ಪಾದಚಾರಿ ಮಾರ್ಗ ಒತ್ತುವರಿ ತೆರವು ಹಾಗೂ ಓ.ಎಫ್.ಸಿ. ಕೇಬಲ್ ತೆರವು ಕಾರ್ಯಾಚರಣೆ: ವಲಯ ಆಯುಕ್ತರಾದ ಶ್ರೀ ಕರೀಗೌಡ ಹಾಗೂ ಶ್ರೀಮತಿ ಪ್ರೀತಿ ಗೆಹ್ಲೋಟ್

ಯಲಹಂಕ ವಲಯ ಆಯುಕ್ತರಾದ ಶ್ರೀ ಕರೀಗೌಡ ಹಾಗೂ ಪೂರ್ವ ವಲಯ ಆಯುಕ್ತರಾದ ಶ್ರೀಮತಿ ಪ್ರೀತಿ ಗೆಹ್ಲೋಟ್ ರವರ ನಿರ್ದೇಶನದಂತೆ ನಗರದ ಯಲಹಂಕ ಮತ್ತು ಪೂರ್ವ ವಲಯಗಳಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಹಾಗೂ ಅನಧಿಕೃತವಾಗಿ ಅಳವಡಿಸಿದ್ದ ಓವರ್ ಹೆಡ್ ಕೇಬಲ್ ಗಳನ್ನು ನಿರಂತರವಾಗಿ ತೆರವುಗೊಳಿಸಲಾಗುತ್ತಿದೆ.
ಅಂಗಡಿ-ಮುಂಗಟ್ಟುಗಳು ಹಾಗೂ ಬೀದಿಬದಿ ವ್ಯಾಪಾರಿಗಳು ಪಾದಚಾರಿ ಮಾರ್ಗವನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವುದು ನಾಗರೀಕರ ಓಡಾಟಕ್ಕೆ ತೊಂದರೆಯಾಗುವುದಲ್ಲದೇ ಅಪಘಾತಗಳು ಉಂಟಾಗುವುದಕ್ಕೂ ಎಡೆಮಾಡಿಕೊಡುವ ಸಂಭವವಿರುತ್ತದೆ.
ಪಾದಚಾರಿ ಒತ್ತುವರಿ ತೆರವು:
ಅದರಂತೆ ಇಂದು ಪೂರ್ವ ವಲಯ ಶಿವಾಜಿನಗರ ವಿಭಾಗದ ಮಿಲ್ಲರ್ ರಸ್ತೆ, ಕಂಟೋನ್ಮೆಂಟ್ ರೈಲ್ವೆ ಕ್ವಾಟರ್ಸ್, ಜಯಮಹಲ್, ತಿಮ್ಮಯ್ಯ ರಸ್ತೆ, ವಸಂತನಗರ ಭಾಗಗಳಲ್ಲಿ ಹಾಗೂ ಶಾಂತಿನಗರ ಉಪ ವಿಭಾಗದ ಲಕ್ಷ್ಮೀ ರಸ್ತೆಯಲ್ಲಿ ರಸ್ತೆಬದಿ ಮತ್ತು ಪಾದಚಾರಿ ಮಾರ್ಗಗಳಲ್ಲಿ ಇಟ್ಟಿರುವ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಲಾಯಿತು.
ಈ ಸಮಯದಲ್ಲಿ ಗ್ಯಾಸ್ ಸಿಲಿಡಂರ್, ಸ್ಟೌವ್, ಟೇಬಲ್ಗಳು, ಹಣ್ಣಿನ ಟ್ರೇಗಳು, ಕಾರ್ಟ್, ವಾಟರ್ ಕ್ಯಾನ್ ಗಳು, ಅಡುಗೆ ಪಾತ್ರೆಗಳು ಸೇರಿದಂತೆ ಇನ್ನಿತರೆ ಸಾಮಗ್ರಿಗಳನ್ನು ಸೀಜ್ ಮಾಡಲಾಯಿತು.

ಯಲಹಂಕ ವಲಯದ ದಾಸರಹಳ್ಳಿ ಮುಖ್ಯ ರಸ್ತೆ, ಬ್ಯಾಟರಾಯನಪುರ, ಬಳ್ಳಾರಿ ರಸ್ತೆ, ಹೆಬ್ಬಾಳ-ಕೆಂಪಾಪುರ, ಆರ್.ಎಂ.ಜಡ್. ಲ್ಯಾಟಿಟ್ಯೂಡ್ ರೆಸಿಡೆನ್ಸಿ ರಸ್ತೆ, ದಾಸರಹಳ್ಳಿ ಕೆಂಪಾಪುರ ಮುಖ್ಯ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸಲಾಯಿತು.
ವಾರ್ಡ್-3 & 4, ಯಲಹಂಕ ನ್ಯೂ ಟೌನ್ ವ್ಯಾಪ್ತಿಯ ಯಲಹಂಕ ಸ್ಯಾಟಲೈಟ್ ಟೌನ್ನಲ್ಲಿಅಳವಡಿಸಲಾಗಿದ್ದ ಬ್ಯಾನರ್ಗಳನ್ನು ಸಹ ತೆರವುಗೊಳಿಸಲಾಯಿತು.
ಓ.ಎಫ್.ಸಿ. ಕೇಬಲ್ ಗಳ ತೆರವು ಕಾರ‍್ಯಾಚರಣೆ:

ಯಲಹಂಕ ವಲಯದ ಬ್ಯಾಟರಾಯನಪುರ ವಿಭಾಗದ ಸಹಕಾರನಗರದ ಮುಖ್ಯ ರಸ್ತೆಗಳಲ್ಲಿ ಸುಮಾರು 2 ಕಿ.ಮೀ. ಗಳಲ್ಲಿ ಮರಗಳ ಮತ್ತು ಕಂಬಗಳ ಮೇಲೆ ಹಾದುಹೋಗಿರುವ ಮತ್ತು ನೇತುಬಿದ್ದಿರುವ ಓ.ಎಫ್.ಸಿ. ಕೇಬಲ್ ತೆರವು ಕಾರ್ಯಾಚರಣೆಯನ್ನು ಕೈಗೊಳ್ಳಲಾಯಿತು.
ಈ ವೇಳೆ ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಹಾಯಕ ಅಭಿಯಂತರರು, ಆರೋಗ್ಯ ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಹಾಜರಿದ್ದರು.