ಇತ್ತೀಚಿನ ಸುದ್ದಿ
Trending

ಬಿಬಿಎಂಪಿ ಆಸ್ತಿ ತೆರಿಗೆ ಸಂಗ್ರಹ ಬರೋಬ್ಬರಿ ಸಾವಿರ ಕೋಟಿ ರೂ. ಹೆಚ್ಚಳ

ಬೆಂಗಳೂರು, ಏಪ್ರಿಲ್ 14: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಈ ವರ್ಷ ಕಳೆದ ವರ್ಷಕ್ಕಿಂತ ಬರೋಬ್ಬರಿ ಸಾವಿರ ಕೋಟಿ ರೂಪಾಯಿ ಹೆಚ್ಚು ಆಸ್ತಿ ತೆರಿಗೆ (Property Tax Collection) ಸಂಗ್ರಹಿಸಿದೆ. ಆಸ್ತಿ ತೆರಿಗೆ ಸಂಗ್ರಹ ಸಂಬಂಧ ಮಾಹಿತಿ ಬಿಡುಗಡೆ ಮಾಡಿರುವ ಬಿಬಿಎಂಪಿ, ಈ ಬಾರಿ 4,930 ಕೋಟಿ ತೆರಿಗೆ ಸಂಗ್ರಹ ಮಾಡಲಾಗಿದೆ ಎಂದು ತಿಳಿಸಿದೆ. ಈ ಪೈಕಿ ಮಹದೇವಪುರ (Mahadevapur) ಹಾಗೂ ಯಲಹಂಕ ವಲಯಗಳಲ್ಲಿ ನೂರಕ್ಕೆ ನೂರರಷ್ಟು ತೆರಿಗೆ ವಸೂಲಿ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 5 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ತೆರಿಗೆ ಸಂಗ್ರಹದ ಗುರಿಯನ್ನು ಬಿಬಿಎಂಪಿ ಹೊಂದಿತ್ತು.2023-24ನೇ ಸಾಲಿನಲ್ಲಿ ಬಿಬಿಎಂಪಿ 3,918 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹ ಮಾಡಿತ್ತು. ಈ ಬಾರಿ 4,930 ಕೋಟಿ ತೆರಿಗೆ ಸಂಗ್ರಹವಾಗಿದೆ.

ಬಿಬಿಎಂಪಿಯ ಎಂಟು ವಲಯಗಳ ಪೈಕಿ, ಯಲಹಂಕ 464.66 ಕೋಟಿ ರೂ. ಸಂಗ್ರಹಿಸುವ ಮೂಲಕ ಗುರಿಯನ್ನು (445.24 ಕೋಟಿ ರೂ.) ಮೀರಿ ಸಂಗ್ರಸಿದೆ. 1,309.04 ಕೋಟಿ ಗುರಿಯಲ್ಲಿ ಶೇ 100.12 ರಷ್ಟು ಸಾಧಿಸಿ, 1,310.58 ಕೋಟಿ ರೂ. ಸಂಗ್ರಹಿಸುವ ಮೂಲಕ ಮಹದೇವಪುರ ಎರಡನೇ ಸ್ಥಾನದಲ್ಲಿದೆ.ದಕ್ಷಿಣ ವಲಯವು 769.50 ಕೋಟಿ ರೂ. ಗುರಿಯಲ್ಲಿ 733.65 ಕೋಟಿ ರೂ. ಸಂಗ್ರಹಿಸುವ ಮೂಲಕ ಮೂರನೇ ಸ್ಥಾನದಲ್ಲಿದೆ. ಪೂರ್ವ ವಲಯವು ಶೇ 93.52 ರೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ ಮತ್ತು ದಾಸರಹಳ್ಳಿ ಶೇ 92.72 ರೊಂದಿಗೆ ಐದನೇ ಸ್ಥಾನದಲ್ಲಿದೆ. ಪಶ್ಚಿಮ ವಲಯವು ತೆರಿಗೆ ಸಂಗ್ರಹದಲ್ಲಿ ಶೇ 92.17 ಸಾಧಿಸಿದರೆ, ರಾಜರಾಜೇಶ್ವರಿ ನಗರವು 87.89 ರ ಸಾಧನೆ ಮಾಡಿದೆ. 585.11 ಕೋಟಿ ರೂ. ಗುರಿಯಲ್ಲಿ ಕೇವಲ ಶೇ 83.75 ಮಾತ್ರ ಸಂಗ್ರಹ ಮಾಡುವ ಮೂಲಕ ಬೊಮ್ಮನಹಳ್ಳಿ ಅತ್ಯಂತ ಕಡಿಮೆ ತೆರಿಗೆ ಸಂಗ್ರಹಿಸಿದೆ. ಒಟ್ಟಾರೆಯಾಗಿ ಶೇ 94.62 ರಷ್ಟು ತೆರಿಗೆ ಸಂಗ್ರಹವಾಗಿದೆ.

Related Articles

Leave a Reply

Your email address will not be published. Required fields are marked *

Back to top button