ಇತ್ತೀಚಿನ ಸುದ್ದಿ

ನಗರದಲ್ಲಿ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಕೆಲವೆಡೆ ಸಮಸ್ಯೆ

ಬಿನ್ನಿಪೇಟೆ, ಇಟಿಎ ಮಾಲ್ ಬಳಿ ಕಾಂಪೌಂಡ್ ಗೋಡೆ ತೆರವು ಕಾರ್ಯಾಚರಣೆ:

ಪಶ್ಚಿಮ ವಲಯದ ಪಾರ್ಕ್ ವ್ಯೂವ್ ಅಪಾರ್ಟ್ಮೆಂಟ್ ನ 7 ಅಡಿ ಎತ್ತರದ ಕಾಂಪೌಂಡ್ ಗೋಡೆ, ಸುಮಾರು 10 ಅಡಿ ಅಷ್ಟು ಉದ್ದದ ಗೋಡೆ ಬಿದ್ದಿದ್ದು, ಪಾಲಿಕೆ ಅಧಿಕಾರಿಗಳು ಖುದ್ದು ಸ್ಥಳದಲ್ಲಿದ್ದು, ಅವರ ನೇತೃತ್ವದಲ್ಲಿ ಪಾಲಿಕೆ ಹಾಗೂ ಅಪಾರ್ಟ್ಮೆಂಟ್ ನ ಸಿಬ್ಬಂದಿ ಸೇರಿ ಗೋಡೆಯ ಭಗ್ನಾವಶೇಷಗಳ ತೆರವು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ.

ಇಟಿಎ ಮಾಲ್ ಬಳಿ ಕಾಪೌಂಡ್ ಗೋಡೆ ಕುಸಿದಿರುವಂತಹ ಅವಶೇಷಗಳನ್ನು ಶೀಘ್ರವಾಗಿ ತೆರವುಗೊಳಿಸಿ ದಿಗ್ಬಂದನದಲಿದ್ದ ನಿವಾಸಿಗಳಿಗೆ ಒಡಾಡಲು ಅವಕಾಶ ಮಾಡಿಕೊಡಲಾಗಿದೆ.

ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ ಜಲಾವೃತ:

ಯಲಹಂಕ ವಲಯದ ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ ನ ಸುಮಾರು 50 ಅಡಿ ಕಾಂಪೌಂಡ್ ಗೋಡೆ ಕುಸಿದು ಬಿದ್ದಿರುವ ಕಾರಣ, ಯಲಹಂಕ ಕೆರೆ ಹಾಗೂ ಅಪಾರ್ಟ್ಮೆಂಟ್ ಮಧ್ಯೆಯಿರುವ ಖಾಲಿ ಜಾಗದಲ್ಲಿ ನಿಂತಿದ್ದ ನೀರು ಏಕಾಕಾಕಿ ಅಪಾರ್ಟ್ಮೆಂಟ್ ಒಳಗೆ ನುಗ್ಗಿದೆ. ರಾತ್ರಿ ಸುಮಾರು 4 ಅಡಿ ನೀರು ನಿಂತಿದ್ದು, ಪಾಲಿಕೆಯ ಗ್ಯಾಂಗ್ ಮ್ಯಾನ್ ತಂಡ, ಎಸ್.ಡಿ.ಆರ್.ಆಫ್, ಅಗ್ನಿಶಾಮಕ ತಂಡಗಳು ಸ್ಥಳದಲ್ಲಿದ್ದು, ಪಂಪ್ ಸೆಟ್ ಗಳ ಮೂಲಕ ನೀರು ಹೊರಹಾಕುವ ಕೆಲಸ ಮಾಡಲಾಗುತ್ತಿದೆ. ಸದ್ಯ 1 ಅಡಿ ನೀರು ನಿಂತಿದ್ದು, ನೀರು ಹೊರ ಹಾಕುವ ಕಾರ್ಯ ಸಕ್ರಿಯವಾಗಿ ನಡೆಸಲಾಗುತ್ತಿದೆ.

ಯಲಹಂಕ ಕೆರೆಗೆ ಸುಮಾರು 10 ಕೆರೆಗಳ ನೀರು ಬರಲಿದ್ದು, ಯಲಹಂಕ ಕೆರೆಯಿಂದ ಜಕ್ಕೂರು ಕೆರೆಗೆ ನೀರು ಹೋಗಲಿದೆ. ಕೆರೆ ಭಾಗದಿಂದ 25 ಅಡಿ ಕಳಭಾಗದಲ್ಲಿ ಅಪಾರ್ಟ್ಮೆಂಟ್ ಇರುವ ಕಾರಣ ಹಾಗೂ ಗೋಡೆ ಕುಸಿದಿರುವ ಕಾರಣ ನೀರು ನಿಂತು ಜಲಾವೃತವಾಗಿದೆ.

ಗೋಡೆ ಕುಸಿದಿರುವ ಭಾಗದಲ್ಲಿ ಸ್ಯಾಂಡ್ ಬ್ಯಾಗ್ ಗಳನ್ನು ಅಳವಡಿಸಲಾಗುತ್ತಿದೆ. ಅಪಾರ್ಟ್ಮೆಂಟ್ ನಲ್ಲಿ ವಾಸಿಸುವ ನಿವಾಸಿಗಳಿಗೆ ತಿಂಡಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಸಂಜೆ ವೇಳೆಗೆ ನೀರು ಹೊರ ಹಾಕಿ ತ್ಯಾಜ್ಯವನ್ನು ತೆರವುಗೊಳಿಸುವ ಕಾರ್ಯ ಮಾಡಲಾಗುವುದು.

ಯಲಹಂಕ ವಲಯದ ಎಲ್ಲಾ ಹಿರಿಯ ಅಧಿಕಾರಿಗಳು/ಸಿಬ್ಬಂದಿ ವರ್ಗ ಸ್ಥಳದಲ್ಲಿದ್ದು, ತೆರವು ಕಾರ್ಯ ನಡೆಸುತ್ತಿದ್ದಾರೆ‌.

ವಿಜಯನಗರದ ಮಧುವನದ ಬಳಿ ಮನೆಗೆ ನೀರು ನುಗ್ಗಿರಿವುದು:

ದಕ್ಷಿಣ ವಲಯ ವಿಜಯನಗರದ ಮಧುವನದ ಬಳಿ ರಾಜಕಾಲುವೆಯ ಬಳಿಯಿದ್ದ ಸ್ಯಾನಿಟರಿ ಲೈನ್ ನಲ್ಲಿ ನೀರು ಓವರ್ ಫ್ಲೋ ಆಗಿದ್ದು, ಸುಮಾರು 10 ಮನೆಗಳಿಗೆ ನೀರು ನುಗ್ಗಿರುತ್ತೆ. ಪಾಲಿಕೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಸಮಸ್ಯೆಯನ್ನು ಬಗೆಹರಿಸಲಾಗಿರುತ್ತದೆ.

ಪಾಲಿಕೆ ವ್ಯಾಪ್ತಿಯ ಯಲಹಂಕ ವಲಯ, ಪಶ್ಚಿಮ ವಲಯ ಹಾಗೂ ದಕ್ಷಿಣ ವಲಯವಾದ 3 ವಲಯಗಳಲ್ಲಿ ಮಾತ್ರ ಕೆಲವೆಡೆ ಸಮಸ್ಯೆಯಾಗಿದ್ದು, ಇನ್ನುಳಿದ ವಲಯಗಳಲ್ಲಿ ಯಾವುದೇ ಪ್ರಮುಖ ಸಮಸ್ಯೆಗಳಾಗಿರುವುದಿಲ್ಲ.

Related Articles

Leave a Reply

Your email address will not be published. Required fields are marked *

Back to top button