ಉದ್ಯಾನ ನಗರಿ ಜನರಿಗೆ ಗುಡ್ ನ್ಯೂಸ್ ಕೊಟ್ಟ ವಿಜ್ಞಾನಿಗಳು

ಬೆಂಗಳೂರು: ಈಗಾಗಲೇ ಬೇಸಿಗೆ ಶುರುವಾಗಿದೆ. ಬೆಳಗ್ಗೆಯಿಂದಲೇ ಸೂರ್ಯ ತನ್ನ ಪ್ರಖರತೆಯನ್ನು ತೋರುತ್ತಿದ್ದಾನೆ. ಸಾಮಾನ್ಯವಾಗಿ ಕರಾವಳಿ ಹಾಗೂ ಹೈದರಾಬಾದ್ ಕರ್ನಾಟಕದ ಭಾಗಗಳು ಬೇಸಿಗೆಯಲ್ಲಿ ಹೆಚ್ಚು ಬಿಸಿಯಾಗಿರುತ್ತವೆ. ಇನ್ನು, ಬಯಲು ಸೀಮೆಯಲ್ಲೂ ಬಿಸಿಲು ಹೆಚ್ಚಾಗಿಯೇ ಇರುತ್ತದೆ. ಆದರೆ, ಬೆಂಗಳೂರಿನ ಕಥೆಯೇನು?ವಿದೇಶಿಗರಿಂದ, ಉತ್ತರ ಭಾರತೀಯರಿಂದ ಹೊಗಳಿಸಿಕೊಳ್ಳುವ ಬೆಂಗಳೂರಿನ ಹವಾಮಾನವಂತೂ ಬೇಸಿಗೆಯಲ್ಲಿ ಇತ್ತೀಚೆಗೆ ತುಂಬಾ ಬಿಗಡಾಯಿಸುತ್ತಿದೆ. ಬೆಂಗಳೂರಿನ ತಾಪಮಾನ ಬೇಸಿಗೆಯಲ್ಲಿ 40 – 43 ಡಿಗ್ರಿವರೆಗೂ ಹೋಗಿದ್ದುಂಟು.ಆದರೆ, ಈ ಬಾರಿ ಹಾಗಾಗಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ಬಾರಿ ಬೇಸಿಗೆಯಲ್ಲಿ ಬೆಂಗಳೂರಿನಲ್ಲಿ ಬಿಸಿಲಿನ ಕಾಟ ಜಾಸ್ತಿ ಇರೋದಿಲ್ಲ. ಬೇಸಿಗೆಯಲ್ಲಿ ಸಹಜವಾಗಿರುವಂಥ ಬಿಸಿಲು ಈ ಬಾರಿ ಬೆಂಗಳೂರಿನಲ್ಲಿರುತ್ತದೆ. 32ರಿಂದ 37 ಡಿಗ್ರಿಯವರೆಗೆ ತಾಪಮಾನ ಇರಬಹುದು. ಆದರೂ, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಐಎಂಡಿ ವಿಜ್ಞಾನಿ ಸಿಎಸ್ ಪಾಟೀಲ್ ತಿಳಿಸಿದ್ದಾರೆ.ಬೇಸಿಗೆಯಾದರೂ ಸುತ್ತಲಿನ ಜಿಲ್ಲೆಗಳಾದ ಮೈಸೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಚಾಮರಾಜನಗರ, ಮಂಡ್ಯ, ತುಮಕೂರು, ಕೊಡಗು ಮುಂತಾದ ಕಡೆಗಳಲ್ಲಿ ಆಗಾಗ ಮಳೆ ಸುರಿಯುತ್ತದೆ. ಅದೇ ಕಾರಣದಿಂದಾಗಿ, ಬೆಂಗಳೂರು ನಗರದಲ್ಲಿ ಬೇಸಿಗೆಯಲ್ಲಿ ಬಿಸಿಲು ಹಾಗೂ ತಾಪಮಾನ ನಿಯಂತ್ರಿತ ಮಟ್ಟದಲ್ಲಿ ಇರುತ್ತದೆ ಎಂದು ವಿಜ್ಞಾನಿ ಪಾಟೀಲ್ ಹೇಳಿದ್ದಾರೆ.
ಕರಾವಳಿಯಲ್ಲಿ ಭಾರೀ ಬಿಸಿ
ರಾಜ್ಯದ ಕರಾವಳಿಯಲ್ಲಿ ನಾಲ್ಕು ಕಡೆ ಅಳೆಯುವ ತಾಪಮಾನಗಳು ಬೆಂಗಳೂರಿನ ಹವಾಮಾನವನ್ನು ನಿರ್ಧರಿಸುತ್ತವೆ ಎಂಬುದು ಅವರ ಅಭಿಪ್ರಾಯ. ಹೊನ್ನಾವರದಲ್ಲಿ ಗರಿಷ್ಟ 34.8 ಡಿಗ್ರಿ, ಕಾರವಾರದಲ್ಲಿ ಗರಿಷ್ಠ 36 ಡಿಗ್ರಿ, ಪಣಂಬೂರಿನಲ್ಲಿ 33.7 ಡಿಗ್ರಿ ಉಷ್ಣಾಂಶ ದಾಖಲಾಗುತ್ತಿದೆ. ಇದೆಲ್ಲವೂ ಇತ್ತೀಚಿನ ದಿನಗಳಲ್ಲಿ ದಾಖಲಾಗಿರುವ ಸರಾಸರಿ ಉಷ್ಣಾಂಶಯ ಹಾಗಾಗಿ, ಕರಾವಳಿಯಲ್ಲಿ ಈ ಬಾರಿ ಭಾರೀ ಈ ಬಾರಿಯ ಬೇಸಿಗೆಯಲ್ಲಿ ಉಷ್ಣಾಂಶ ಹೆಚ್ಚಾಗಿರುತ್ತದೆ ಎಂದು ಅವರು ಹೇಳಿದ್ದಾರೆ.