ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಮೃತಪಟ್ಟ ಮಹಿಳಾ ಕುಟುಂಬಕ್ಕೆ ಪರಿಹಾರ ನೀಡಿ

ಹಾಸನ: ಆರ್ಥಿಕ ಸಂಕಷ್ಟದಿಂದ ಒಂದು ತಿಂಗಳ ಸಾಲದ ಕಂತು ಪಾವತಿ ಮಾಡಲಿಲ್ಲ ಎನ್ನುವ ಕಾರಣಕ್ಕೆ ಮೈಕ್ರೋಫೈನ್ಸಾನ್ ಸಿಬ್ಬಂದಿ ಕೊಟ್ಟ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಆಲೂರು ತಾಲ್ಲೂಕು ಹಳ್ಳಿಯೂರು ಗ್ರಾಮದ ಕೆಂಚಮ್ಮ (೫೦) ಕುಟುಂಬಕ್ಕೆ ಪರಿಹಾರ ನೀಡಬೇಕು ಹಾಗು ಪ್ರಮುಖವಾಗಿ ಕಿರುಕುಳ ನೀಡಿದ ಮೈಕ್ರೋ ಫೈನಾನ್ಸ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷರಾದ ಚೇತನ್ ಶಾಂತಿಗ್ರಾಮ ಅವರು ಆಗ್ರಹಿಸಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್‌ಎಸ್ ಎಂಬ ಮೈಕ್ರೋ ಫೈನಾನ್ಸ್ನಲ್ಲಿ ೨ ಲಕ್ಷ ರೂಪಾಯಿ ಸಾಲ ಪಡೆದಿದ್ದ ಮೃತ ಕೆಂಚಮ್ಮ ಮಹಿಳೆ ಪ್ರತಿ ತಿಂಗಳು ಕಂತಿನ ಹಣ ಮರು ಪಾವತಿ ಮಾಡುತ್ತಿದ್ದರು. ಆದರೆ ಕೆಲವು ಕಾರಣಗಳಿಂದ ಹಣ ಹೊಂದಿಸಲಾಗದೇ ಮಾರ್ಚ್ನ ಹಣ ಕಟ್ಟಲು ಸಾಧ್ಯವಾಗಿರಲಿಲ್ಲ. ಹಣ ಪಾವತಿಸಲು ಸಮಯವಕಾಶ ನೀಡುವಂತೆ ಮಹಿಳೆ ಮನವಿ ಮಾಡಿದ್ದರೂ ಕೇಳದ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಇಂದೇ ಹಣ ಕಟ್ಟುಬೇಕೆಂದು ಮನೆಯ ಬಳಿಯೇ ಕುಳಿತಿದ್ದರು. ಸಾಲ ಕೊಟ್ಟ ಸಂಸ್ಥೆ ಸಿಬ್ಬಂದಿ ಮನೆ ಮುಂದೆ ಕುಳಿತಿದ್ದರಿಂದ ಅವಮಾನವಾಯಿತು ಎನ್ನುವ ಕಾರಣಕ್ಕೆ ಮನನೊಂದು ಮನೆಯಲ್ಲಿಯೇ ಮೈಕ್ರೋಫೈನಾನ್ಸ್ ಸಿಬ್ಬಂದಿಗಳ ಕಣ್ಣೆದುರು ಕೆಂಚಮ್ಮ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ನಿಜಕ್ಕೂ ಇದೊಂದು ಅಮಾನವೀಯ ಘಟನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ರಾಜ್ಯ ಸರ್ಕಾರ ಇಂಥ ಮೈಕ್ರೋ ಫೈನಾನ್ಸ್ ಗಳನ್ನು ಮಟ್ಟ ಹಾಕುವ ವಿಚಾರವಾಗಿ ಸಂಬಂಧಪಟ್ಟ ಇಲಾಖೆಗೆ ಹಾಗು ಜಿಲ್ಲಾಡಳಿತಕ್ಕೆ ಮಾರ್ಗದರ್ಶನ ನೀಡಿದಂತೆ ಜಿಲ್ಲಾಧಿಕಾರಿಗಳು ಸಭೆ ನಡೆಸಿ ಜಿಲ್ಲೆಯಲ್ಲಿ ವ್ಯಾಪಕ ಪ್ರಚಾರ ಮಾಡಿಯು ಇಲಾಖೆ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿ ಮೈಕ್ರೋ ಫೈನಾನ್ಸ್ ಗಳಿಗೆ ಎಚ್ಚರಿಕೆ ನೀಡಿದರೂ ಕೂಡ ಆಲೂರಿನ ಕೆಂಚಮ್ಮನ ಸಾವು ನಿಜಕ್ಕೂ ಸಮ ಸಮಾಜ ತಲೆ ತಗ್ಗಿಸುವ ಕೃತ್ಯ. ಈ ಘಟನೆ ಕೇವಲ ಆಲೂರು ತಾಲೂಕು ಅಥವಾ ಜಿಲ್ಲೆಯದಲ್ಲ, ಇದು ರಾಜ್ಯಕ್ಕೆ ಮೈಕ್ರೋ ಫೈನಾನ್ಸ್ ಕಾಟ ದೊಡ್ಡ ಸಮಸ್ಯೆಯಾಗಿದೆ. ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಮೈಕ್ರೋಫೈನಾನ್ಸ್ ವಿಚಾರವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಮೈಕ್ರೋಫೈನಾನ್ಸ್ ಹಾವಳಿಯನ್ನು ತಪ್ಪಿಸಬೇಕೆಂದು ಜಿಲ್ಲೆಯ ಹಾಗೂ ರಾಜ್ಯದ ಬಡ ಜನತೆಗೆ ಮುಕ್ತಿ ದೊರಕಿಸಲೇ ಕೊಡಬೇಕೆಂದು ಮನವಿ ಮಾಡಿದರು.
ಆಲೂರಿನ ಕೆಂಚಮ್ಮ ಸಾವಿನ ವಿಚಾರವಾಗಿ ಹಾಕ್ಕೋತಾಯಗಳು.
- ಮೈಕ್ರೋ ಫೈನಾನ್ಸ್ ಕಾಟಕ್ಕೆ ಮನನೊಂದು ಸಾವಿಗೆ ಶರಣಾದ ಕೆಂಚಮ್ಮ ಕುಟುಂಬಕ್ಕೆ ಸರ್ಕಾರ ಅಥವಾ ಜಿಲ್ಲಾಡಳಿತ ಅವರ ಕುಟುಂಬ ನಿರ್ವಹಣೆ/ ಜೀವನಕ್ಕೆ ನೌಕರಿ ನೀಡಬೇಕು.
- ಸರ್ಕಾರ ಹಾಗೂ ಜಿಲ್ಲಾಡಳಿತ 20 ಲಕ್ಷ ಪರಿಹಾರ ಘೋಷಣೆ ಮಾಡಬೇಕು
- ಮೈಕ್ರೋ ಫೈನಾನ್ಸ್ ರವರಿಂದ ಕಿರುಕುಳದಿಂದ ನಡೆದಿರುವ ಸಾವಿಗೆ ನ್ಯಾಯ ಸಿಗೋವರೆಗೂ ಯಾವುದೇ ಗ್ರಾಮಕ್ಕೆ ಭೇಟಿ ನೀಡಿ ಕಂತು ಪಾವತಿಸುವಂತೆ ಹಿಂಸೆ ನೀಡಬಾರದು ಹಾಗೂ ಹಣ ಕಟ್ಟಿಸಿಕೊಳ್ಳಬಾರದು
- ಇಂಥ ಹೀನ ಸಾವುಗಳಿಗೆ ತಕ್ಷಣಕ್ಕೆ ಜಿಲ್ಲಾಡಳಿತ /ಮೈಕ್ರೋ ಫೈನಾನ್ಸ್ ಅಥವಾ ತಾಲೂಕು ಆಡಳಿತ ಸಾವಿನ ಹಾಗೂ ಆರಾಧನೆ ಕಾರ್ಯದ ಖರ್ಚು ಘೋಷಣೆ ನೀಡಲೇಬೇಕು
- ಮೈಕ್ರೋ ಫೈನಾನ್ಸ್ ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
- ಸಾವಿಗೆ ಸಂಬಂಧಿಸಿದಂತೆ ಮೈಕ್ರೋಫೈನಾನ್ಸ್ ಕ್ರೈಮ್ ನೀಡುವ ಇನ್ಸೂರೆನ್ಸ್ ಹಣ ಆಯಾ ಬಡ ಕುಟುಂಬಕ್ಕೆ ಸೇರಬೇಕು.
- ಮೈಕ್ರೋ ಫೈನಾನ್ಸ್ ವಿರುದ್ಧ ನಿರ್ಧಾಕ್ಷಿಣ್ಯ ಕಠಿಣ ಕ್ರಮ ಆಯಾ ಠಾಣೆಯಲ್ಲಿ ದೂರು ದಾಖಲಿಸಬೇಕು.