿ, ಶಾಸಕರು ಮಾತನಾಡಿ ಮಹಿಳೆಯರ ಸಬಲೀಕರಣ ಮತ್ತು ವಿಕಲಚೇತನರ ಸಬಲೀಕರಣಕ್ಕೆ ಸರ್ಕಾರ ಈ ರೀತಿಯ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಅನುದಾನವನ್ನು ಮೀಸಲಿರಿಸಿದ್ದು ಶೇ 5% ಹಣದಲ್ಲಿ ವಿಕಲಚೇತನರಿಗೆ ಅಗತ್ಯ ಪಡೆದುಕೊಳ್ಳಲು ಅವಕಾಶ ಇರುವುದರಿಂದ ಈ ಸಾಲಿನಲ್ಲಿ ಆಯ್ಕೆಯಾದ ಫಲಾನುಭವಿಗಳನ್ನು ವಿತರಿಸಲಾಗಿದೆ ಲ್ಯಾಪ್ ಟಾಪ್ ಗಳನ್ನು ಪಡೆದುಕೊಂಡಿರುವ ಫಲಾನುಭವಿಗಳ ಇದರ ಸದುಪಯೋಗ ಪಡೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಈ ಸಂಧರ್ಭದಲ್ಲಿ ತಹಶಿಲ್ದಾರ್ ಬಸವರಾಜು, ತಾಲ್ಲೂಕು ಪಂಚಾಯತ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಎಂ.ಆರ್.ಡಬ್ಲ್ಯೂ ಕವಿರತ್ನ ಇದ್ದರು.